ETV Bharat / bharat

ಸಿಕ್ಕಿಂ ವಿಧಾನಸಭೆ ಚುನಾವಣೆ: 32 ಕ್ಷೇತ್ರಗಳ ಪೈಕಿ 31 ಸ್ಥಾನ ಗೆದ್ದು ಬೀಗಿದ ಆಡಳಿತಾರೂಢ ಸಿಕೆಎಂ - Sikkim Assembly Election Result

ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಎರಡನೇ ಬಾರಿ ಪ್ರಚಂಡ ಗೆಲುವು ಸಾಧಿಸಿದೆ.

author img

By PTI

Published : Jun 2, 2024, 3:57 PM IST

ಪ್ರೇಮ್​ ಸಿಂಗ್​ ತಮಾಂಗ್
Prem Singh Tamang (IANS)

ಗ್ಯಾಂಗ್ಟಕ್​(ಸಿಕ್ಕಿಂ): ಸಿಕ್ಕಿಂ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಸಿಕೆಎಂ) ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. 32 ವಿಧಾನಸಭೆ ಕ್ಷೇತ್ರಗಳ ಪೈಕಿ ಸಿಕೆಎಂ 31 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಭಾರೀ ಬಹುಮತ ಪಡೆದಿದೆ. ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್​ (ಎಸ್​ಡಿಎಫ್​) ಕೇವಲ 1 ಸ್ಥಾನಕ್ಕೆ ಸೀಮಿತವಾಗಿದೆ.

2024ರ ಲೋಕಸಭೆ ಚುನಾವಣೆಗೆ ಏಪ್ರಿಲ್ 19ರಂದು ನಡೆದ ಮೊದಲ ಹಂತದ ಮತದಾನದ ದಿನವೇ ಸಿಕ್ಕಿಂನ 32 ವಿಧಾನಸಭೆ ಕ್ಷೇತ್ರಗಳಿಗೂ ಮತದಾನವಾಗಿತ್ತು. ಇಂದು ಮತ ಎಣಿಕೆ ನಡೆದಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ 17 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದ ಸಿಕೆಎಂಗೆ ಈ ಬಾರಿ ದೊಡ್ಡ ಗೆಲುವು ಸಿಕ್ಕಿದೆ.

ರಾಜ್ಯದಲ್ಲಿ 25 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಎಸ್​ಡಿಎಫ್ ಹೀನಾಯ ಪರಿಸ್ಥಿತಿಗೆ ತಲುಪಿದೆ. ಶ್ಯಾರಿ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಉಳಿದಂತೆ, ಪಕ್ಷದ ಅಧ್ಯಕ್ಷ, ಮಾಜಿ ಸಿಎಂ ಪವನ್ ಚಾಮ್ಲಿಂಗ್ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ, ಹಾಲಿ ಶಾಸಕ ದಿಲ್ಲಿ ರಾಮ್ ಥಾಪಾ ಸಹ ಸಿಕೆಎಂ ಅಭ್ಯರ್ಥಿಯೆದುರು ಸೋಲು ಕಂಡಿದ್ದಾರೆ.

ಸಿಎಂ ಪ್ರೇಮ್​ ಸಿಂಗ್ ಪ್ರತಿಕ್ರಿಯೆ: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಪ್ರೇಮ್​ ಸಿಂಗ್​ ತಮಾಂಗ್ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ತಮ್ಮ ಪಕ್ಷದ ಪ್ರಚಂಡ ಬಹುಮತದ ಬಗ್ಗೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಗೆಲುವಿನ ಶ್ರೇಯಸ್ಸನ್ನು ಪಕ್ಷದ ಕಾರ್ಯಕರ್ತರಿಗೆ ಸಲ್ಲಿಸಿದರು.

''ಜನರ ಪ್ರೀತಿ ಮತ್ತು ವಿಶ್ವಾಸದಿಂದಾಗಿ ನಾವು ಕಳೆದ ಐದು ವರ್ಷಗಳಲ್ಲಿ ಸುಭದ್ರ ಸರ್ಕಾರ ಮುನ್ನಡೆಸಿದ್ದೇವೆ. ಪಕ್ಷದ ಕಾರ್ಯಕರ್ತರು ತುಂಬಾ ಶ್ರಮಿಸಿದ್ದಾರೆ. ಈಗ ನಾವು ಸಿಕ್ಕಿಂನ ಜನರಿಗೆ ನಮ್ಮ ಶೇ.100ರಷ್ಟು ಸೇವೆ ಸಲ್ಲಿಸಲು ಮುಂದಿನ ಐದು ವರ್ಷಗಳನ್ನು ಹೊಂದಿದ್ದೇವೆ'' ಎಂದು ಹೇಳಿದರು.

ಅಲ್ಲದೇ, ''ನಾನು ಪ್ರತಿಪಕ್ಷಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಯಾಕೆಂದರೆ, ಪ್ರತಿಪಕ್ಷಗಳಿಂದಾಗಿ ನಮ್ಮ ಪಕ್ಷವನ್ನು ಮತ್ತಷ್ಟು ಸದೃಢ ಹಾಗೂ ಸಂಘಟಿಸಲು ಅನುವಾಯಿತು. ನಮ್ಮ ಪಕ್ಷದ ಕಾರ್ಯಕರ್ತರು ಸಂಯಮದಿಂದ ಇರಬೇಕು'' ಎಂದರು.

ಇದನ್ನೂ ಓದಿ: ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.