ETV Bharat / bharat

ರಾಹುಲ್‌ ಗಾಂಧಿ ಇದ್ದ ವೇದಿಕೆ ಏಕಾಏಕಿ ಕುಸಿತ: ಕೆಲಕಾಲ ಗೊಂದಲ ಸೃಷ್ಟಿ - Rahul Gandhi Escapes Unhurt

author img

By ETV Bharat Karnataka Team

Published : May 27, 2024, 6:31 PM IST

ರಾಹುಲ್ ಗಾಂಧಿ ಪಾಲ್ಗೊಂಡಿದ್ದ ಚುನಾವಣಾ ಪ್ರಚಾರದ ವೇದಿಕೆ ಕುಸಿದಿದೆ. ಅವರು ವೇದಿಕೆ ಏರುತ್ತಿದ್ದಂತೆ ಈ ಘಟನೆ ಸಂಭವಿಸಿದೆ. ಎರಡ್ಮೂರು ಬಾರಿ ಏಕಾಏಕಿ ಕುಸಿತಗೊಂಡಿದ್ದರಿಂದ ಕೆಲಕಾಲ ಗೊಂದಲ ಸೃಷ್ಟಿಸಿತ್ತು. ಬಳಿಕ ತಿಳಿಗೊಂಡಿತು.

RAHUL GANDHI BIHAR VISIT
ರಾಹುಲ್‌ ಗಾಂಧಿ ಇದ್ದ ವೇದಿಕೆ (ETV Bharat)

ಪಾಟ್ನಾ: ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದ ವೇದಿಕೆ ಹಠಾತ್ತನೆ ಕುಸಿದ ಘಟನೆ ಬಿಹಾರದ ಪಾಟಲಿಪುತ್ರದಲ್ಲಿ ನಡೆದಿದೆ. ಘಟನೆ ಕೆಲಕಾಲ ಗೊಂದಲ ಸೃಷ್ಟಿಸಿತ್ತು.

ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಪರ ಮತಯಾಚನೆ ಮಾಡಲು ರಾಹುಲ್‌ ಗಾಂಧಿ ಪಟ್ನಾಕ್ಕೆ ಬಂದಿದ್ದರು. ಪಾಲಿಗಂಜ್ ಪ್ರದೇಶದಲ್ಲಿ ಆಯೋಜಿಸಿದ್ದ ಚುನಾವಣಾ ಸಮಾವೇಶದಲ್ಲಿ ಅವರು ಭಾಗವಹಿಸಿದ್ದರು. ಚುನಾವಣಾ ಪ್ರಚಾರಕ್ಕಾಗಿ ಸಿದ್ಧಪಡಿಸಲಾಗಿದ್ದ ವೇದಿಗೆ ಏರಿ ಮತದಾರರತ್ತ ಕೈ ಬೀಸುತ್ತಾ ರಾಹುಲ್ ಗಾಂಧಿ ಮಧ್ಯಭಾಗದಲ್ಲಿ ಬರುತ್ತಿದ್ದಂತೆ ವೇದಿಕೆಯ ಒಂದು ಭಾಗ ಏಕಾಏಕಿ ಕುಸಿದಿದೆ. ಪಕ್ಕದಲ್ಲಿದ್ದ ಮಿಸಾ ಭಾರತಿ ಅವರು ತಕ್ಷಣ ರಾಹುಲ್‌ ಅವರ ಕೈ ಹಿಡಿದು ರಕ್ಷಣೆಗೆ ಯತ್ನಿಸಿದ್ದಾರೆ. ಭದ್ರತಾ ಸಿಬ್ಬಂದಿ ಕೂಡ ರಾಹುಲ್‌ ನೆರವಿಗೆ ಧಾವಿಸುತ್ತಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಒಂದಲ್ಲ ಹಲವಾರು ಬಾರಿ ವೇದಿಕೆ ಏಕಾಏಕಿ ಕುಸಿದಿದ್ದರಿಂದ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಅದೇ ವೇದಿಕೆಯ ಸಮತಟ್ಟಾದ ಜಾಗದಲ್ಲಿ ನಿಂತು ಅಭ್ಯರ್ಥಿ ಪರ ಮತ ಯಾಚಿಸಿದರು.

ಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಮಹಾಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ ₹ 1 ಲಕ್ಷ ಸಿಗಲಿದೆ. ಪ್ರತಿಯೊಬ್ಬ ವಿದ್ಯಾವಂತ ಯುವಕನ ಮೊದಲ ಉದ್ಯೋಗ ಕಾಯಂ ಆಗಲಿದ್ದು, ಅದರಲ್ಲಿ ವಾರ್ಷಿಕ ₹1 ಲಕ್ಷ ಸಿಗಲಿದೆ. ರೈತರಿಗೆ ಎಂಎಸ್‌ಪಿಯ ಕಾನೂನುಬದ್ಧ ಗ್ಯಾರಂಟಿ ಸಿಗುತ್ತದೆ. ಅಲ್ಲದೇ ಅವರ ಸಾಲವನ್ನು ಮನ್ನಾ ಕೂಡ ಮಾಡಲಾಗುತ್ತದೆ ಈ ಹಿಂದೆ ಘೋಷಿಸಲಾಗಿದ್ದ ಪ್ರಣಾಳಿಕೆಯನ್ನು ಮತ್ತೆ ಪುನರುಚ್ಚರಿಸಿದರು.

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಇಂಡಿಯಾ ಕೂಟದ ನಾಯಕರು, ಆಡಳಿತಾರೂಢ ಪಕ್ಷದ ನಾಯಕರು ದೇಶದಲ್ಲಿ ನಿರುದ್ಯೋಗ ಹೆಚ್ಚಿಸಿದ್ದಾರೆ. ಭಾರತೀಯ ಸೈನಿಕರನ್ನು ಸೇನೆಯಲ್ಲಿ ಕಾರ್ಮಿಕರನ್ನಾಗಿ ಮಾಡಿದ್ದಾರೆ ಎಂದು ಕಿಡಿ ಕಾರಿದರು. ಈ ವರ್ಷ ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಕೂಡ ವಿಶ್ವಾಸ ವ್ಯಕ್ತಪಡಿಸಿದರು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಮಾತನಾಡಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ರಾಹುಲ್ ಗಾಂಧಿ, ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ, ಶಾಸಕ ದೀಪಂಕರ್ ಭಟ್ಟಾಚಾರ್ಯ, ಕಾಂಗ್ರೆಸ್ ಉಸ್ತುವಾರಿ ಮೋಹನ್ ಪ್ರಕಾಶ್, ರಾಜ್ಯಾಧ್ಯಕ್ಷ ಅಖಿಲೇಶ್ ಸಿಂಗ್ ಸೇರಿದಂತೆ ಹಲವು ಮುಖಂಡರು ಇದ್ದರು.

ಪಾಟ್ನಾದ ಎರಡು ಲೋಕಸಭಾ ಕ್ಷೇತ್ರಗಳಿಗೆ ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಪಾಟಲಿಪುತ್ರ ಕ್ಷೇತ್ರದಲ್ಲಿ ಎನ್‌ಡಿಎಯಿಂದ ಬಿಜೆಪಿ ಅಭ್ಯರ್ಥಿ ರಾಮಕೃಪಾಲ್ ಯಾದವ್ ಮತ್ತು ಮಹಾಮೈತ್ರಿ ಕೂಟದಿಂದ ಆರ್‌ಜೆಡಿ ಅಭ್ಯರ್ಥಿ ಮಿಸಾ ಮಿಸಾ ಭಾರತಿ ಸ್ಪರ್ಧೆ ಮಾಡಿದ್ದಾರೆ. ಇನ್ನು ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರವಿಶಂಕರ್ ಪ್ರಸಾದ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ಶುಲ್ ಅವಿಜಿತ್ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರು ದೇಶವನ್ನು ವಿಭಜಿಸಲು ಪ್ರಯತ್ನಿಸಬಾರದು: ರಾಹುಲ್​ ಗಾಂಧಿ - rahul gandhi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.