ETV Bharat / bharat

ಆಂಧ್ರ ಸಿಎಂ ಬಸ್​ ಮೇಲೆ ಕಲ್ಲು ತೂರಾಟ; ಗಾಯಗೊಂಡ ಜಗನ್​ - STONE PELTING ON CM JAGAN BUS - STONE PELTING ON CM JAGAN BUS

ಲೋಕಸಭೆ ಚುನಾವಣೆಯ ಪ್ರಚಾರ ಭರಾಟೆ ಹೆಚ್ಚಿರುವ ಮಧ್ಯೆ ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ ಮೋಹನ್​ ರೆಡ್ಡಿ ಮೇಲೆ ಕಲ್ಲು ತೂರಾಟ ನಡೆದಿದೆ.

Stones were thrown at CM bus tour
ಆಂಧ್ರ ಸಿಎಂ ಬಸ್​ ಮೇಲೆ ಕಲ್ಲು ತೂರಾಟ; ಗಾಯಗೊಂಡ ಜಗನ್​
author img

By ETV Bharat Karnataka Team

Published : Apr 13, 2024, 11:06 PM IST

Updated : Apr 14, 2024, 2:55 PM IST

ಆಂಧ್ರ ಸಿಎಂ ಮೇಲೆ ಕಲ್ಲು ತೂರಾಟ

ವಿಜಯವಾಡ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರ ಬಸ್​ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಸಂದರ್ಭದಲ್ಲಿ ಸಿಎಂ ಜಗನ್​ ಗಾಯಗೊಂಡಿದ್ದಾರೆ. ಕಣ್ಣಿನ ಮೇಲ್ಭಾಗ ಮತ್ತು ಹಣೆಗೆ ಗಾಯವಾಗಿದೆ.

ವಿಜಯವಾಡದದಲ್ಲಿ ಮತದಾರರಿಗೆ ಕೈಮುಗಿಯುತ್ತಿದ್ದಾಗ ದುಷ್ಕರ್ಮಿಗಳು ಬಸ್​ ಮೇಲೆ ಕಲ್ಲು ತೂರಿದ್ದು, ಅದು ಸಿಎಂಗೆ ತಗುಲಿದೆ. ತಕ್ಷಣ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡರು. ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಮುಖ್ಯಮಂತ್ರಿ ಜಗನ್​ ಅವರ ಬಸ್​ ಯಾತ್ರೆ ಯಥಾಪ್ರಕಾರ ಮುಂದುವರಿಯಿತು. ಸಿಎಂ ಮೇಲೆ ಕಲ್ಲು ತೂರಿದವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ವಿಜಯವಾಡದ ಸಿಂಗ್ ನಗರದಲ್ಲಿರುವ ವಿವೇಕಾನಂದ ಸ್ಕೂಲ್ ಸೆಂಟರ್‌ ಬಳಿ ಬಸ್​ ಮೇಲೆ ನಿಂತು ಪ್ರಚಾರ ಮಾಡುವಾಗ ಸಿಎಂಗೆ ಕಲ್ಲು ತಗುಲಿದೆ ಎಂದು ಆಂಧ್ರ ಸಿಎಂ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಸಿಎಂ ಮೇಲೆ ಕಲ್ಲು ಎಸೆಯಲು ಕವಣೆ ಬಳಸಿದ್ದರಿಂದ ಪೆಟ್ಟು ತೀವ್ರವಾಗಿದೆ ಎಂದು ತಿಳಿದುಬಂದಿದೆ. ಕಲ್ಲು ತಗುಲಿದ್ದರಿಂದ ಸಿಎಂ ಹಣೆಗೆ ಗಾಯವಾಗಿದ್ದು, ತಕ್ಷಣ ಪಕ್ಕದಲ್ಲೇ ಇದ್ದವರು ಕರವಸ್ತ್ರ ಬಳಸಿ ರಕ್ತ ಒರೆಸಿದರು. ನಂತರ ತಕ್ಷಣವೇ ಬಸ್ಸಿನಲ್ಲಿ ಸಿಎಂಗೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ಕಲ್ಲೇಟಿನ ಗಾಯದ ನೋವಿನಲ್ಲೂ ಪ್ರಥಮ ಚಿಕಿತ್ಸೆ ಬಳಿಕ ಸಿಎಂ ತಮ್ಮ ಪ್ರಚಾರವನ್ನು ಪುನಾರಂಭಿಸಿ, ನಾಲ್ಕು ಗಂಟೆಗಳ ಕಾಲ ಮತಯಾಚನೆ ಮಾಡಿದ್ದಾರೆ. ಇನ್ನು ಈ ದಾಳಿಯ ಬಗ್ಗೆ ವೈಎಸ್​ಆರ್​ಸಿಪಿ ನಾಯಕರು ಪ್ರತಿಕ್ರಿಯಿಸಿ, ಈ ಘಟನೆಯ ಹಿಂದೆ ಟಿಡಿಪಿ ಕೈವಾಡವಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಚುನಾವಣಾ ಪ್ರಚಾರದ ನಡುವೆ ಅಂಗಡಿಯಲ್ಲಿ ಜಾಮೂನು, ಮೈಸೂರು ಪಾಕ್​ ಖರೀದಿಸಿದ ರಾಹುಲ್​ ಗಾಂಧಿ - Rahul Gandhi visit sweet shop

ಆಂಧ್ರಪ್ರದೇಶದ 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಗನ್​ ಮೋಹನ್ ರೆಡ್ಡಿ ಅವರು ಕಡಪಾ ಜಿಲ್ಲೆಯ ಇಡುಪುಲುಪಾಯದಿಂದ ಶ್ರೀಕಾಕುಳಂ ಜಿಲ್ಲೆಯ ಇಚ್ಚಾಪುರದವರೆಗೆ 21 ದಿನಗಳ ಚುನಾವಣಾ ಪ್ರಚಾರದ ಅಂಗವಾಗಿ ಬಸ್ ಪ್ರವಾಸ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೊಲೀಸರಿಗೂ ಅರ್ಚಕರ ದಿರಿಸು; ಇಲಾಖೆ ಆದೇಶಕ್ಕೆ ಅಖಿಲೇಶ್​ ಯಾದವ್​ ಆಕ್ಷೇಪ - Kashi Vishwanath Temple

Last Updated : Apr 14, 2024, 2:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.