ರಾಂಚಿ, ಜಾರ್ಖಂಡ್: ರಾಜಧಾನಿ ರಾಂಚಿಯ ಸ್ಪೆಷಲ್ ಬ್ರಾಂಚ್‌ಗೆ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನುಪಮ್ ಕಚ್ಚಪ್ ಹತ್ಯೆಯಾದ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಗುಂಡಿಗೆ ಬಲಿಯಾದ ಸಬ್ ಇನ್ಸ್‌ಪೆಕ್ಟರ್ ಮೃತದೇಹವನ್ನು ರಾಂಚಿ ರಿಂಗ್ ರೋಡ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಂಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಘಟನೆ: 2018 ರ ಬ್ಯಾಚ್‌ನ ಬ್ರೈಟ್ ಸಬ್ ಇನ್ಸ್‌ಪೆಕ್ಟರ್ ಅನುಪಮ್ ಕಚ್ಚಪ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಂಕೆ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರೋಡ್ ನಲ್ಲಿ ಅನುಪಮ್ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಅನುಪಮ್ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಅನುಪಮ್ ಹತ್ಯೆ ಮಾಹಿತಿ ಬಂದ ತಕ್ಷಣ ರಾಂಚಿ ಪೊಲೀಸರಲ್ಲಿ ಆತಂಕ ಮನೆ ಮಾಡಿದೆ. ವಿಶೇಷ ಶಾಖೆಯ ಐಜಿ -ಡಿಐಜಿ, ರಾಂಚಿ ಪೊಲೀಸ್ ಡಿಐಜಿ, ಎಸ್‌ಎಸ್‌ಪಿ ಸೇರಿದಂತೆ ಹಲವು ಅಧಿಕಾರಿಗಳು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾಂಕೆ ರಿಂಗ್ ರೋಡ್‌ನಲ್ಲಿರುವ ಇಂಡಿಯನ್ ಢಾಬಾದಿಂದ ಹಿಂತಿರುಗುತ್ತಿದ್ದಾಗ ಅನುಪಮ್ ಅವರ ಮೇಲೆ ಈ ಗುಂಡಿನ ದಾಳಿ ನಡೆಸಲಾಗಿದೆ ಎಂದು ಡಿಐಜಿ ಅನೂಪ್ ಬಿರ್ತಾರೆ ಹೇಳಿದ್ದಾರೆ. ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.
ಪಾರ್ಟಿ ನಂತರ ಕೊಲೆ: ಮತ್ತೊಂದೆಡೆ, ಅನುಪಮ್ ತನ್ನ ಕೆಲವು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಕಾಂಕೆ ರಿಂಗ್ ರೋಡ್‌ನಲ್ಲಿರುವ ಢಾಬಾಕ್ಕೆ ಹೋಗಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ರಾತ್ರಿ 2 ಗಂಟೆವರೆಗೂ ಅನುಪಮ್ ತಮ್ಮ ಆಪ್ತರ ಜತೆ ಪಾರ್ಟಿ ನಡೆಸಿದ್ದರು ಎಂದು ಗೊತ್ತಾಗಿದ್ದು, 2 ಗಂಟೆ ಬಳಿಕ ಪಾರ್ಟಿ ಮುಗಿಸಿ ಬೈಕ್ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2014ರಲ್ಲಿ ಬಿಐಟಿ ಸಿಂದ್ರಿಯಲ್ಲಿ ಬಿಟೆಕ್ ಮಾಡಿದ್ದ ಅನುಪಮ್, ರಾಂಚಿಯ ಖುಂಟಿ ಜಿಲ್ಲೆಯ ನಿವಾಸಿಯಾಗಿದ್ದರು. ಅನುಪಮ್ ಅವರನ್ನು ಜಾರ್ಖಂಡ್ ಪೊಲೀಸ್ ಹೆಡ್‌ಕ್ವಾರ್ಟರ್ಸ್‌ನಲ್ಲಿರುವ ವಿಶೇಷ ಬ್ರಾಂಚ್‌ಗೆ ನಿಯೋಜಿಸಲಾಗಿತ್ತು. 2018 ರಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ ಅವರು ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿದ್ದರು.
ಇದನ್ನು ಓದಿ:'ನನ್ನ ಹೆಸರು ಜಯಾ ಅಮಿತಾಭ್ ಬಚ್ಚನ್': ಬಿದ್ದು ಬಿದ್ದು ನಕ್ಕ ಸ್ಪೀಕರ್, ನಗೆಗಡಲಲ್ಲಿ ತೇಲಿದ ಸದನ - Jaya Amitabh Bachchanಗುಡಿಸಲಿನಲ್ಲಿ ಮಲಗಿದ್ದ 82 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿ ತಿಂದು ಹಾಕಿದ ಬೀದಿ ನಾಯಿಗಳು - Stray Dogs Kills Woman