ETV Bharat / bharat

ನಾಲ್ಕನೇ ಹಂತದಲ್ಲಿ ಅಲ್ಲಲ್ಲಿ ಹಿಂಸಾಚಾರ: ಬಿಹಾರದಲ್ಲಿ ಮತದಾನದ ವೇಳೆ ಕಲ್ಲು ತೂರಾಟ; ಇಬ್ಬರು ಪೊಲೀಸರ ವಶಕ್ಕೆ - Stone pelting in Munger - STONE PELTING IN MUNGER

ಬಿಹಾರದ ಮುಂಗೇರ್​ನಲ್ಲಿ ಮತದಾನದ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಲಖಿಸರಾಯ್‌ನ ಎರಡು ಬೂತ್‌ಗಳ ಮೇಲೆ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಆದರೆ, ಪೊಲೀಸರು ಕ್ರಮ ಕೈಗೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ಅಡೆತಡೆ ಇಲ್ಲದೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

Munger
ಮುಂಗೇರ್ ಲೋಕಸಭಾ ಕ್ಷೇತ್ರ (ETV Bharat)
author img

By ETV Bharat Karnataka Team

Published : May 13, 2024, 3:51 PM IST

ಮುಂಗೇರ್ : ಬಿಹಾರದ ಲಖಿಸರಾಯ್ ಜಿಲ್ಲೆಯ ದುಮ್ರಿ ಹಾಲ್ ಬಳಿಯ ಮತಗಟ್ಟೆಯಲ್ಲಿ ಕಲ್ಲು ತೂರಾಟ ನಡೆದಿದೆ. ನಾಲ್ಕನೇ ಹಂತದ ಲೋಕಸಭೆ ಚುನಾವಣೆ ವೇಳೆ ಮುಂಗೇರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 145, 146ರಲ್ಲಿ ಸಮಾಜ ವಿರೋಧಿಗಳು ಈ ಘಟನೆ ನಡೆಸಿದ್ದಾರೆ. ಬಿಎಲ್‌ಒ ಚೀಟಿ ನೀಡದಿದ್ದಕ್ಕೆ ಸಿಟ್ಟಿಗೆದ್ದ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸಿದ್ದು ಏಕೆ? : ರಾಮದೇವ್ ಸಿಂಗ್ ಕಾಲೇಜಿನಲ್ಲಿರುವ ಮತಗಟ್ಟೆ ಸಂಖ್ಯೆ 151ರಲ್ಲಿದ್ದ ಬಿಎಲ್‌ಒ ಅವರ ಕರ್ತವ್ಯವನ್ನು ಜಮಾಲ್‌ಪುರದ ಕೆಲವು ಮತಗಟ್ಟೆಗೆ ಸ್ಥಳಾಂತರಿಸಲಾಗಿದೆ. ನಂತರ ಚೀಟಿ ವಿತರಣೆ ಕಾರ್ಯಕ್ಕೆ ತೊಂದರೆಯಾಗಿದೆ. ಸ್ಥಳೀಯರು ಮತದಾನ ಕೇಂದ್ರದಿಂದ 400 ಮೀಟರ್ ದೂರದಲ್ಲಿ ಮತದಾರರಿಗೆ ಚೀಟಿ ನೀಡಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಅಲ್ಲಿ ಗುಂಪುಗೂಡಿತು. ಈ ವೇಳೆ ಜನಜಂಗುಳಿಯನ್ನು ಕಂಡು ಬೆಂಗಾವಲು ತಂಡ ಗುಂಪನ್ನು ಚದುರಿಸಲು ಯತ್ನಿಸಿದಾಗ ಕೆಲವರು ಬೆಂಗಾವಲು ತಂಡಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.

ಬೆಂಗಾವಲು ತಂಡದ ಮೇಲೆ ಸಿಟ್ಟಿಗೆದ್ದ ಜನರು : ಬೆಂಗಾವಲು ತಂಡ ಜನರ ಗುಂಪನ್ನು ಅಲ್ಲಿಂದ ಚದುರಿಸಲು ಬಲಪ್ರಯೋಗ ಮಾಡಿದರು. ಇದರಿಂದ ಆಕ್ರೋಶಗೊಂಡ ಜನರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದರು. ಮಾಹಿತಿ ಪಡೆದ ಪೊಲೀಸರು ಮತ್ತು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕಲ್ಲು ತೂರಾಟದಲ್ಲಿ ಓರ್ವ ಪೊಲೀಸ್ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ವೇಳೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಈ ವಿಚಾರವಾಗಿ ಲಖಿಸರಾಯ್ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾರ್ ಅವರು ಮಾತನಾಡಿ, "ಕೆಲವು ಬೂತ್‌ಗಳಲ್ಲಿ ಜನರ ನೂಕುನುಗ್ಗಲು ಹೆಚ್ಚಾದ ನಂತರ ಪೊಲೀಸರನ್ನು ಕಳುಹಿಸಲಾಗಿದೆ, ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ" ಎಂದು ತಿಳಿಸಿದರು.

ಪಶ್ಚಿಮ ಬಂಗಾಳ/ಆಂಧ್ರಪ್ರದೇಶ : ಆಂಧ್ರಪ್ರದೇಶದ ವಿಶಾಖಪಟ್ಟಣ ಪೂರ್ವ ಕ್ಷೇತ್ರದ 95ನೇ ಮತಗಟ್ಟೆ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆವರೆಗೂ ಮತದಾನ ಆರಂಭವಾಗಿರಲಿಲ್ಲ. ಇದರಿಂದಾಗಿ ಮತದಾರರು ಕೇಂದ್ರದ ಮುಂದೆ ಮೂರು ಗಂಟೆಯಿಂದ ಕಾದು ಕುಳಿತಿದ್ದರು.

ಇತ್ತ, ಅನ್ನಮಯ ಜಿಲ್ಲೆಯಲ್ಲಿ ಜನಸೇನಾ ಪೋಲಿಂಗ್​ ಏಜೆಂಟರನ್ನು ಅಪಹರಣ ಮಾಡಲಾಗಿತ್ತು. ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬಲವಂತವಾಗಿ ಏಜೆಂಟರನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ಜನಸೇನಾ ಕಾರ್ಯಕರ್ತರು ಆರೋಪಿಸಿದ್ದರು. ಇದರಿಂದಾಗಿ ಪರಿಸ್ಥಿತಿ ಭುಗಿಲೆದ್ದು ದಳವಾಯಿ ಮತಗಟ್ಟೆ ಕೇಂದ್ರದಲ್ಲಿ ಇವಿಎಂ ಧ್ವಂಸಗೊಳಿಸಿ ಮತದಾನ ಸ್ಥಗಿತಗೊಳಿಸಲಾಗಿದೆ.

ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ : ಭಾನುವಾರ ಸಂಜೆ ಪೂರ್ವ ಬುರ್ದ್ವಾನ್​ ಜಿಲ್ಲೆಯ ಕೇತುಗ್ರಾಮ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಮಿಂಟು ಶೇಖ್ (45) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಕೇತುಗ್ರಾಮ ವಿಧಾನಸಭಾ ಕ್ಷೇತ್ರದ ಚೆಂಚೂರಿ ಗ್ರಾಮದ ಬಳಿ ಕೆಲವು ಕಿಡಿಗೇಡಿಗಳು ಮನೆಗೆ ಹಿಂತಿರುಗುತ್ತಿದ್ದ ಮಿಂಟು ಶೇಖ್​​ನನ್ನು ತಡೆದು, ಹಲ್ಲೆ ಮಾಡಿದ್ದರು. ನೆಲಕ್ಕೆ ಬೀಳಿಸಿ, ಆಯುಧಗಳಿಂದ ದಾಳಿ ಮಾಡಿದ್ದರು. ಬಳಿಕ ಆತನ ಮೇಲೆ ಬಾಂಬ್ ಎಸೆದು ಸ್ಫೋಟಿಸಿದ್ದಾರೆ ಎಂದು ವರದಿಯಾಗಿತ್ತು. ಘಟನೆಯಲ್ಲಿ ತೀವ್ರ ಗಾಯಗೊಂಡ ಮಿಂಟುನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಶೇಖ್ ಮೃತಪಟ್ಟಿದ್ದಾರೆ.

ಇದನ್ನೂ ಓದಿ : ಪ. ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ; ಆಂಧ್ರದಲ್ಲಿ ಪೋಲಿಂಗ್​ ಏಜೆಂಟರ ಅಪಹರಣ ಆರೋಪ, ಇವಿಎಂ ಧ್ವಂಸ - Election Related Violence

ETV Bharat Logo

Copyright © 2025 Ushodaya Enterprises Pvt. Ltd., All Rights Reserved.