ETV Bharat / bharat

84ನೇ ವರ್ಷಕ್ಕೆ ಕಾಲಿಟ್ಟ ಶರದ್ ಪವಾರ್: ಪ್ರಧಾನಿ ಮೋದಿ, ಅಜಿತ್ ಪವಾರ್ ಸೇರಿ ಗಣ್ಯರಿಂದ ಶುಭಾಶಯ - SHARAD PAWAR BIRTHDAY

ಶರದ್ ಪವಾರ್ ಇಂದು 84ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

84ನೇ ವರ್ಷಕ್ಕೆ ಕಾಲಿಟ್ಟ ಶರದ್ ಪವಾರ್
84ನೇ ವರ್ಷಕ್ಕೆ ಕಾಲಿಟ್ಟ ಶರದ್ ಪವಾರ್ (IANS)
author img

By PTI

Published : Dec 12, 2024, 1:58 PM IST

ನವದೆಹಲಿ: ಎನ್​ಸಿಪಿ-ಎಸ್​ಪಿ ಮುಖ್ಯಸ್ಥ ಶರದ್ ಪವಾರ್ ಗುರುವಾರ 84 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕುಟುಂಬ ಸದಸ್ಯರು ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಹಿತೈಷಿಗಳೊಂದಿಗೆ ಪವಾರ್ ಹುಟ್ಟುಹಬ್ಬ ಆಚರಿಸಿಕೊಂಡರು. ಮಾಜಿ ಕೇಂದ್ರ ಸಚಿವರಾಗಿರುವ ಪವಾರ್ ಅವರು ದೆಹಲಿಯ ತಮ್ಮ 6, ಜನಪಥ್ ನಿವಾಸದಲ್ಲಿ ಖಡ್ಗದಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್​ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸೇರಿದಂತೆ ಹಲವು ಗಣ್ಯರು ಹಿರಿಯ ನಾಯಕನಿಗೆ ಶುಭ ಕೋರಿದ್ದಾರೆ. ಕಳೆದ ವರ್ಷ ಶರದ್ ಪವಾರ್ ಅವರಿಂದ ಬೇರ್ಪಟ್ಟು ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ದೊಡ್ಡ ಮಟ್ಟದ ಸೋಲುಣಿಸಿದ ಅಜಿತ್ ಪವಾರ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬದ ಆಚರಣೆಯಲ್ಲಿ ಹಾಜರಾಗಿದ್ದು ಗಮನಾರ್ಹ.

ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಅವರ ಮಗ ಪಾರ್ಥ್ ಪವಾರ್ ಅವರು ಎನ್​ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಮತ್ತು ಸುನಿಲ್ ತಟ್ಕರೆ ಅವರೊಂದಿಗೆ ಹಿರಿಯ ಪವಾರ್ ಅವರನ್ನು ಭೇಟಿಯಾದರು.

ಪವಾರ್​ ಬೆಳವಣಿಗೆಯ ಹಾದಿ ಹೀಗಿದೆ; ಡಿಸೆಂಬರ್ 12, 1940 ರಂದು ಜನಿಸಿದ ಪವಾರ್ ಅವರು ಕಾಲೇಜಿನಲ್ಲಿದ್ದಾಗ ರಾಜಕೀಯಕ್ಕೆ ಧುಮುಕಿದರು ಮತ್ತು ಹಿರಿಯ ಕಾಂಗ್ರೆಸ್ ನಾಯಕ ಯಶವಂತರಾವ್ ಚವಾಣ್ ಅವರ ಆಪ್ತರಾದರು. ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಪವಾರ್ ಅವರು ರಕ್ಷಣಾ ಸಚಿವರಾಗಿ ಮತ್ತು ಕೇಂದ್ರ ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

1999 ರಲ್ಲಿ ಕಾಂಗ್ರೆಸ್​ನಿಂದ ಬೇರ್ಪಟ್ಟ ಪವಾರ್​: ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ವಿಷಯದ ಬಗ್ಗೆ ಪವಾರ್ 1999 ರಲ್ಲಿ ಕಾಂಗ್ರೆಸ್​ನಿಂದ ಬೇರ್ಪಟ್ಟು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಕಳೆದ ವರ್ಷ ಜುಲೈನಲ್ಲಿ, ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದ ಅಜಿತ್ ಪವಾರ್ ಅವರು ಪಕ್ಷದ ಮೂರನೇ ಎರಡರಷ್ಟು ಶಾಸಕರನ್ನು ಒಡೆದು ಹೊಸ ಬಣ ಸ್ಥಾಪಿಸುವುದರೊಂದಿಗೆ ಎನ್​ಸಿಪಿ ಇಬ್ಭಾಗವಾಯಿತು.

ನಂತರ, ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಗುಂಪನ್ನು ನಿಜವಾದ ಎನ್​ಸಿಪಿ ಎಂದು ಗುರುತಿಸಿತು ಮತ್ತು ತಮ್ಮ ಪಕ್ಷಕ್ಕೆ ಹೊಸ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಶರದ್ ಪವಾರ್ ನೇತೃತ್ವದ ಬಣಕ್ಕೆ ಸೂಚಿಸಿತ್ತು.

ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್​ಸಿಪಿಯನ್ನು ಒಳಗೊಂಡ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಕಾಂಗ್ರೆಸ್, ಶಿವಸೇನೆ-ಯುಬಿಟಿ ಮತ್ತು ಎನ್​ಸಿಪಿ-ಎಸ್​ಪಿಯ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಅನ್ನು ಸೋಲಿಸಿತು. 288 ಸದಸ್ಯರ ವಿಧಾನಸಭೆಯಲ್ಲಿ ಮಹಾಯುತಿ 235 ಸ್ಥಾನಗಳನ್ನು ಗೆದ್ದರೆ, ಪ್ರತಿಪಕ್ಷಗಳ ಮೈತ್ರಿಕೂಟವು 46 ಸ್ಥಾನಗಳಿಗೆ ಸೀಮಿತವಾಯಿತು.

ಇದನ್ನೂ ಓದಿ : ಆಂಧ್ರಪ್ರದೇಶಕ್ಕೆ ಅಮರಾವತಿ ಏಕೈಕ ರಾಜಧಾನಿಯಾಗಿರಲಿದೆ; ಸುಪ್ರೀಂಗೆ ಸರ್ಕಾರದ ಅಫಿಡವಿಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.