ETV Bharat / bharat

ವರ್ಷದ ಮೊದಲ ಸೂರ್ಯಗ್ರಹಣ: ಎಲ್ಲಿ, ಯಾವಾಗ ಗೋಚರ- ವೀಕ್ಷಿಸುವುದು ಹೇಗೆ? - solar eclipse

ಇಂದು ಸೂರ್ಯಗ್ರಹಣದ ಕೌತುಕ ಸಂಭವಿಸಲಿದ್ದು, ಅದನ್ನು ಹೇಗೆ, ಎಲ್ಲಿ ವೀಕ್ಷಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.

ವರ್ಷದ ಮೊದಲ ಸೂರ್ಯಗ್ರಹಣ
ವರ್ಷದ ಮೊದಲ ಸೂರ್ಯಗ್ರಹಣ
author img

By ETV Bharat Karnataka Team

Published : Apr 8, 2024, 10:40 AM IST

ಹೈದರಾಬಾದ್​: ವರ್ಷದ ಮೊದಲ ಸೂರ್ಯಗ್ರಹಣವು ಇಂದು ಸಂಭವಿಸಲಿದೆ. ನೇಸರನು ಕಣ್ಮರೆಯಾಗುವ ಕೌತುಕವು ಖಗೋಳ ಆಸಕ್ತರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಇದು ರಾತ್ರಿ ನಡೆಯುವ ಆಗಸ ವಿದ್ಯಮಾನದಿಂದ ಭೂಮಿಯು ಬಿಸಿಯಾಗಲಿದೆ.

ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುವ ಈ ಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ. ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 10 ಗಂಟೆಗೆ ಗ್ರಹಣ ಆರಂಭವಾಗಲಿದೆ. ಅಂದರೆ ಅಮೆರಿಕದ ಸಮಯದ ಪ್ರಕಾರ 12.30 ನಿಮಿಷವಾಗಿರಲಿದೆ. ಮಧ್ಯಾಹ್ನದ ವೇಳೆ ಖಗೋಳ ಕೌತುಕವನ್ನು ಕಣ್ತುಂಬಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಮೆಕ್ಸಿಕೋದ ಪೆಸಿಫಿಕ್ ಕಡಲತೀರಗಳಿಂದ ಹಿಡಿದು ಕೆನಡಾದ ಒರಟಾದ ಅಟ್ಲಾಂಟಿಕ್ ತೀರಗಳವರೆಗಿನ 15 ರಾಜ್ಯಗಳ ಜನರು ಸೂರ್ಯನನ್ನು ನುಂಗುವ ವಿಸ್ಮಯವನ್ನು ನೋಡಲಿದ್ದಾರೆ.

ಸೌರ ಗ್ರಹಣ ಎಂದರೇನು?: ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದ್ದು, ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯನ ಬೆಳಕು ಸಂಪೂರ್ಣ ಅಥವಾ ಭಾಗಶಃ ಕಣ್ಮರೆಯಾಗುತ್ತದೆ. ಆಗ ಇದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ, ಅದರ ನೆರಳು ಭೂಮಿಯ ಮೇಲೆ ಕಾಣಿಸುತ್ತದೆ. ಸಂಪೂರ್ಣ ಗ್ರಹಣವಾದಾಗ ಮುಂಜಾನೆ ವೇಳೆಯೂ ಕತ್ತಲೆಯಾಗುತ್ತದೆ. ಪೂರ್ಣ ಗ್ರಹಣ ಸಂಭವಿಸುತ್ತಿರುವಾಗ ಜನರು ಭಾಗಶಃ ಗ್ರಹಣವನ್ನು ಮಾತ್ರ ನೋಡಬಲ್ಲರು.

  • " class="align-text-top noRightClick twitterSection" data="">

ಸಂಪೂರ್ಣ ಸೂರ್ಯಗ್ರಹಣದ ಸಮಯ: 2024 ರ ಪೂರ್ಣ ಸೂರ್ಯಗ್ರಹಣವು ಏಪ್ರಿಲ್ 8 ರಂದು ಸಂಭವಿಸಲಿದೆ. 'ಟೋಟಲಿಟಿ' ಎಂದು ಕರೆಯಲ್ಪಡುವ ಖಗೋಳ ವಿಸ್ಮಯವು ಕತ್ತಲೆಯು ಮೆಕ್ಸಿಕೋ, ಅಮೆರಿಕ ಮತ್ತು ಕೆನಡಾದಲ್ಲಿ ಗೋಚರಿಸುತ್ತದೆ. ಅಮೆರಿಕದ 18 ರಾಜ್ಯಗಳ ಜನರು ಸಹ ಇದನ್ನು ನೋಡಬಹುದು. ಭಾರತದಲ್ಲಿ ಆಕಾಶವೀಕ್ಷಕರಿಗೆ ಇದು ಗೋಚರಿಸುವುದಿಲ್ಲ.

ಭಾರತೀಯ ಕಾಲಮಾನದ (IST) ಪ್ರಕಾರ, ಸಂಪೂರ್ಣ ಸೂರ್ಯಗ್ರಹಣವು ಏಪ್ರಿಲ್ 8 ರಂದು ರಾತ್ರಿ 9:12 ಕ್ಕೆ ಪ್ರಾರಂಭವಾಗುತ್ತದೆ. ಪೂರ್ಣ ಗ್ರಹಣವು ರಾತ್ರಿ 10:08 ಕ್ಕೆ ಪ್ರಾರಂಭವಾಗಿ, ಏಪ್ರಿಲ್ 9, 2:22 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಮೆಕ್ಸಿಕೋದ ಪೆಸಿಫಿಕ್ ಕರಾವಳಿಯು ಮೊದಲು ಪೂರ್ಣ ಗ್ರಹಣದ ಗೋಚರತೆ ಪಡೆಯಲಿದೆ.

ಗ್ರಹಣವು ಒಟ್ಟಾರೆ, ಎರಡೂವರೆ ಗಂಟೆಗಳ ಕಾಲ ಇರಲಿದೆ. ಆದರೆ ಪೂರ್ಣ ಗ್ರಹಣವು ಕೇವಲ 4 ನಿಮಿಷಗಳವರೆಗೆ ಇರುತ್ತದೆ. NASA ಪ್ರಕಾರ, ಗರಿಷ್ಠ ಚಮತ್ಕಾರವು 4 ನಿಮಿಷ ಮತ್ತು 27 ಸೆಕೆಂಡುಗಳವರೆಗೆ ಮಾತ್ರ ಇರುತ್ತದೆ ಎಂದು ಹೇಳಿದೆ.

ಗ್ರಹಣವನ್ನು ವೀಕ್ಷಿಸುವುದು ಹೇಗೆ?: ಸೂರ್ಯನ ಕಾಂತಿಯು ಪ್ರಕಾಶಮಾನವಾಗಿರುವುದರಿಂದ ಅದು ಕಣ್ಣಿನ ರೆಟಿನಾದ ಜೀವಕೋಶಗಳಿಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಎಕ್ಲಿಪ್ಸ್ ಗ್ಲಾಸ್‌ಗಳಂತಹ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಿ ಗ್ರಹಣ ವೀಕ್ಷಿಸಬಹುದು. ನೇರವಾಗಿ ವೀಕ್ಷಣೆ ಸಾಧ್ಯವಾಗದಿದ್ದಲ್ಲಿ ನಾಸಾದ ವೆಬ್​ಸೈಟ್​ನಲ್ಲಿ ಲೈವ್ ಸ್ಟ್ರೀಮ್‌ನಲ್ಲಿ ಕಾಣಬಹುದು. ಬಾಹ್ಯಾಕಾಶ ಸಂಸ್ಥೆಯು ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೂ ನೇರಪ್ರಸಾರ ಮಾಡಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಮೂರು ದಿನ ಬಿಸಿಗಾಳಿ: ಹವಾಮಾನ ಇಲಾಖೆ - Heatwave

ETV Bharat Logo

Copyright © 2024 Ushodaya Enterprises Pvt. Ltd., All Rights Reserved.