ETV Bharat / bharat

ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗಕ್ಕೆ ಜೂನ್​ 30ರವರೆಗೆ ಸಮಯಾವಕಾಶ ಕೋರಿದ ಎಸ್‌ಬಿಐ - Lok Sabha Election

ರದ್ದಾದ ಚುನಾವಣಾ ಬಾಂಡ್​ಗಳನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ವ್ಯಕ್ತಿಗಳ ಮಾಹಿತಿಯನ್ನು ಬಹಿರಂಗ ಮಾಡಲು ಎಸ್​ಬಿಐ ಹೆಚ್ಚಿನ ಕಾಲಾವಕಾಶ ಕೋರಿದೆ.

ಚುನಾವಣಾ ಬಾಂಡ್‌ಗಳ ಮಾಹಿತಿ
ಚುನಾವಣಾ ಬಾಂಡ್‌ಗಳ ಮಾಹಿತಿ
author img

By PTI

Published : Mar 5, 2024, 11:35 AM IST

ನವದೆಹಲಿ: ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್​ಗಳ ಸಂಪೂರ್ಣ ವಿವರವನ್ನು ಬಹಿರಂಗಪಡಿಸಲು ಜೂನ್​ 30ರವರೆಗೆ ಕಾಲಾವಕಾಶ ನೀಡಬೇಕು ಎಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್​ಗೆ ಸೋಮವಾರ ಮನವಿ ಮಾಡಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್​, ಚುನಾವಣಾ ಬಾಂಡ್​ ಯೋಜನೆ ಅಸಾಂವಿಧಾನಿಕವಾಗಿದೆ ಎಂದು ರದ್ದು ಮಾಡಿ ಆದೇಶಿಸಿತು. ಬಳಿಕ ಬ್ಯಾಂಕ್​ನಿಂದ ಪಡೆಯಲಾದ ಬಾಂಡ್​ಗಳ ವಿವರಗಳನ್ನು ನೀಡಲು ಎಸ್‌ಬಿಐಗೆ ಮಾರ್ಚ್​ 6 ಗಡುವು ನೀಡಿತ್ತು. ಆದರೆ, ಈ ಸೀಮಿತ ಅವಧಿಯೊಳಗೆ ಪ್ರತಿ ಬಾಂಡ್​ನ ಮಾಹಿತಿ ನೀಡಲು ಸಾಧ್ಯವಿಲ್ಲ. ಡೇಟಾ ಸಂಗ್ರಹಿಸುವ ಪ್ರಕ್ರಿಯೆಗೆ ಸಮಯ ಬೇಕು ಎಂದು ಬ್ಯಾಂಕ್​ ಹೇಳಿದೆ.

ಈ ಕುರಿತು ಸುಪ್ರೀಂಗೆ ಮನವಿ ಅರ್ಜಿ ಸಲ್ಲಿಸಿದ್ದು, ದಾನಿಗಳ ಗುರುತನ್ನು ಅನಾಮಧೇಯವಾಗಿ ಇಡುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಬಾಂಡ್‌ಗಳನ್ನು ಡಿಕೋಡಿಂಗ್ ಮಾಡುವುದು ಮತ್ತು ನೀಡಿದ ದೇಣಿಗೆಗಳಿಗೆ ದಾನಿಗಳನ್ನು ಗುರುತಿಸುವುದು ಸಂಕೀರ್ಣ ಪ್ರಕ್ರಿಯೆಯಾಗಿದೆ. ಹೀಗಾಗಿ ನೀಡಿದ ಗಡುವನ್ನು ವಿಸ್ತರಣೆ ಮಾಡಬೇಕು ಎಂದು ಕೋರಲಾಗಿದೆ.

ಬಾಂಡ್‌ನ ವಿತರಣೆ ಡೇಟಾ ಮತ್ತು ಅದರ ನಗದೀಕರಣ ಎರಡು ವಿಭಿನ್ನ ಹಂತದಲ್ಲಿ ನಡೆಸಲಾಗಿದೆ. ಇದಕ್ಕಾಗಿ ಏಕರೂಪದ ದಾಖಲೆ ಸಂಗ್ರಹಿಸಿಲ್ಲ. ದಾನಿಗಳ ಗುರುತು ಬಹಿರಂಗವಾಗದಂತೆ ಮಾಡಲು ಈ ರೀತಿ ಮಾಡಲಾಗಿದೆ. ದಾನಿಗಳ ವಿವರಗಳನ್ನು ನಿಗದಿತ ಶಾಖೆಗಳಲ್ಲಿ ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ. ಎಲ್ಲವನ್ನೂ ಕ್ರೋಢೀಕರಿಸಿ ಮಾಹಿತಿ ಕಲೆ ಹಾಕಬೇಕಿದೆ ಎಂದಿದೆ.

ಬಾಂಡ್​ ಯೋಜನೆ ರದ್ದು: ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಯನ್ನು ಬಾಂಡ್​ಗಳಲ್ಲಿ ನೀಡುವಂತೆ ಕೇಂದ್ರ ಸರ್ಕಾರ ಜಾರಿಗೆ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಇದು ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ. ದೇಣಿಗೆ ನೀಡುವ ವ್ಯಕ್ತಿಯ ಹಣದ ಮೂಲದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಇದು ಭ್ರಷ್ಟಾಚಾರ ಮತ್ತು ಆರ್ಥಿಕ ಪೋಲಿಗೆ ಕಾರಣವಾಗುತ್ತದೆ ಎಂದು ಚುನಾವಣಾ ಬಾಂಡ್​ ಯೋಜನೆಯನ್ನೇ ಸುಪ್ರೀಂ ಕೋರ್ಟ್​ ರದ್ದು ಮಾಡಿತ್ತು.

ಆರು ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆದಾರರ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅದನ್ನು ಆಯೋಗ ಸಾರ್ವಜನಿಕವಾಗಿ ಬಹಿರಂಗ ಮಾಡಲೂ ಸೂಚಿಸಿದೆ.

ಅವಧಿ ವಿಸ್ತರಣೆಗೆ ಆಕ್ಷೇಪ: ಚುನಾವಣಾ ಬಾಂಡ್​ಗಳ ಮಾಹಿತಿ ಬಹಿರಂಗಕ್ಕೆ ಎಸ್​ಬಿಐ ಅವಧಿ ವಿಸ್ತರಣೆ ಕೋರಿದ್ದನ್ನು ವಿಪಕ್ಷಗಳು ಟೀಕಿಸಿವೆ. ಜೂನ್​ ವೇಳೆಗೆ ಲೋಕಸಭೆ ಚುನಾವಣೆ ಮುಗಿದಿರುತ್ತದೆ. ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಉಳಿಸುವ ಯತ್ನ ಇದಾಗಿದೆ ಎಂದು ಆರೋಪಿಸಿವೆ.

ಇದನ್ನೂ ಓದಿ: ಚುನಾವಣಾ ಬಾಂಡ್​ಗಳು ಸಂವಿಧಾನ ಬಾಹಿರ, ತಕ್ಷಣವೇ ರದ್ದು ಮಾಡಿ: ಸುಪ್ರೀಂಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.