ETV Bharat / bharat

ಸಲ್ಮಾನ್​ ಖಾನ್​ಗೆ ಮತ್ತೆ ಜೀವ ಬೆದರಿಕೆ ಕರೆ: ಗೀತ ರಚನೆಕಾರನಿಗೂ ಕೊಲೆ ಬೆದರಿಕೆ - SALMAN KHAN GETS ANOTHER THREA

ಸಲ್ಮಾನ್​ ಖಾನ್​ಗೆ ಹೊಸದಾಗಿ ಬಂದಿರುವ ಬೆದರಿಕೆ ಕರೆಯಲ್ಲಿ ಕೇವಲ ನಟನಿಗೆ ಮಾತ್ರವಲ್ಲ, ಲಾರೆನ್ಸ್​​ ಬಿಷ್ಣೋಯಿ ಬಗ್ಗೆ ಸಂಗೀತ ಸಂಯೋಜಿಸಿರುವ ಗೀತ ರಚನೆಕಾರನನ್ನೂ ಕೊಲ್ಲುವ ಬೆದರಿಕೆ ಒಡ್ಡಲಾಗಿದೆ.

salman-khan-gets-another-threat-message-sent-to-mumbai-traffic-police-helpline
ಸಲ್ಮಾನ್​ ಖಾನ್​ (ANI)
author img

By PTI

Published : Nov 8, 2024, 1:03 PM IST

ಹೈದರಾಬಾದ್: ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಜೀವ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿವೆ. ಒಂದೇ ವಾರದಲ್ಲಿ ಎರಡನೇ ಬೆದರಿಕೆ ಕರೆ ಮಾಡಲಾಗಿದ್ದು, ದುಷ್ಕರ್ಮಿಗಳು ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ. ಗುರುವಾರ ಮುಂಬೈ ಟ್ರಾಫಿಕ್​ ಕಂಟ್ರೋಲ್​ ರೂಮ್​ಗೆ ಈ ಕರೆ ಬಂದಿದ್ದು, ಇದರ ಎರಡು ದಿನಗಳ ಹಿಂದಷ್ಟೇ ಇದೇ ಗ್ಯಾಂಗ್​ ಹೆಸರು ಹೇಳಿಕೊಂಡು ಬೆದರಿಕೆ ಕರೆ ಮಾಡಲಾಗಿತ್ತು.

ಹೊಸದಾಗಿ ಬಂದಿರುವ ಬೆದರಿಕೆ ಕರೆಯಲ್ಲಿ ಕೇವಲ ನಟನಿಗೆ ಮಾತ್ರವಲ್ಲ, ಲಾರೆನ್ಸ್​​ ಬಿಷ್ಣೋಯಿ ಬಗ್ಗೆ ಸಂಗೀತ ಸಂಯೋಜಿಸಿರುವ ಗೀತ ರಚನೆಕಾರನನ್ನು ಕೊಲ್ಲುವ ಬೆದರಿಕೆ ಒಡ್ಡಲಾಗಿದೆ. ಅಲ್ಲದೇ, ಧೈರ್ಯವಿದ್ದರೆ ’ಮೈ ಸಿಕಂದರ್​ ಹೂನ್​​’ ಗೀತ ರಚನೆಕಾರರನ್ನು ಉಳಿಸಿಕೊಳ್ಳುವಂತೆ ಸವಾಲು ಹಾಕಲಾಗಿದೆ. ಕರೆ ಮಾಡಿದ ಅಪರಿಚಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕರೆಯನ್ನು ಗಂಭೀರವಾಗಿ ಸ್ವೀಕರಿಸಿರುವ ಮುಂಬೈ ಪೊಲೀಸರು, ಕರೆಯ ಮೂಲ ಪತ್ತೆಗೆ ಮುಂದಾಗಿದ್ದಾರೆ. ಕಳೆದ ವಾರವೂ ಕೂಡ ಸಲ್ಮಾನ್​ ಖಾನ್​ಗೆ ಹತ್ಯೆ ಮಾಡುವ ಅನೇಕ ಬೆದರಿಕೆ ಕರೆಗಳು ಮುಂಬೈ ಟ್ರಾಫಿಕ್​ ಪೊಲೀಸ್​ ಸಹಾಯವಾಣಿಗೆ ಬಂದಿದ್ದವು.

ಅಹಮದಾಬಾದ್​ನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ನ ಸದಸ್ಯರೆಂದು ಶಂಕಿಸಲಾದ ಕೆಲವರು ಏಪ್ರಿಲ್​ನಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್​ ಖಾನ್​ ಮನೆ ಮುಂದೆ ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ನವಿಮುಂಬೈ ಪೊಲೀಸರು, ಸಲ್ಮಾನ್​ ಖಾನ್​ ಅವರನ್ನು ಕೊಲ್ಲುವ ವಿಫಲ ಯತ್ನವನ್ನು ಬಿಷ್ಣೋಯಿ ಗ್ಯಾಂಗ್​ ನಡೆಸಿತ್ತು ಎಂದು ತಿಳಿಸಿದ್ದರು.

ಕರ್ನಾಟಕದಲ್ಲಿ ಸೆರೆ ಸಿಕ್ಕ ಆರೋಪಿ: ನವೆಂಬರ್​ 5ರಂದು ನಟನಿಗೆ ಬೆದರಿಕೆ ಕರೆ ಮಾಡಿ, ಬಿಷ್ಣೋಯಿ ಸಮಾಜದ ಕ್ಷಮೆ ಕೋರಬೇಕು, ಇಲ್ಲದಿದ್ದರೆ 5 ಕೋಟಿ ರೂ ಹಣ ನೀಡಬೇಕು ಎಂದು ಕರೆ ಮಾಡಿ ಬೇಡಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದರು.

ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಆರೋಪಿ ಕರ್ನಾಟಕದ ಹಾವೇರಿಯಲ್ಲಿ ಕಳೆದೆರಡು ತಿಂಗಳಿನಿಂದ ನೆಲೆಸಿರುವುದು ಗೊತ್ತಾಗಿದೆ. ಈತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ, ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಬಗ್ಗೆ ತಾನು ಸಾಕಷ್ಟು ಅಭಿಮಾನ ಹೊಂದಿದ್ದಾಗಿ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಬೆನ್ನಲ್ಲೇ ಸೂಪರ್​ ಸ್ಟಾರ್ ಶಾರುಖ್​ ಖಾನ್​ಗೂ ಕೊಲೆ ಬೆದರಿಕೆ: ಎಫ್​​ಐಆರ್​ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.