ETV Bharat / bharat

ಇಂದಿರಾ ಗಾಂಧಿ 'ಭಾರತದ ಮಾತೆ': ಕೇಂದ್ರ ಸಚಿವ ಸುರೇಶ್ ಗೋಪಿ ಸ್ಪಷ್ಟನೆ ಹೀಗಿದೆ - suresh gopi INDIRA REMARK - SURESH GOPI INDIRA REMARK

ಇಂದಿರಾ ಗಾಂಧಿ ಅವರನ್ನು ಭಾರತದ ಮಾತೆ ಎಂದು ಬಣ್ಣಿಸಿದ್ದಕ್ಕೆ ಕೇಂದ್ರ ಸಚಿವ ಸುರೇಶ್​ ಗೋಪಿ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸಚಿವ ಸುರೇಶ್ ಗೋಪಿ
ಕೇಂದ್ರ ಸಚಿವ ಸುರೇಶ್ ಗೋಪಿ (ETV Bharat)
author img

By PTI

Published : Jun 16, 2024, 5:18 PM IST

ತಿರುವನಂತಪುರಂ (ಕೇರಳ): ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹಾಡಿ ಹೊಗಳಿದ್ದ ಕೇಂದ್ರ ಸಚಿವ ಸುರೇಶ್​ ಗೋಪಿ ಅವರ ಹೇಳಿಕೆ ಚರ್ಚೆಗೀಡು ಮಾಡಿದೆ. ಇಂದಿರಾ ಗಾಂಧಿ ಅವರು ಭಾರತದ ಮಾತೆ ಎಂದಿದ್ದರು. ಆದರೆ, ಇದೀಗ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಸಾಧನೆಯನ್ನು ಹೊಗಳಿದ್ದೆ. ಕೇರಳದ ಕಾಂಗ್ರೆಸ್​​ನ ಪಿತಾಮಹ ಎಂದು ಕೆ. ಕರುಣಾಕರನ್ ಅವರನ್ನು ಕರೆದಿದ್ದೆ. ಅದೇ ರೀತಿ ಭಾರತದ ಕಾಂಗ್ರೆಸ್​ ತಾಯಿ ಇಂದಿರಾ ಗಾಂಧಿ ಎಂದಿದ್ದೆ. ಪಕ್ಷವಾರು ಹೇಳಿಕೆಯನ್ನು ಮಾಧ್ಯಮಗಳು ತಿರುಚಿ ದೇಶದ ಮಾತೆ ಎಂದು ಬಿಂಬಿಸಿವೆ ಎಂದು ಕೇಂದ್ರದ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವರು ಸಮಜಾಯಿಷಿ ನೀಡಿದ್ದಾರೆ.

ಇಂದಿರಾ ಗಾಂಧಿ ಅವರನ್ನು ನಾನು ಕಾಂಗ್ರೆಸ್​ ಪಕ್ಷದ ತಾಯಿ ಎಂದು ಹೇಳಿದ್ದೆ. ಅದರಂತೆ ಕೇರಳ ಕಾಂಗ್ರೆಸ್​ಗೆ ಕರುಣಾಕರನ್​ ಅವರು ತಂದೆ ಇದ್ದಂತೆ. ಇದನ್ನು ನಾನು ಹೃದಯಾಂತರಾಳದಿಂದ ನೀಡಿದ ಹೇಳಿಕೆಯಾಗಿದೆ. ಇದರಲ್ಲಿ ರಾಜಕೀಯ ತರುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಮಾಜಿ ಪ್ರಧಾನಿಯವರ ಕುರಿತು ನೀಡಿದ 'ಸಂದರ್ಭೋಚಿತ' ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಆಡುವ ಮಾತಿನ ಸಾಂದರ್ಭಿಕತೆ ಅರ್ಥವಾಗುವುದಿಲ್ಲವೇ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. ಜೊತೆಗೆ ಇಂದಿರಾ ಗಾಂಧಿ ಅವರನ್ನು ಮತ್ತಷ್ಟು ಹೊಗಳಿದ ಬಿಜೆಪಿ ನಾಯಕ, ಸ್ವಾತಂತ್ರ್ಯದ ನಂತರ ಮತ್ತು ಅವರ ಮರಣದವರೆಗೂ ಇಂದಿರಾ ಗಾಂಧಿ ಭಾರತದ ನಿಜವಾದ ವಾಸ್ತುಶಿಲ್ಪಿ. ನಾನು ಈ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವೆ. ಅವರು ನನ್ನ ರಾಜಕೀಯ ಪ್ರತಿಸ್ಪರ್ಧಿ ಪಕ್ಷಕ್ಕೆ ಸೇರಿದವರು ಎಂಬ ಮಾತ್ರಕ್ಕೆ, ದೇಶಕ್ಕಾಗಿ ಮಾಡಿದ ಕೆಲಸವನ್ನು ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಸುರೇಶ್​ ಗೋಪಿ ಹೇಳಿದ್ದೇನು?: ಕೇಂದ್ರ ಸಚಿವ ಸುರೇಶ್​ ಗೋಪಿ ಅವರು ಶನಿವಾರದಂದು ತ್ರಿಶೂರ್‌ನಲ್ಲಿನ ಕಾಂಗ್ರೆಸ್‌ ನಾಯಕ ದಿವಂಗತ ಕೆ. ಕರುಣಾಕರನ್ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಕರುಣಾಕರನ್​ ಅವರು ನನ್ನ ರಾಜಕೀಯ ಗುರುಗಳು, ಕಾಂಗ್ರೆಸ್​ ಪಕ್ಷದ ಪಿತಾಮಹ, ಧೈರ್ಯಶಾಲಿ ಆಡಳಿತಗಾರ, ಇಂದಿರಾ ಗಾಂಧಿ ಅವರು ಭಾರತದ ಮಾತೆ ಎಂದೆಲ್ಲಾ ಗುಣಗಾನ ಮಾಡಿದ್ದರು.

ಇತ್ತೀಚೆಗಷ್ಟೇ ಮುಗಿದ ಲೋಕಸಭೆ ಚುನಾವಣೆಯಲ್ಲಿ ಸುರೇಶ್​ ಗೋಪಿ ಅವರು ಬಿಜೆಪಿಯಿಂದ ತ್ರಿಶೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಮೂಲಕ ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದರು. ಇದಾದ ಬಳಿಕ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: ಇಂದಿರಾ ಗಾಂಧಿ 'ಭಾರತ ಮಾತೆ' ಎಂದ ಕೇಂದ್ರ ಸಚಿವ ಸುರೇಶ್ ಗೋಪಿ - Suresh Gopi On Indira Gandhi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.