ETV Bharat / bharat

ಹೈದರಾಬಾದ್ ಮೆಟ್ರೋ ಪ್ರಾಜೆಕ್ಟ್‌ ಯಶೋಗಾಥೆ ಪ್ರಕಟಿಸಿದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ - Stanford University

ಹೈದರಾಬಾದ್ ಮೆಟ್ರೋ ಪ್ರಾಜೆಕ್ಟ್‌ ಯಶೋಗಾಥೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕೇಸ್ ಸ್ಟಡಿ ಆಗಿ ಆಯ್ಕೆ ಮಾಡಿ ಪ್ರಕಟಿಸಲಾಗಿದೆ.

Hyderabad Metro
ಹೈದರಾಬಾದ್ ಮೆಟ್ರೋ
author img

By ETV Bharat Karnataka Team

Published : Mar 11, 2024, 7:37 PM IST

ಹೈದರಾಬಾದ್ : ಹೈದರಾಬಾದ್ ಮೆಟ್ರೋ ಯೋಜನೆಯ ಯಶೋಗಾಥೆಯನ್ನು ವಿಶ್ವಪ್ರಸಿದ್ಧ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ವಿಶೇಷವಾಗಿ ಅಧ್ಯಯನ ಮಾಡಲಾಗಿದೆ.

ವಿವಿಯ ಮ್ಯಾನೇಜ್​ಮೆಂಟ್​​​ ಸ್ಟೇಡಿಸ್​​ನ ವಿದ್ಯಾರ್ಥಿಗಳಿಗಾಗಿ ನಡೆಸಿದ ಕೇಸ್​ ಸ್ಟೆಡಿ ವಿವರಗಳನ್ನು ಅಲ್ಲಿನ ಸಾಮಾಜಿಕ ಆವಿಷ್ಕಾರ ವಿಮರ್ಶೆಯ (ಎಸ್‌ಎಸ್‌ಐಆರ್) ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟಿಸಿದೆ. ಭಾರತೀಯ ಮೂಲಸೌಕರ್ಯ ಯೋಜನೆಗೆ ಇದೊಂದು ಅಪರೂಪದ ಗೌರವ ಎಂದು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ಬಣ್ಣಿಸಿದೆ.

ಈ ತ್ರೈಮಾಸಿಕ ನಿಯತಕಾಲಿಕವು ವಿಶ್ವದ ಅನೇಕ ದೊಡ್ಡ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳಿಗೆ ಸೂಕ್ತ ಸಲಹೆಗಳು ಮತ್ತು ಪರಿಹಾರಗಳನ್ನು ಪ್ರಕಟಿಸುತ್ತದೆ. ಅಲ್ಲದೇ ಅವುಗಳನ್ನು ನಿವಾರಿಸಲು ಅಗತ್ಯವಾದ ನಾಯಕತ್ವ ಗುಣಗಳ ಬಗ್ಗೆ ತಿಳಿಸುತ್ತದೆ. ಪ್ರಪಂಚದಾದ್ಯಂತ ಅನೇಕ ಯೋಜನೆಗಳ ವ್ಯಾಪಕ ಅಧ್ಯಯನದ ತೀವ್ರ ಪೈಪೋಟಿಯ ನಡುವೆ, ISB ಮ್ಯಾನೇಜ್‌ಮೆಂಟ್ ಪ್ರೊಫೆಸರ್ ರಾಮ್ ನಿಡುಮೋಲು ಮತ್ತು ಅವರ ತಂಡವು ಹೈದರಾಬಾದ್ ಮೆಟ್ರೋರೈಲ್ ಯೋಜನೆಯ ಸಂಪೂರ್ಣ ಅಧ್ಯಯನವನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕೇಸ್ ಸ್ಟಡಿಯಾಗಿ ಆಯ್ಕೆ ಮಾಡಿ ಪ್ರಕಟಿಸಿದೆ.

HMRL MD ಎನ್​ವಿಎಸ್ ರೆಡ್ಡಿ ಅವರ ತಂಡವು PPP ಮೋಡ್ ಅಡಿ ವಿಶ್ವದ ಅತಿದೊಡ್ಡ ಮೆಟ್ರೋ ರೈಲು ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಅಸಾಧಾರಣ ನಾಯಕತ್ವ ತೋರಿಸಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಖಾಸಗಿ ಹೂಡಿಕೆಯೊಂದಿಗೆ ಸಾರ್ವಜನಿಕ ಲಾಭದಾಯಕ ಯೋಜನೆಗಳನ್ನು ನಿರ್ಮಿಸಲು ಹೇಗೆ ಸಾಧ್ಯ? ಎಂಬುದು ಬಹಿರಂಗವಾಗಿದೆ.

ಇದನ್ನೂ ಓದಿ : ಬಹು ನಿರೀಕ್ಷಿತ ನಮ್ಮ ಮೆಟ್ರೋ ಚಾಲಕರಹಿತ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.