ETV Bharat / bharat

ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪ ಪ್ರಕರಣ: 3 ದಿನ ಪೊಲೀಸ್ ಕಸ್ಟಡಿಗೆ ಆರೋಪಿ ಬಿಭವ್ ಕುಮಾರ್ - SWATI MALIWAL CASE

Swati Maliwal Assault case: ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಬಿಭವ್ ಕುಮಾರ್ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

SWATI MALIWAL ASSAULT CASE
ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪ ಪ್ರಕರಣ (Etv Bharat)
author img

By ETV Bharat Karnataka Team

Published : May 28, 2024, 8:38 PM IST

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪ ಎದುರಿಸಿತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ, ಆರೋಪಿ ಬಿಭವ್ ಕುಮಾರ್ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶಿಸಿದೆ.

ಮೇ 13ರಂದು ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಕ್ಯಾಂಪ್ ಕಚೇರಿಗೆ ಭೇಟಿ ನೀಡಿದಾಗ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 18ರಂದು ಬಿಭವ್‌ ಕುಮಾರ್​ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಂದಿಗೆ ರಿಮಾಂಡ್ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ತೀಸ್ ಹಜಾರಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದರು.

ಈ ವೇಳೆ, 5 ದಿನಗಳ ಕಾಲ ಕಸ್ಟಡಿ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಮತ್ತೊಂದೆಡೆ, ಬಿಭವ್‌ ಕುಮಾರ್ ಪರ ವಕೀಲರು ಪೊಲೀಸರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಕಸ್ಟಡಿ ವಿಚಾರಣೆಯನ್ನು ಬಿಭವ್‌ ಕುಮಾರ್ ಎದುರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪ್ರತಿಪಾದಿಸಿದರು. ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯವು ಕೊನೆಗೆ ಮೂರು ದಿನಗಳ ರಿಮಾಂಡ್​​ಗೆ ನೀಡಿ ಆದೇಶಿಸಿದೆ. ನಿನ್ನೆಯಷ್ಟೇ, ಅಂದರೆ ಮೇ 27ರಂದು ನ್ಯಾಯಾಲಯವು ಬಿಭವ್ ಕುಮಾರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಇದೇ ಪ್ರಕರಣದಲ್ಲಿ ದೆಹಲಿ ಪೊಲೀಸರು ಸ್ವಾತಿ ಮಲಿವಾಲ್ ಅವರ ಹೇಳಿಕೆ ದಾಖಲಿಸಿಕೊಂಡು ಮೇ 16ರಂದು ಎಫ್​ಐಆರ್ ದಾಖಲಿಸಿದ್ದರು. ಬಳಿಕ ಮಲಿವಾಲ್ ಮೇ 17ರಂದು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಈ ಪ್ರಕರಣದ ಸಂಬಂಧ ಸ್ವಾತಿ ಮಲಿವಾಲ್‌ ತಮ್ಮದೇ ಆಮ್‌ ಆದ್ಮಿ ಪಕ್ಷದ ನಾಯಕರು ವಿರುದ್ಧವೂ ಆರೋಪಗಳನ್ನು ಮಾಡಿದ್ದಾರೆ.

ಮತ್ತೊಂದೆಡೆ, ಬಿಭವ್‌ ಕುಮಾರ್‌ ವಿರುದ್ಧ ಮಲಿವಾಲ್‌ ಮಾಡಿರುವ ಈ ಆರೋಪವನ್ನು ಆಮ್‌ ಆದ್ಮಿ ಪಕ್ಷವು ಈಗಾಗಲೇ ಆಧಾರ ರಹಿತ ಎಂದು ತಳ್ಳಿಹಾಕಿದೆ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ಸ್ವಾತಿ ಮಲಿವಾಲ್‌, ಆಮ್‌ ಆದ್ಮಿ ಪಕ್ಷವು ಗೂಂಡಾಗಳ ಒತ್ತಡಕ್ಕೆ ಮಣಿಯುತ್ತಿದೆ. ನನ್ನ ನಡವಳಿಕೆಯನ್ನೇ ಪ್ರಶ್ನಿಸಲಾಗುತ್ತಿದೆ ಎಂದು ದೂರಿದ್ದಾರೆ.

ಆರೋಪಿ ತುಂಬಾ ಶಕ್ತಿಶಾಲಿ ವ್ಯಕ್ತಿ. ದೊಡ್ಡ ದೊಡ್ಡ ನಾಯಕರೂ ಆತನಿಗೆ ಹೆದರುತ್ತಾರೆ. ಆತನ ವಿರುದ್ಧ ನಿಲುವು ತಳೆಯುವ ಧೈರ್ಯ ಯಾರಿಗೂ ಇಲ್ಲ. ನಾನು ಅದನ್ನು ಏಕಾಂಗಿಯಾಗಿ ಎದುರಿಸುತ್ತೇನೆ. ಏಕೆಂದರೆ ಸತ್ಯವು ನನ್ನೊಂದಿಗಿದೆ ಎಂದು ಸ್ವಾತಿ ಮಲಿವಾಲ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನನ್ನ ಮಾನಹಾನಿಗೆ ಯತ್ನ: ಆಪ್​ ವಿರುದ್ಧ ಮತ್ತೆ ಸಿಡಿದ ಸ್ವಾತಿ ಮಲಿವಾಲ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.