ETV Bharat / bharat

ಜಿಲ್ಲಾ ಕಾರಾಗೃಹದಲ್ಲಿ ಸನ್ಯಾಸ ದೀಕ್ಷೆ ಪಡೆದ ಭೂಗತ ಪಾತಕಿ ಪ್ರಕಾಶ್ ಪಾಂಡೆ! - Don Prakash Pandey - DON PRAKASH PANDEY

ಭೂಗತ ಪಾತಕಿ ಪ್ರಕಾಶ್ ಪಾಂಡೆಗೆ ಜಿಲ್ಲಾ ಕಾರಾಗೃಹದಲ್ಲಿ ದೀಕ್ಷೆ ನೀಡಲಾಗಿದ್ದು, ಇದೀಗ ಸನ್ಯಾಸಿ ಪ್ರಕಾಶಾನಂದ ಗಿರಿಯಾಗಿದ್ದಾರೆ.

DON PRAKASH PANDEY
ಭೂಗತ ಪಾತಕಿ ಪ್ರಕಾಶ್ ಪಾಂಡೆ (ETV Bharat)
author img

By ETV Bharat Karnataka Team

Published : Sep 6, 2024, 8:10 PM IST

ಅಲ್ಮೋರಾ (ಉತ್ತರಾಖಂಡ): ಅಲ್ಮೋರಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಡಾನ್ ಪ್ರಕಾಶ್ ಪಾಂಡೆ ಅಲಿಯಾಸ್​ ಪಿಪಿ ದೀಕ್ಷೆ ತೆಗೆದುಕೊಳ್ಳುವ ಮೂಲಕ ಸನ್ಯಾಸಿ ಪ್ರಕಾಶಾನಂದ ಗಿರಿಯಾಗಿ ಪರಿವರ್ತನೆಯಾಗಿದ್ದಾರೆ. ಉತ್ತರಾಖಂಡದ ಅಲ್ಮೋರಾ ಜೈಲಿನಲ್ಲಿರುವ ಭೂಗತ ಪಾತಕಿ ಪ್ರಕಾಶ್ ಪಾಂಡೆ ಅವರನ್ನು ಇಲ್ಲಿಯ ಶ್ರೀ ಪಂಚ ದಶನಂ ಜುನಾ ಅಖಾರಾ ಎಂಬ ಪ್ರಸಿದ್ಧ ಮಹಾ‌ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಮಾಡಲಾಯಿತು. ಈ ವೇಳೆ ವಿವಿಧ ಮಠಾಧೀಶರು ಅವರನ್ನು ಹರಿಸಿದರು.

Underworld don Prakash Pandey alias PP became Prakashanand Giri
ಸನ್ಯಾಸಿಯಾದ ಭೂಗತ ಪಾತಕಿ ಪ್ರಕಾಶ್ ಪಾಂಡೆ (ETV Bharat)

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿದ್ದರಿಂದ ಅಲ್ಮೋರಾ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಕಾರಾಗೃಹದಲ್ಲಿಯೇ ವಿವಿಧ ಮಠಾಧೀಶರು ಅವರಿಗೆ ದೀಕ್ಷೆ ನೀಡಿದರು. ಈ ವೇಳೆ, ಅವರಿಗೆ ಪ್ರಕಾಶಾನಂದ ಗಿರಿ ಎಂಬ ನೂತನ ನಾಮಾಂಕಿತ ಕೂಡ ಇಡಲಾಯಿತು. ದೀಕ್ಷೆ ನೀಡಲು ಹರಿದ್ವಾರದ ಶ್ರೀ ಪಂಚದಶನಂ ಜುನ ಅಖಾರದ ಋಷಿಗಳು ಮತ್ತು ಸಂತರು ಆಗಮಿಸಿದ್ದರು. ದೀಕ್ಷೆ ಜೊತೆಗೆ ಅಖಾರದ ವಿವಿಧ ಮಠ ಮತ್ತು ಆಶ್ರಮಗಳ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಖಾರದ ಪೊಲೀಸ್ ಅಧಿಕಾರಿ ರಾಜೇಂದ್ರ ಗಿರಿ, ಧಾರ್ಮಿಕತೆ ಬಗ್ಗೆ ಆಸಕ್ತಿ ಇದ್ದ ಪ್ರಕಾಶ್ ಪಾಂಡೆಗೆ ತಮ್ಮ ಇಚ್ಛೆಯಂತೆ ಜೈಲಿನಲ್ಲಿ ಗುರುದೀಕ್ಷೆ ನೀಡಲಾಯಿತು. ಪ್ರಕಾಶಾನಂದ ಗಿರಿ ಎಂಬ ಹೊಸ ಹೆಸರು ಕೂಡ ಇಡಲಾಯಿತು. ವಿವಿಧ ಮಠಾಧೀಶರು ಈ ವೇಳೆ ಆಶೀರ್ವಾದ ಕೂಡ ಮಾಡಿದರು ಎಂದರು.

ಭೌತಿಕ ಪ್ರಪಂಚದಿಂದ ದೂರ ಸರಿದ ಪ್ರಕಾಶ್ ಪಾಂಡೆ, ಇನ್ಮುಂದೆ ಅಖಾರಾ ಎಂಬ ಮಹಾ‌ಸಂಸ್ಥಾನಕ್ಕೆ ಸೇರಿದ ಗಂಗೊಳ್ಳಿಹಾಟ್‌ನ ಲಂಬಕೇಶ್ವರ ಮಹಾದೇವ ದೇವಸ್ಥಾನ, ಮುನ್ಸಿಯಾರಿಯ ಕಾಳಿಕಾ ಮಾತಾ ದೇವಸ್ಥಾನ ಮತ್ತು ಕಾಲ ಮುನಿ ದೇವಸ್ಥಾನದ ಉತ್ತರಾಧಿಕಾರಿ. 2025ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳದಲ್ಲಿ ಮುಂದಿನ ಪ್ರಕ್ರಿಯೆ ನಡೆಯಲಿದ್ದು, ಇದಾದ ಬಳಿಕವೇ ಅವರಿಗೆ ಜವಾಬ್ದಾರಿ ವಹಿಸಲಾಗುವುದು ಎಂದು ಜುನಾ ಅಖಾರಾ ಸಂಸ್ಥಾನ ಅವರಿಗೆ ಬೋಧನೆ ಮಾಡಿದೆ.

ಪ್ರಕಾಶ್ ಪಾಂಡೆ ಯಾರು: ಪ್ರಕಾಶ್ ಪಾಂಡೆ ಮೂಲತಃ ನೈನಿತಾಲ್ ಜಿಲ್ಲೆಯ ಖಾನಯ್ಯ ಎಂಬ ಸಣ್ಣ ಹಳ್ಳಿಯವರು. ತಂದೆ ಸೈನಿಕರಾಗಿದ್ದು, ತಾಯಿ ಬಾಲ್ಯದಲ್ಲಿಯೇ ಮೃತಪಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮುಂಬೈಗೆ ಬಂದಿದ್ದ ಪ್ರಕಾಶ್ ಪಾಂಡೆ, 90ರ ದಶಕದಲ್ಲಿ ಛೋಟಾ ರಾಜನ್ ಅವರನ್ನು ಭೇಟಿಯಾಗಿದ್ದ. ಕೆಲವೇ ದಿನಗಳಲ್ಲಿ ಪ್ರಕಾಶ್ ಪಾಂಡೆ ಛೋಟಾ ರಾಜನ್ ಬಲಗೈ ಬಂಟ ಕೂಡಾ ಆದರು. ಕೆಲವು ದಿನಗಳ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಛೋಟಾ ರಾಜನ್ ಅವರ ಸಂಘ ತೊರೆದ. ಆ ಬಳಿಕ ದಿಲ್ಲಿ ಕ್ರೈಂ ಬ್ರಾಂಚ್ ಎಸಿಪಿ ರಾಜ್‌ಬೀರ್ ಸಿಂಗ್ ಅವರನ್ನು ಹಾಡಹಗಲೇ ಕೊಲೆ ಮಾಡಿದ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕಾಶ್ ಪಾಂಡೆ ಅವರನ್ನು ಜೈಲಿಗೆ ಕಳುಹಿಸಿದ್ದರು. ಬೇಲ್​ ಮೂಲಕ ಹೊರ ಬಂದ ಪ್ರಕಾಶ್ ಪಾಂಡೆ ವಿಯೆಟ್ನಾಂಗೆ ಪಲಾಯನ ಮಾಡಿದ್ದಲ್ಲದೇ ಅಲ್ಲಿಂದಲೇ ತನ್ನ ವ್ಯವಹಾರ ನಡೆಸುತ್ತಿದ್ದ. ಅಲ್ಲಿಂದ ಮತ್ತೆ ಅವರನ್ನು ಬಂಧಿಸಿ ಉತ್ತರಾಖಂಡದ ಜೈಲಿನಲ್ಲಿ ಇರಿಸಲಾಗಿತ್ತು. ಕೊಲೆ ಆರೋಪದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಸದ್ಯ ಅಲ್ಮೋರಾ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: 34 ವರ್ಷದ ಹಿಂದೆ 20 ರೂ ಲಂಚ; ಈಗ ಕಾನ್ಸ್​ಟೇಬಲ್​ ಬಂಧನಕ್ಕೆ ಕೋರ್ಟ್​ ಆದೇಶ - Court Orders Arrest of Constable

ETV Bharat Logo

Copyright © 2025 Ushodaya Enterprises Pvt. Ltd., All Rights Reserved.