ETV Bharat / bharat

ಚುನಾವಣಾ ಕಣಕ್ಕೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್? - Swara Bhaskar - SWARA BHASKAR

ಮುಂಬರುವ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರನ್ನು ಕಣಕ್ಕೆ ಇಳಿಸಲು ಸಮಾಜವಾದಿ ಪಕ್ಷ ಚಿಂತನೆ ನಡೆಸಿದೆ.

Swara Bhaskar
ಸ್ವರಾ ಭಾಸ್ಕರ್ (AINS)
author img

By ETV Bharat Karnataka Team

Published : Jul 9, 2024, 4:12 PM IST

ಮುಂಬೈ (ಮಹಾರಾಷ್ಟ್ರ): ಕಳೆದ ವರ್ಷ ಸಮಾಜವಾದಿ ಪಕ್ಷದ ಮುಖಂಡ ಫಹಾದ್ ಅಹ್ಮದ್​ ಅವರನ್ನು ಮದುವೆಯಾಗಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈಗ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. 2024ರ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಮುಂಬ್ರಾ-ಕಲ್ವಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವರಾ ಭಾಸ್ಕರ್, ಫಹಾದ್ ಅಹ್ಮದ್
ಸ್ವರಾ ಭಾಸ್ಕರ್, ಫಹಾದ್ ಅಹ್ಮದ್ (ETV Bharat)

ಸಮಾಜವಾದಿ ಪಕ್ಷದಿಂದ ನಟಿ ಸ್ವರಾ ಭಾಸ್ಕರ್ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ, ಶಾಸಕ ಅಬು ಅಸಿಂ ಅಜ್ಮಿ ಸುಳಿವು ನೀಡಿದ್ದಾರೆ. ಈ ಕುರಿತು ಸ್ವರಾ ಭಾಸ್ಕರ್ ಪತಿ, ಸಮಾಜವಾದಿ ಪಕ್ಷದ ಯುವ ಘಟಕದ ಅಧ್ಯಕ್ಷರಾದ ಫಹಾದ್ ಅಹ್ಮದ್ ಸಹ ಪ್ರತಿಕ್ರಿಯಿಸಿ, ನನ್ನ ಪತ್ನಿ ಸ್ವರಾ ಸದ್ಯ ರಾಜಕೀಯದಲ್ಲಿ ಇಲ್ಲ. ಹೀಗಾಗಿ ಈಗಲೇ ನಾನು ಏನನ್ನೂ ಹೇಳಲಾರೆ ಎಂದು ಹೇಳಿದ್ದಾರೆ. ಆದರೆ, ನನ್ನ ಪಕ್ಷದ ರಾಜ್ಯಾಧ್ಯಕ್ಷರು ಯಾವ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳುತ್ತಾರೋ ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅದಕ್ಕೆ ನಾನು ಸಂಪೂರ್ಣ ಸಿದ್ಧನಿದ್ದೇನೆ. ಅವರು ನೀಡುವ ಆದೇಶವನ್ನು ನಾನು ಪಾಲಿಸುತ್ತೇನೆ ಎಂದೂ ಫಹಾದ್ ಸ್ಪಷ್ಟಪಡಿಸಿದ್ದಾರೆ.

ಫಹಾದ್ ಅಹ್ಮದ್, ಸ್ವರಾ ಭಾಸ್ಕರ್
ಫಹಾದ್ ಅಹ್ಮದ್, ಸ್ವರಾ ಭಾಸ್ಕರ್ (ETV Bharat)

ಮುಂಬ್ರಾ - ಕಲ್ವಾ ವಿಧಾನಸಭೆ ಕ್ಷೇತ್ರವನ್ನು ಪ್ರಸ್ತುತ ಶರದ್ ಪವಾರ್ ಬಣದ ಎನ್‌ಸಿಪಿ ಪಕ್ಷದ ನಾಯಕ ಜಿತೇಂದ್ರ ಅವದ್ ಪ್ರತಿನಿಧಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಕಾಂಗ್ರೆಸ್​, ಎನ್​​ಸಿಪಿ ಹಾಗೂ ಉದ್ಧವ್​ ಠಾಕ್ರೆ ಬಣದ ಶಿವಸೇನೆ ಜೊತೆಗೂಡಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ರಚಿಸಿಕೊಂಡಿವೆ. ಈ ಮಹಾ ವಿಕಾಸ್ ಅಘಾಡಿಯಲ್ಲಿ ಸಮಾಜವಾದಿ ಪಕ್ಷವೂ ಇದೆ. ಆದರೆ, ಈ ಮೈತ್ರಿಕೂಟದಲ್ಲಿ ಸರಿಯಾದ ಗೌರವ ಸಿಗುತ್ತಿಲ್ಲ ಎಂಬ ರಾಜ್ಯದ ಘಟಕದಲ್ಲಿ ಮುಖಂಡರಲ್ಲಿ ಭಾವನೆ ಮೂಡಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಅಬು ಅಜ್ಮಿ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದೇ ವೇಳೆ, ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತ ಚರ್ಚೆ ನಡೆದಿಲ್ಲ. ಈ ಸೀಟು ಹಂಚಿಕೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಸರಿಯಾದ ಪಾಲು ಸಿಗಬೇಕು. ಪಕ್ಷಕ್ಕೆ ಸೂಕ್ತ ಕ್ಷೇತ್ರಗಳು ಸಿಗದಿದ್ದರೆ, ಸ್ವಂತ ಬಲದಿಂದ ಹೋರಾಟ ನಡೆಸುವ ಚಿಂತನೆಯನ್ನು ಅಬು ಅಜ್ಮಿ ವ್ಯಕ್ತಪಡಿಸಿದ್ದಾರೆ.

ಇದರ ನಡುವೆ ಸ್ವರಾ ಭಾಸ್ಕರ್ ಬಗ್ಗೆ ಚರ್ಚೆಗಳು ಎದ್ದಿವೆ. ಸ್ವರಾ ಮತ್ತು ಫಹಾದ್ 2023ರ ಫೆಬ್ರವರಿಯಲ್ಲಿ ವಿವಾಹವಾಗಿದ್ದರು. ಈ ಮದುವೆಯಲ್ಲಿ ಅಬು ಅಜ್ಮಿ ಭಾಗವಹಿಸಿದ್ದರು. ಸಮಾಜವಾದಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದರೆ, ಸ್ವರಾ ಭಾಸ್ಕರ್ ಮುಂಬ್ರಾ - ಕಲ್ವಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ವರಾ ಮತ್ತು ಫಹಾದ್ ಇಬ್ಬರಿಗೂ ಈ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಪ್ರಸ್ತುತ ಮಹಾರಾಷ್ಟ್ರದಲ್ಲಿ ಸಮಾಜವಾದಿ ಪಕ್ಷವು ಮನ್ಖುರ್ದ್ ಶಿವಾಜಿ ನಗರ ಕ್ಷೇತ್ರದಿಂದ ಅಬು ಅಜ್ಮಿ ಮತ್ತು ಭಿವಂಡಿ ಪೂರ್ವ ಕ್ಷೇತ್ರದಿಂದ ರಯೀಸ್ ಶೇಖ್ ಅವರನ್ನು ಶಾಸಕರಾಗಿ ಹೊಂದಿದೆ. ಮುಸ್ಲಿಮರು ಹೆಚ್ಚಾಗಿರುವ ಮುಂಬ್ರಾ - ಕಲ್ವಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದು ಪಕ್ಷಕ್ಕೆ ಹೆಚ್ಚು ಪ್ರಯೋಜನಕಾರಿ. ಹಾಗಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಈ ಕ್ಷೇತ್ರದ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಜಾನಿ ನಿಧನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.