ETV Bharat / bharat

ಸೂರತ್‌ ವಜ್ರ ವ್ಯಾಪಾರಿಯಿಂದ ಅಯೋಧ್ಯೆ ಬಾಲರಾಮನಿಗೆ 101 ಕೆ.ಜಿ ಚಿನ್ನ! - ಚಿನ್ನ ಅರ್ಪಣೆ

Ayodhya Ram Temple Donations: ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಸಾಕ್ಷಾತ್ಕಾರಕ್ಕೆ ವಿಶ್ವದೆಲ್ಲೆಡೆಯಿಂದ ಅಪಾರ ಸಂಖ್ಯೆಯ ಭಕ್ತರ ಕೊಡುಗೈ ದಾನದ ಪಾತ್ರವಿದೆ. ಭವ್ಯ ಮಂದಿರ ನಿರ್ಮಾಣಕ್ಕೆ ಅಪಾರ ಪ್ರಮಾಣದಲ್ಲಿ ದೇಣಿಗೆ ಹರಿದುಬಂದಿದೆ.

ayodhya ram temple donation  surat diamond trader  highest donor  ram mandir construction  ಅಯೋಧ್ಯೆ ರಾಮ  ಹರಿದು ಬಂದ ದೇಣಿಗೆ  ಚಿನ್ನ ಅರ್ಪಣೆ
ಅಯೋಧ್ಯೆ ರಾಮಯ್ಯನಿಗೆ ಹರಿದು ಬಂದ ದೇಣಿಗೆ
author img

By ETV Bharat Karnataka Team

Published : Jan 23, 2024, 11:39 AM IST

ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಿನ್ನೆ ಅದ್ಧೂರಿಯಾಗಿ ನೆರವೇರಿದೆ. ಐತಿಹಾಸಿಕ ಕಾರ್ಯಕ್ರಮದಿಂದ ಕೋಟ್ಯಂತರ ಭಾರತೀಯರ, ಅದರಲ್ಲೂ ರಾಮ ಭಕ್ತರ ಬಹುದಿನಗಳ ಕನಸು ನನಸಾಗಿದೆ. ಈ ಮಹತ್ಕಾರ್ಯವನ್ನು ಸಾಕಾರಗೊಳಿಸಲು ಅನೇಕರು ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.

101 ಕೆ.ಜಿ ಬಂಗಾರ ನೀಡಿದ ವಜ್ರ ವ್ಯಾಪಾರಿ: ದೇಶಾದ್ಯಂತ 20 ಲಕ್ಷ ಹಿಂದೂ ಕಾರ್ಯಕರ್ತರು 12 ಕೋಟಿ ಕುಟುಂಬಗಳಿಂದ ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿದ್ದಾರೆ ಎಂಬುದು ವಿಶ್ವ ಹಿಂದೂ ಪರಿಷತ್ ನೀಡಿದ ಮಾಹಿತಿ. ಶ್ರೀರಾಮನಿಗೆ ದೇಣಿಗೆ ನೀಡಿದವರಲ್ಲಿ ಸೂರತ್ ಮೂಲದ ವಜ್ರದ ವ್ಯಾಪಾರಿ ದಿಲೀಪ್ ಕುಮಾರ್ ವಿ.ಲಖಿ ಸಹ ಒಬ್ಬರು. ಸುಮಾರು 101 ಕೆ.ಜಿ ಚಿನ್ನವನ್ನು ಇವರ ಕುಟುಂಬದವರು ಮಂದಿರಕ್ಕೆ ಕೊಡುಗೆ ನೀಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನ 68 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆ ನೋಡಿದರೆ ದಿಲೀಪ್ ಕುಟುಂಬ ರಾಮಮಂದಿರಕ್ಕೆ 68 ಕೋಟಿ ರೂಪಾಯಿ ಉಡುಗೊರೆಯಾಗಿ ನೀಡಿದಂತಾಗಿದೆ.

16 ಎಕರೆ ಹೊಲ ಮಾರಾಟ ಮಾಡಿದ ಉದಾರಿ: ಖ್ಯಾತ ಆಧ್ಯಾತ್ಮಿಕ ಗುರು ಮೊರಾರಿ ಬಾಪು ಎಂಬವರು ರಾಮಮಂದಿರಕ್ಕೆ 11 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಗುಜರಾತ್‌ನ ವಜ್ರದ ವ್ಯಾಪಾರಿ ಗೋವಿಂದ ಭಾಯಿ ಧೋಲಾಕಿಯಾ 11 ಕೋಟಿ ರೂ ದೇಣಿಗೆ ನೀಡಿದ್ದಾರೆ. ಅಮೆರಿಕ, ಕೆನಡಾ ಮತ್ತು ಬ್ರಿಟನ್​ನಲ್ಲಿ ನೆಲೆಸಿರುವ ರಾಮಭಕ್ತರು 8 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಮಂದಿರಕ್ಕಾಗಿ ಒಂದು ಕೋಟಿ ರೂಪಾಯಿ ನೀಡಲು ನಿರ್ಧರಿಸಿದ್ದರು. ಹೀಗಾಗಿ ಅವರು ತಮ್ಮ 16 ಎಕರೆ ಜಮೀನು ಮಾರಾಟ ಮಾಡಿದ್ದಾರೆ. ಆದರೆ, ಹೊಲ ಮಾರಿದ ನಂತರ ಇನ್ನೂ 15 ಲಕ್ಷ ರೂ ಕಡಿಮೆ ಆಗಿದ್ದರಿಂದ ಆ ಮೊತ್ತವನ್ನು ಸಾಲ ಮಾಡಿ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಸಾರ್ವಜನಿಕರಿಗೆ ಮುಕ್ತ; ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.