ETV Bharat / bharat

ಆರ್ ​ಎಸ್ ಭಾರತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ - DEFAMATION CASE AGAINST BHARATI - DEFAMATION CASE AGAINST BHARATI

ಡಿಎಂಕೆಯ ಸಾಂಸ್ಥಿಕ ಕಾರ್ಯದರ್ಶಿ ಆರ್. ಎಸ್ ಭಾರತಿ ವಿರುದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

t-n-bjp-chief-annamalai
ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ (ETV Bharat)
author img

By ETV Bharat Karnataka Team

Published : Jul 10, 2024, 6:21 PM IST

ಚೆನ್ನೈ (ತಮಿಳುನಾಡು) : ಮಾನಹಾನಿ ಪ್ರಕರಣದಲ್ಲಿ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ಅವರನ್ನು ಶೀಘ್ರದಲ್ಲೇ ಜೈಲಿಗೆ ಕಳುಹಿಸುತ್ತೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ.

ಕಳೆದ ತಿಂಗಳು ಕಲ್ಲಕುರಿಚಿಯ ಕರುಣಾಪುರಂ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಜನರು ಕಳ್ಳಭಟ್ಟಿ ಸಾರಾಯಿ ಕುಡಿದು ತೊಂದರೆಗೀಡಾಗಿದ್ದರು. ಇಲ್ಲಿಯವರೆಗೆ 67 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಇಡೀ ತಮಿಳುನಾಡನ್ನು ಬೆಚ್ಚಿಬೀಳಿಸಿತ್ತು. ಇದರ ಬೆನ್ನಲ್ಲೇ ಎಐಎಡಿಎಂಕೆ ಮತ್ತು ಬಿಜೆಪಿ ನಾಯಕರು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪುದುಕೊಟ್ಟೈನಲ್ಲಿ ಪತ್ರಕರ್ತರನ್ನು ಭೇಟಿ ಮಾಡಿದ ಡಿಎಂಕೆಯ ಸಾಂಸ್ಥಿಕ ಕಾರ್ಯದರ್ಶಿ ಆರ್ ಎಸ್ ಭಾರತಿ ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕುರಿತು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಅಂದರೆ, ಕಲ್ಲಕುರಿಚಿ ಕಳ್ಳಭಟ್ಟಿ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಅವರ ಷಡ್ಯಂತ್ರದ ಬಗ್ಗೆ ಅನುಮಾನ ಮೂಡಿದೆ. ವಿಕ್ರವಾಂಡಿ ಉಪಚುನಾವಣೆಗೂ ಇದಕ್ಕೂ ಸಂಬಂಧವಿದೆ. ವಿಕ್ರವಾಂಡಿಯ ಚುನಾವಣೆಗೂ ಮುನ್ನವೇ ಈ ಯೋಜನೆ ರೂಪಿಸಿದ್ದಾರೆ ಎಂಬ ಅನುಮಾನ ನನ್ನಂತಹವರಿಗೆ ಇದೆ ಎಂದಿದ್ದರು.

ಇದೀಗ ಅಣ್ಣಾಮಲೈ ಅವರು ಆರ್ ಎಸ್ ಭಾರತಿ ಮಾತನ್ನು ಖಂಡಿಸಿ ಕ್ಷಮೆ ಯಾಚಿಸಬೇಕು ಅಥವಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆರ್. ಎಸ್ ಭಾರ್ತಿ, ಕ್ಷಮೆ ಕೇಳಲಾರೆ. ಪರಿಹಾರ ನೀಡಲು ಸಾಧ್ಯವಿಲ್ಲ. ಪ್ರಕರಣ ಮುಂದುವರಿದರೆ ಕಾನೂನು ಪ್ರಕಾರ ಎದುರಿಸಲು ಸಿದ್ಧ ಎಂದಿದ್ದಾರೆ.

ಈ ಮಧ್ಯೆ ಅಣ್ಣಾಮಲೈ ಅವರು ಬುಧವಾರ ಚೆನ್ನೈನ ಸೈದಾಪೇಟ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಸುದ್ದಿಗಾರರನ್ನು ಭೇಟಿ ಮಾಡಿದ ಅಣ್ಣಾಮಲೈ, ಎಸ್ ಆರ್ ಭಾರತಿ ಅವರು ಅಣ್ಣಾಮಲೈ ಕಲ್ಲಕುರಿಚಿ ದುರಂತದಲ್ಲಿ ನನ್ನ ಮೇಲೆ ಅಪಪ್ರಚಾರ ಮಾಡಿದ್ದಾರೆ. ಅವರ ಟೀಕೆಗಳು ಬೇಸರ ತರಿಸಿವೆ. ನಾವು ರಾಜಕೀಯ ಬದಲಾವಣೆಗಾಗಿ ಹೋರಾಡುತ್ತಿದ್ದೇವೆ. ಅನೇಕ ದೂಷಣೆಗಳು ಮತ್ತು ಟೀಕೆಗಳನ್ನು ಮಾಡಲಾಯಿತು. ಈಗ ಆರ್​ ಎಸ್ ಭಾರತಿ ಮಿತಿ ಮೀರಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನುಭವಿ ರಾಜಕಾರಣಿಯಾಗಿ, ಡಿಎಂಕೆ ಯುಗವು ಸಂಪೂರ್ಣವಾಗಿ ಮುಗಿದಿದೆ ಎಂದು ಆರ್‌ ಎಸ್ ಭಾರ್ತಿ ಅರಿತುಕೊಂಡಿದ್ದಾರೆ. ಅವರ ಬಾಯಿಂದ ಸುಳ್ಳುಗಳು ಬರಲು ಪ್ರಾರಂಭಿಸಿವೆ. ಹಾಗಾಗಿಯೇ ಕಲ್ಲಕುರಿಚಿ ಸಮಸ್ಯೆಗೆ ನಾನೇ ಹೊಣೆ, ನಾನು ಷಡ್ಯಂತ್ರ ಮಾಡಿದ್ದೇನೆ ಎಂದು ಹೇಳಿದ್ದಾರೆ. ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಇಷ್ಟು ಮೊತ್ತವನ್ನು ಪಡೆದು ಕಲ್ಲಾಕುರಿಚಿಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸುತ್ತೇವೆ ಎಂದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಣ್ಣಾಮಲೈ ಮನವಿ ಸಲ್ಲಿಸಿದ್ದಾರೆ. ಆರ್. ಎಸ್ ಭಾರತಿ ಅವರನ್ನು ಶೀಘ್ರದಲ್ಲೇ ಜೈಲಿಗೆ ಕಳುಹಿಸುತ್ತೇವೆ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್ ಗಾಂಧಿಗೆ​ ಜಾಮೀನು ನೀಡಿದ ಬೆಂಗಳೂರು ಕೋರ್ಟ್​​​​ - Bail To Rahul Gandhi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.