ETV Bharat / bharat

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹೊಸ ಚೈತನ್ಯದಿಂದ 100 ದಿನ ಕೆಲಸ ಮಾಡಿ: ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ - PM Modi

ಮುಂದಿನ ಐದು ವರ್ಷಗಳು ನಿರ್ಣಾಯಕವಾಗಿವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು 100 ದಿನಗಳ ಕಾಲ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕೆಂದು ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

Seeking stronger mandate for India's benefit: PM Modi
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹೊಸ ಚೈತನ್ಯದಿಂದ 100 ದಿನ ಕೆಲಸ ಮಾಡಿ: ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ
author img

By PTI

Published : Feb 18, 2024, 8:45 PM IST

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಜನಾದೇಶದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹೊಸ ಮತದಾರರನ್ನು ತಲುಪಲು ಮತ್ತು ಅವರ ವಿಶ್ವಾಸವನ್ನು ಗಳಿಸಲು ಮುಂದಿನ 100 ದಿನಗಳ ಕಾಲ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸದಿಂದ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮುಂದಿನ ಐದು ವರ್ಷಗಳು ನಿರ್ಣಾಯಕವಾಗಿದೆ. ನಾವು ವಿಕಸಿತ್ ಭಾರತ್' ಕಡೆಗೆ ಒಂದು ದೊಡ್ಡ ಜಿಗಿತವನ್ನು ತೆಗೆದುಕೊಳ್ಳಬೇಕಾಗಿದೆ. ಬಿಜೆಪಿಯು ಪ್ರಬಲ ಸಂಖ್ಯೆಯಲ್ಲಿ ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲ ಅನಿವಾರ್ಯತೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹತಾಶಗೊಂಡಿದೆ. ಆದ್ದರಿಂದ ಮೋದಿಯನ್ನು ನಿಂದಿಸುವುದು ಮತ್ತು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದೇ ಆ ಪಕ್ಷದ ನಾಯಕರ ಏಕೈಕ ಅಂಶವಾಗಿದೆ. ಆದರೆ, ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400 ಸ್ಥಾನ ದಾಟಬೇಕಾದರೆ, ಬಿಜೆಪಿ 370ರ ಮೈಲಿಗಲ್ಲನ್ನು ದಾಟಬೇಕು. ಚುನಾವಣೆಗಳು ಇನ್ನೂ ನಡೆಯಬೇಕಿದೆ. ಆದರೆ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ತಮ್ಮ ರಾಷ್ಟ್ರಕ್ಕೆ ಭೇಟಿ ನೀಡುವಂತೆ ನನಗೆ ಈಗಾಗಲೇ ವಿವಿಧ ದೇಶಗಳಿಂದ ಆಹ್ವಾನಗಳಿವೆ. ಇದರರ್ಥ ವಿಶ್ವದಾದ್ಯಂತ ಹಲವಾರು ದೇಶಗಳು ಸಹ ಬಿಜೆಪಿ ಸರ್ಕಾರ ಮರಳುವ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿವೆ ಎಂದರು.

ನಾವು ದೇಶವನ್ನು ಮೆಗಾ ಹಗರಣಗಳು ಮತ್ತು ಭಯೋತ್ಪಾದಕ ದಾಳಿಗಳಿಂದ ಮುಕ್ತಗೊಳಿಸಿದ್ದೇವೆ. ಬಡ ಮತ್ತು ಮಧ್ಯಮ ವರ್ಗದವರ ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ. ಒಮ್ಮೆ ಹಿರಿಯ ನಾಯಕರೊಬ್ಬರು ನನಗೆ ಪ್ರಧಾನಿ ಮತ್ತು ಸಿಎಂ ಆಗಿ ಸಾಕಷ್ಟು ಕೆಲಸ ಮಾಡಿದ್ದೀರಿ, ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದರು. ಆದರೆ, ನಾನು ರಾಷ್ಟ್ರನೀತಿಗಾಗಿ ಕೆಲಸ ಮಾಡುತ್ತಿದ್ದೇನೆ. ರಾಜನೀತಿಗಾಗಿ ಅಲ್ಲ ಎಂದು ಮೋದಿ ತಿಳಿಸಿದರು.

ನಾನು ನನ್ನ ಸ್ವಂತ ಸಂತೋಷಕ್ಕಾಗಿ ಬದುಕುವವನಲ್ಲ. ನಾನು ಬಿಜೆಪಿಗೆ ಮೂರನೇ ಅವಧಿ ಅಧಿಕಾರಕ್ಕೆ ಪ್ರತಿಪಾದಿಸುತ್ತಿರುವುದು ರಾಜಕೀಯ ಲಾಭಕ್ಕಾಗಿ ಅಲ್ಲ. ಭಾರತದ ಲಾಭಕ್ಕಾಗಿ. ನನ್ನ ಪ್ರಯತ್ನಗಳು ಭಾರತದ ಜನರಿಗೆ ಸಮರ್ಪಿತವಾಗಿವೆ. ಭಾರತೀಯರ ಕನಸುಗಳು ನನ್ನ ಬದ್ಧತೆಗಳಾಗಿವೆ. ಕೆಂಪು ಕೋಟೆಯಿಂದ ಶೌಚಾಲಯದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಮಹಿಳೆಯರ ಘನತೆಯ ಬಗ್ಗೆ ಮಾತನಾಡಿದ ಮೊದಲ ಪ್ರಧಾನಿ ನಾನು ಎಂದು ವಿವರಿಸಿದರು.

ಬಿಜೆಪಿ ಐದು ಶತಮಾನದ ಜನರ ಕಾಯುವಿಕೆಯನ್ನು ಕೊನೆಗೊಳಿಸಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದೆ. 500 ವರ್ಷಗಳ ನಂತರ ಗುಜರಾತ್‌ನ ಪಾವಗಡದಲ್ಲಿ ಧಾರ್ಮಿಕ ಧ್ವಜ ಹಾರಿಸಲಾಗಿದೆ. ಏಳು ದಶಕಗಳ ನಂತರ ನಾವು ಕರ್ತಾರ್‌ಪುರ ಸಾಹಿಬ್ ಹೆದ್ದಾರಿಯನ್ನು ತೆರೆದಿದ್ದೇವೆ. ಏಳು ದಶಕಗಳ ಕಾಲ ಕಾಯುವಿಕೆ ನಂತರ ದೇಶಕ್ಕೆ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿದೆ. ಏಕ್ ಭಾರತ್, ಶ್ರೇಷ್ಠ್ ಭಾರತ್​ ಎಂಬ ಮನೋಭಾವವು ನಮ್ಮ ಆಡಳಿತದಲ್ಲಿ ಗೋಚರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈಶಾನ್ಯ ಭಾಗವನ್ನು ಹಿಂದಿನ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು. ಆದರೆ, ನಾವು ಮತ ಮತ್ತು ಸ್ಥಾನಕ್ಕಾಗಿ ಕೆಲಸ ಮಾಡುವುದಿಲ್ಲ. ನಮಗೆ ದೇಶದ ಪ್ರತಿಯೊಂದು ಮೂಲೆಯೂ ಸಮೃದ್ಧವಾಗಿರಬೇಕು ಮತ್ತು ಅಭಿವೃದ್ಧಿ ಹೊಂದಬೇಕು. ಇದು ನಮ್ಮ ನಂಬಿಕೆ. ಮೊದಲ ಬಾರಿಗೆ ನಾಗಾಲ್ಯಾಂಡ್‌ನ ಮಹಿಳೆಯೊಬ್ಬರು ರಾಜ್ಯಸಭಾ ಸದಸ್ಯರಾಗಿದ್ದಾರೆ. ನಾವು ಮೊದಲ ಬಾರಿಗೆ ತ್ರಿಪುರಾದ ವ್ಯಕ್ತಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ಸರ್ಕಾರದಲ್ಲಿ ಮೊದಲ ಬಾರಿಗೆ ಅರುಣಾಚಲ ಪ್ರದೇಶಕ್ಕೆ ಕ್ಯಾಬಿನೆಟ್ ಮಂತ್ರಿ ಸಿಕ್ಕಿದ್ದಾರೆ. ನಮ್ಮ ಸರ್ಕಾರ ಎಲ್ಲರಿಗೂ ಸೇರಿದ್ದು, ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್ ನಮ್ಮ ಕೆಲಸದ ನೀತಿಯಲ್ಲಿ ಪ್ರತಿಫಲಿಸುತ್ತದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: 'ಪ್ರತಿಪಕ್ಷಗಳ ಹತಾಶೆ, ಬಿಜೆಪಿಯೇ ಭರವಸೆ': I.N.D.I.A ಮೈತ್ರಿಕೂಟದ ವಿರುದ್ಧ ಅಮಿತ್ ಶಾ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.