ETV Bharat / bharat

ಕೇರಳದಲ್ಲಿ ಆ.31ರಿಂದ ಆರ್​ಎಸ್​ಎಸ್​ ಸಮನ್ವಯ ಬೈಠಕ್: ಶತಮಾನೋತ್ಸವ ಆಚರಣೆಯ ಕುರಿತು ಚರ್ಚೆ - RSS samanvay baithak

author img

By PTI

Published : Aug 30, 2024, 5:35 PM IST

ಕೇರಳದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಆರ್​ಎಸ್​ಎಸ್​ ಸಮನ್ವಯ ಬೈಠಕ್ ನಡೆಯಲಿದೆ.

ಆರ್​ಎಸ್​ಎಸ್​ ಧ್ವಜ (ಪ್ರಾತಿನಿಧಿಕ ಚಿತ್ರ)
ಆರ್​ಎಸ್​ಎಸ್​ ಧ್ವಜ (ಪ್ರಾತಿನಿಧಿಕ ಚಿತ್ರ) (IANS)

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್ಎಸ್)ದ ಸಮನ್ವಯ ಸಭೆ ನಡೆಯಲಿದೆ. 2025ರಲ್ಲಿ ತನ್ನ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಮತ್ತು ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿಸಲಾಗಿರುವ ಉಪಕ್ರಮಗಳ ಕುರಿತು ಮೂರು ದಿನಗಳ ಕಾಲ ಸಮನ್ವಯ ಸಭೆ ನಡೆಯಲಿದೆ ಎಂದು ಆರ್​ಎಸ್​ಎಸ್​ ಶುಕ್ರವಾರ ತಿಳಿಸಿದೆ.

ಆಗಸ್ಟ್ 31, ಸೆಪ್ಟೆಂಬರ್ 1 ಮತ್ತು ಸೆಪ್ಟೆಂಬರ್ 2 ರಂದು ಅಖಿಲ ಭಾರತೀಯ ಸಮನ್ವಯ ಬೈಠಕ್ ನಡೆಯಲಿದ್ದು, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಆರು ಜಂಟಿ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ಆರ್​ಎಸ್ಎಸ್​ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಸುದ್ದಿಗಾರರಿಗೆ ತಿಳಿಸಿದರು.

ಇದಲ್ಲದೆ, ಸಭೆಯಲ್ಲಿ ಆರ್​ಎಸ್​ಎಸ್​ ಗೆ ಸಂಬಂಧಿಸಿದ ಸುಮಾರು 32 ಸಂಘಟನೆಗಳ 320 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದು ಆರ್​ಎಸ್ಎಸ್​ನ ಕಾರ್ಯಕಾರಿ ಸಭೆಯಲ್ಲ, ಆದರೆ ಆರ್​ಎಸ್​ಎಸ್​ಗೆ ಸಂಬಂಧಿಸಿದ ಸಂಘಟನೆಗಳ ಸಭೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಸಂಘಕ್ಕೆ ಸಂಬಂಧಿಸಿದ ಸಂಘಟನೆಗಳ ಕಾರ್ಯಕರ್ತರು ತಮ್ಮ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ವಿವಿಧ ವಿಷಯಗಳು, ಇತ್ತೀಚಿನ ಪ್ರಮುಖ ಘಟನೆಗಳು ಮತ್ತು ಸಾಮಾಜಿಕ ಬದಲಾವಣೆಯ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಅವರು ಹೇಳಿದರು.

ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅಂಬೇಕರ್, ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. 2025 ರ ವಿಜಯದಶಮಿಯಂದು ಸಂಘವು ತನ್ನ ಸ್ಥಾಪನೆಯ ನೂರನೇ ವರ್ಷಕ್ಕೆ ಪ್ರವೇಶಿಸಲಿದ್ದು, ಸಾಮಾಜಿಕ ಸುಧಾರಣೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಐದು ಉಪಕ್ರಮಗಳನ್ನು ಪ್ರಾರಂಭಿಸಲಿದೆ ಎಂದು ಅವರು ತಿಳಿಸಿದರು.

"ಈ ಉಪಕ್ರಮಗಳೆಂದರೆ- ಸಾಮಾಜಿಕ ಸಾಮರಸ್ಯ, ಕುಟುಂಬ ಜಾಗೃತಿ- ನಮ್ಮ ಕುಟುಂಬಗಳನ್ನು ಹೇಗೆ ಬಲಪಡಿಸಬಹುದು ಮತ್ತು ಅವರು ರಾಷ್ಟ್ರ ನಿರ್ಮಾಣದಲ್ಲಿ ಹೇಗೆ ಭಾಗವಹಿಸಬಹುದು ಎಂಬುದರ ಬಗ್ಗೆ, ಪರಿಸರ ಸಮಸ್ಯೆಗಳು- ಹೆಚ್ಚು ಪರಿಸರ ಸ್ನೇಹಿಯಾಗಲು ನಾವು ನಮ್ಮ ಜೀವನಶೈಲಿಯನ್ನು ಪ್ರಾಯೋಗಿಕವಾಗಿ ಹೇಗೆ ಬದಲಾಯಿಸಬಹುದು ಎಂಬ ಬಗ್ಗೆ, ಸ್ವದೇಶಿ, ಸ್ವತಂತ್ರ ಮತ್ತು ನಾಗರಿಕ ಕರ್ತವ್ಯಗಳು ಆಗಿವೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ರಾಮಜನ್ಮಭೂಮಿ ಚಳವಳಿಯ ರಾಯವಾಸ ಪೀಠಾಧೀಶ್ವರ ರಾಘವಾಚಾರ್ಯರು ನಿಧನ - seer Raghavacharya passes away

ETV Bharat Logo

Copyright © 2024 Ushodaya Enterprises Pvt. Ltd., All Rights Reserved.