ETV Bharat / bharat

ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಭಾರಿ ಹಿನ್ನಡೆ; ಕೇರಳದಲ್ಲಿ ರಾಜೀವ್​ ಚಂದ್ರಶೇಖರ್- ತರೂರು ನಡುವೆ ತೀವ್ರ ಪೈಪೋಟಿ - lok sabha Election Results 2024

2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್​ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಬೃಹತ್​ ಗೆಲುವು ದಾಖಲಿಸಿದ್ದರು. ಆದರೆ ಈ ಬಾರಿ ಹಿನ್ನಡೆ ಕಾಣುತ್ತಿದ್ದಾರೆ.

Smriti Irani Trailing in Amethi  Rajeev Chandrasekhar leads in Thiruvananthapuram
ಸ್ಮೃತಿ ಇರಾನಿ, ಕಿಶೋರಿ ಲಾಲ್​ ಶರ್ಮಾ (ಈಟಿವಿ ಭಾರತ್​​)
author img

By ETV Bharat Karnataka Team

Published : Jun 4, 2024, 2:04 PM IST

ಅಮೇಥಿ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಕಂಡಿದ್ದಾರೆ. ಸ್ಮೃತಿ ಅವರಿಗೆ ಕಾಂಗ್ರೆಸ್​ ಅಭ್ಯರ್ಥಿ ಕಿಶೋರಿ ಲಾಲ್​ ಶರ್ಮಾ ಪ್ರಬಲ ಪೈಪೋಟಿ ನೀಡಿದ್ದು, 11.35ರ ಹೊತ್ತಿಗೆ 37 ಸಾವಿರ ಅಂತರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ದಶಕಗಳ ಕಾಲ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿ ರಾಜಕೀಯ ವಿಷಯಗಳಿಂದ ಅತ್ಯಂತ ಕುತೂಹಲದ ಕ್ಷೇತ್ರವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್​ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಬೃಹತ್​ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದರು.

ಎರಡನೇ ಬಾರಿ ಅಮೇಥಿಯಿಂದ ಕಣಕ್ಕೆ ಇಳಿದಿದ್ದ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್​ ಗಾಂಧಿ ಕುಟುಂಬದ ಆಪ್ತರಾಗಿದ್ದ ಕಿಶೋರಿ ಲಾಲ್​ ಶರ್ಮಾ ಅವರನ್ನು ಕಣಕ್ಕೆ ಇಳಿಸಿತ್ತು. ಉತ್ತರ ಪ್ರದೇಶದ ಪ್ರತಿಷ್ಟಿತ ಕ್ಷೇತ್ರವಾಗಿ ಅಮೇಥಿ ರೂಪಗೊಂಡಿತು. ಅಲ್ಲದೇ, ರಾಹುಲ್​ ಗಾಂಧಿ ಸೋನಿಯಾ ಗಾಂಧಿ ಕ್ಷೇತ್ರವಾದ ರಾಯ್​ ಬರೇಲಿಯಿಂದ ಕಣಕ್ಕೆ ಇಳಿದಿದ್ದರು.

ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರವಾಗಿದ್ದ ಇಲ್ಲಿ ಕಾಂಗ್ರೆಸ್​, ಬಿಜೆಪಿ ಮತ್ತು ಬಿಎಸ್​ಪಿ ಪಕ್ಷಗಳಿಂದ ತ್ರಿಕೋನಾ ಸ್ಪರ್ಧೆ ಏರ್ಪಟಿತು. ಬಿಎಸ್ಪಿಯಿಂದ ನಂದೆ ಸಿಂಗ್​ ಚೌಹಾಣ್​​​ ಕಣಕ್ಕೆ ಇಳಿದಿದ್ದರು.

ಶಶಿ ತರೂರ್​ - ಚಂದ್ರಶೇಖರ್​ ನಡುವೆ ತೀವ್ರ ಹಣಾಹಣಿ: ಕೇರಳದ ಮತ್ತೊಂದು ಹೈವೋಲ್ಟೆಜ್​​ ಕಣವಾಗಿದ್ದ ತಿರುವನಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ್​ ಚಂದ್ರಶೇಖರ್​ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಶಶಿತರೂರು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಮ್ಮೆ - ಅವರು ಇನ್ನೊಮ್ಮೆ ಇವರು ಹಿನ್ನಡೆ - ಮುನ್ನಡೆ ಗಳಿಸುತ್ತಿದ್ದಾರೆ.

ಚುನಾವಣಾ ಆಯೋಗದ ಟ್ರೆಂಡ್​ ಅನುಸಾರ, 12.50ರ ಸುಮಾರು ಶಶಿ ತರೂರ್​ 15 ಸಾವಿರ ಮತಗಳಿಂದ ಹಿಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಶಶಿ ತರೂರ್​ 1 ಲಕ್ಷ ಮತಗಳ ಅಂತರದ ಗೆಲುವು ಪಡೆದಿದ್ದರು.

ಕೇರಳದ ತ್ರಿಸ್ಸೂರಿನಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್​ ಮತ್ತು ಎಲ್​ಡಿಎಫ್​ಗೆ ಶಾಕ್​ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸುರೇಶ್​ ಗೋಪಿ, ಎದುರಾಳಿಗಳಾದ ಸಿಪಿಐ ಅಭ್ಯರ್ಥಿ ವಿಎಸ್​ ಸುನೀಲ್​ ಕುಮಾರ್​ ಮತ್ತು ಕಾಂಗ್ರೆಸ್​​ ಅಭ್ಯರ್ಥಿ ಮುರಳೀಧರನ್​ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿಗ ಕಂಗನಾ ರಣಾವತ್​ಗೆ​ ಮುನ್ನಡೆ; ತಾಯಿಯನ್ನು ಈಶ್ವರ ಸ್ವರೂಪ ಎಂದ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.