ETV Bharat / bharat

ಮಗನ ಅಗಲಿಕೆ, ದೇಗುಲ ನಿರ್ಮಾಣದ ಶಪಥ ಮಾಡಿದ ತಂದೆ: ಮಗಳಿಂದ ಪೂರ್ಣಗೊಂಡ ಚಿನ್ನ-ಬೆಳ್ಳಿ ಲೇಪಿತ ಪಾದರಸದ ಶಿವಲಿಂಗ! - house converted into a shiva temple

author img

By ETV Bharat Karnataka Team

Published : Jul 29, 2024, 3:56 PM IST

ಈ ಶಿವಲಿಂಗದ ವಿಶೇಷತೆ ಎಂದರೆ, 15 ಇಂಚಿನ ಮಹಾದೇವನನ್ನು 104 ಕೆಜಿ ಪಾದರಸದಿಂದ ಸಿದ್ಧಪಡಿಸಲಾಗಿದೆ. ಇದಕ್ಕೆ ಬಂಗಾರ ಮತ್ತು ಬೆಳ್ಳಿಯನ್ನು ಸೇರಿಸಿ ನಿರ್ಮಾಣ ಮಾಡಲಾಗಿದೆ.

special-report-bharatpur-daughter-converted-his-father-house-into-a-temple-and-installed-a-mercury-shivling
ಶಿವಲಿಂಗ (ಈಟಿವಿ ಭಾರತ್​​)

ಭರತ್​ಪುರ್, ರಾಜಸ್ಥಾನ​​: ಭಕ್ತರ ನಂಬಿಕೆ ಮತ್ತು ಭಕ್ತಿಗೆ ಎಂದಿಗೂ ಕೊನೆಯಿಲ್ಲ. ಈ ಭಕ್ತಿಯಿಂದಾಗಿ ಮನೆಯನ್ನು ದೇಗುಲ ಮಾಡಿ, ಪಾದರಸದ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ವಿಪರ್ಯಾಸ ಎಂದರೆ, ಈ ಆಸೆ ಆ ವ್ಯಕ್ತಿ ಅಗಲಿಕೆ ನಂತರ ಮಗಳು ಪೂರ್ಣಗೊಳಿಸಿದ್ದಾರೆ ಎನ್ನುವುದೇ ಇಲ್ಲಿನ ವಿಶೇಷತೆಯಾಗಿದೆ.

ತಂದೆಯ ಕನಸನ್ನು ಇದೀಗ ಮಗಳು ನನಸಾಗಿಸಿದ್ದಾಳೆ. ಈ ಶಿವಲಿಂಗದ ವಿಶೇಷತೆ ಎಂದರೆ, 15 ಇಂಚಿನ ಈ ಶಿವಲಿಂಗವನ್ನು 104 ಕೆಜಿ ಪಾದರಸದಿಂದ ಸಿದ್ಧಪಡಿಸಲಾಗಿದೆ. ಇದಕ್ಕೆ ಬಂಗಾರ ಮತ್ತು ಬೆಳ್ಳಿಯನ್ನು ಸೇರಿಸಲಾಗಿದೆ. ರಾಜ್ಯದಲ್ಲಿಯೇ ಅತಿ ದೊಡ್ಡ ಪಾದರಸದ ಶಿವಲಿಂಗ ಎಂಬ ಖ್ಯಾತಿಯನ್ನೂ ಕೂಡಾ ಇದು ಪಡೆದುಕೊಂಡಿದೆ.

ಮಗನ ನೆನಪಿಗೆ ದೇಗುಲ: ರಾಜಸ್ಥಾನದ ನಡಿಯಾ ಮೊಹಲ್ಲಾ ನಿವಾಸಿಯಾಗಿರುವ ರಾಧೆಶ್ಯಾಮ್​ ಸಿಂಗಲ್​ ಮತ್ತು ಸುಶೀಲಾ​ ದೇವಿ 2003ರಲ್ಲಿ ಅವರ ಮಗನನ್ನು ಕಳೆದುಕೊಂಡಿದ್ದರು. ಮಗನನ್ನು ಕಳೆದುಕೊಂಡ ದಂಪತಿ ಆಘಾತಕ್ಕೆ ಒಳಗಾದರು. ಮಗನ ಸಾವಿನಿಂದ ನೊಂದ ರಾಧೆಶ್ಯಾಮ್​​ ತಮ್ಮ ಮನಸ್ಸನ್ನು ಸಂಪೂರ್ಣವಾಗಿ ದೈವಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಪರಿಣಾಮವಾಗಿ 2006ರಲ್ಲಿ ಅವರ ಮನೆಯನ್ನೇ ಶಿವನ ದೇಗುಲವಾಗಿ ನಿರ್ಮಾಣ ಮಾಡಿದರು ಎಂದು ರಾಧೆಶ್ಯಾಮ್​ ಸಿಂಗಲ್​ ಮತ್ತು ಸುಶೀಲಾ​ ದೇವಿ ಮಗಳಾದ ಆಶಾ ಸಿಂಗಲ್​ ತಿಳಿಸಿದ್ದಾರೆ.

ರಾಧೆಶ್ಯಾಮ್​ ಮತ್ತು ಸುಶೀಲಾ ದೇವಿ ತಮ್ಮ ಮನೆಯಲ್ಲಿ 51 ಕೆಜಿ ತೂಕದ ಪಾದರಸ ಶಿವಲಿಂಗ ಅಳವಡಿಕೆಗೆ ನಿರ್ಮಾಣ ಮಾಡಿದರು. ಇದಕ್ಕಾಗಿ ತಮ್ಮ ಇಡೀ ಜೀವನದಲ್ಲಿ ಹಂತ ಹಂತವಾಗಿ ಪಾದರಸ ಸಂಗ್ರಹ ಮಾಡಲು ಮುಂದಾಗಿದ್ದರು. ಅವರ ಜೀವನದಲ್ಲಿ 40 ಕೆಜಿ ಪಾದರಸ ಸಂಗ್ರಹ ಮಾಡಿದ್ದು, ಅವರ ಕನಸು ಈಡೇರಿರಲಿಲ್ಲ. ರಾಧೆಶ್ಯಾಮ್​ 2021ರಲ್ಲಿ ನಿಧನರಾದರು.

ತಂದೆ ಕಂಡ ಕನಸು ನನಸು ಮಾಡಿದ ಮಗಳು: ನನ್ನ ತಂದೆ ರಾಧೆಶ್ಯಾಮ್​ ದೇಗುಲ ನಿರ್ಮಾಣಕ್ಕೆ ಮನೆ ಮುಂದೆ ದೇಣಿಗೆ ಬಾಕ್ಸ್​ ಇಟ್ಟಿದ್ದರು. ಅಲ್ಲದೇ, ಮನೆಯನ್ನು ದೇಗುಲವಾಗಿ ಪರಿವರ್ತಿಸಲಾಗುವುದು ಎಂದು ಬರೆದಿದ್ದರು. 2021ರಲ್ಲಿ ರಾಧೆಶ್ಯಾಮ್​ ಸಾವಿನ ಬಳಿಕ ಆಶಾ ಸಿಂಗಲ್​ ಈ ನಿರ್ಮಾಣ ಕಾರ್ಯದ ಜವಾಬ್ದಾರಿ ಪಡೆದುಕೊಂಡರು. ತಂದೆ 51 ಕೆಜಿ ಪಾದರಸದ ಶಿವಲಿಂಗವನ್ನು ನಿರ್ಮಾಣ ಮಾಡುವ ಶಪಥ ಮಾಡಿದ್ದರು. ಇದೀಗ ನಾನು 101 ಕೆಜಿಗೆ ಹೆಚ್ಚಿಸಿದ್ದೇನೆ ಎಂದರು.

ಶಿಲ್ಪಿಗಾಗಿ ಹುಡುಕಾಟ: ಶಿವಲಿಂಗ ನಿರ್ಮಾಣಕ್ಕಾಗಿ 110 ಕೆಜಿ ಪಾದರಸವನ್ನು ಕೊಳ್ಳಲಾಗಿದ್ದು, 14 ಲಕ್ಷ ರೂ ವ್ಯಯವಾಗಿದೆ. ಆದರೆ, ಇದರ ನಿರ್ಮಾಣಕ್ಕಾಗಿ ಶಿಲ್ಪಿಗೆ ಹೆಚ್ಚಿನ ಹುಡುಕಾಟ ನಡೆಸಲಾಯಿತು. ಕಡೆಗೆ ಮಧ್ಯಪ್ರದೇಶದ ಜಬಲ್ಪುರದ ಪಾದರಸದಲ್ಲಿ ಶಿವಲಿಂಗ ನಿರ್ಮಾಣ ಮಾಡಲು ಮುಂದಾದರು. ಒಂದೂವರೆ ವರ್ಷಗಳ ಕಾಲ ಪಾದರಸವನ್ನು ಶುದ್ಧೀಕರಣ ಮಾಡಿದರು. 9 ಜನರು 104 ಕೆಜಿ ಪಾದರಸದ ಮೂಲಕ 3 ದಿನದಲ್ಲಿ ಶಿವಲಿಂಗ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಬಂಗಾರ ಮತ್ತು ಬೆಳ್ಳಿಯನ್ನೂ ಕೂಡಾ ಸೇರಿಸಲಾಗಿದೆ.

ಶ್ರಾವಣದಲ್ಲಿ ಭಕ್ತ ಸಾಗರ: ಶಿವಲಿಂಗ ನಿರ್ಮಾಣದ ಮಾಡಿ ಮನೆಯನ್ನು ಸಂಪೂರ್ಣವಾಗಿ ದೇಗುಲವಾಗಿ ನಿರ್ಮಾಣ ಮಾಡಿದ ಬಳಿಕ ಅಷ್ಟ ವಿಧಿ ಸಂಸ್ಕಾರವನ್ನು ಮಾಡಲಾಯಿತು. ಶ್ರಾವಣದಲ್ಲಿ ಭಕ್ತರ ಸಂಖ್ಯೆ ಇದೀಗ ಹೆಚ್ಚಿದ್ದು, ಜನರು ಶಿವಲಿಂಗ ಪೂಜೆಗೆ ಮುಂದಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: 500 ಕೋಟಿಗಿಂತ ಹೆಚ್ಚು ಆದಾಯ ಗಳಿಸಿದ ಬೆಳ್ಳುಳ್ಳಿ ಬೆಳೆದ ರೈತರು: ಈ ವರ್ಷದಲ್ಲೇ ಅಧಿಕ ಲಾಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.