ನಾಗ್ಪುರ(ಮಹಾರಾಷ್ಟ್ರ): ಭಾರತದ ಜನಸಂಖ್ಯಾ ವಿಚಾರ ಕುರಿತಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. "ಜನಸಂಖ್ಯಾ ಕುಸಿತ ಕಳವಳಕಾರಿ ವಿಷಯ. ಜನಸಂಖ್ಯಾ ಬೆಳವಣಿಗೆಯ ದರ ಶೇಕಡಾ 2.1ಕ್ಕಿಂತ ಕಡಿಮೆಯಾದರೆ ಅದು ಸಮಾಜದ ಉಳಿವಿಗೆ ಬಹುದೊಡ್ಡ ಅಪಾಯವಾಗುತ್ತದೆ. ಜನಸಂಖ್ಯಾ ಬೆಳವಣಿಗೆ ದರದ ಕುಸಿತವು ಸಮಾಜಕ್ಕೆ ಒಳ್ಳೆಯದಲ್ಲ" ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ 'ಕಠಾಳೆ ಕುಲ್ (ಕುಲ) ಸಮ್ಮೇಳನ'ದಲ್ಲಿ ಮಾತನಾಡಿದ ಅವರು, ಪ್ರತಿ ಕುಟುಂಬವು ಒಂದು ಘಟಕವಾಗಿದ್ದು, 'ಕುಟುಂಬ' (ಕುಟುಂಬ) ಸಮಾಜದ ಅವಿಭಾಜ್ಯ ಅಂಗವಾಗಿದೆ ಎಂದರು.
VIDEO | RSS chief Mohan Bhagwat addresses a public gathering in Nagpur, Maharashtra.
— Press Trust of India (@PTI_News) December 1, 2024
(Full video available on PTI Videos - https://t.co/n147TvrpG7) pic.twitter.com/7zFFiwTYTZ
"ಜನಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಲೋಕಸಂಖ್ಯಾ ಶಾಸ್ತ್ರದ ಪ್ರಕಾರ ಯಾವುದೇ ಸಮಾಜದ ಜನಸಂಖ್ಯಾ ಬೆಳವಣಿಗೆ ದರವು 2.1ಕ್ಕಿಂತ ಕಡಿಮೆಯಾದರೆ ಅಂಥ ಸಮಾಜ ತಾನಾಗಿಯೇ ನಾಶವಾಗುತ್ತದೆ. ಅದನ್ನು ಬೇರೆ ಯಾರೋ ನಾಶಪಡಿಸುವ ಅಗತ್ಯವೇ ಇಲ್ಲ" ಎಂದು ಭಾಗವತ್ ಹೇಳಿದರು.
1998 ಅಥವಾ 2002ರ ಸುಮಾರಿಗೆ ರೂಪಿಸಲಾದ ಭಾರತದ ಜನಸಂಖ್ಯಾ ನೀತಿಯು ಜನಸಂಖ್ಯಾ ಬೆಳವಣಿಗೆಯ ದರವು 2.1ಕ್ಕಿಂತ ಕಡಿಮೆ ಇರಬಾರದು ಎಂದು ಹೇಳುತ್ತದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ನುಡಿದರು.
"ನಮಗೆ ಎರಡಕ್ಕಿಂತ ಹೆಚ್ಚು ಮಕ್ಕಳು ಬೇಕು. ಅಂದರೆ ಮೂರು (ಜನಸಂಖ್ಯಾ ಬೆಳವಣಿಗೆಯ ದರವಾಗಿ) ಮಕ್ಕಳನ್ನು ಹೆರಬೇಕು. ಜನಸಂಖ್ಯಾ ವಿಜ್ಞಾನ ಕೂಡ ಇದನ್ನೇ ಹೇಳುತ್ತದೆ. ಸಮಾಜ ಉಳಿಯಬೇಕಾದರೆ ಈ ಪ್ರಮಾಣದ ಜನಸಂಖ್ಯಾ ಬೆಳವಣಿಗೆ ದರ ಅಗತ್ಯವಾಗಿದೆ" ಎಂದು ಅವರು ಪ್ರತಿಪಾದಿಸಿದರು.
ಜನಸಂಖ್ಯೆ ಕುರಿತಾಗಿ ಆರ್ಎಸ್ಎಸ್ ಮುಖ್ಯಸ್ಥರ ಈ ಹೇಳಿಕೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಒಂದು ವರದಿಯ ಪ್ರಕಾರ, ಹಿಂದೂಗಳ ಜನಸಂಖ್ಯೆಯು ಶೇಕಡಾ 7.8ರಷ್ಟು ಕಡಿಮೆಯಾಗಿದೆ. ಅದೇ ಸಮಯದಲ್ಲಿ ನೆರೆಯ ದೇಶಗಳ ಜನಸಂಖ್ಯೆ ಹೆಚ್ಚಾಗುತ್ತಿದೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ ಜನಸಂಖ್ಯಾ ಫಲವತ್ತತೆ ದರವು ನಿರಂತರವಾಗಿ ಕುಸಿಯುತ್ತಿದೆ.
ಸ್ವಾತಂತ್ರ್ಯದ ನಂತರ, 1950ರಲ್ಲಿ, ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆಯ ದರವು 6.2ರಷ್ಟಿತ್ತು. ಆದರೆ ಈಗ ಅದು 2.2ಕ್ಕೆ ಇಳಿದಿದೆ. ಇದು ಹೀಗೆಯೇ ಮುಂದುವರಿದರೆ, 2050ರ ವೇಳೆಗೆ ಭಾರತದ ಜನಸಂಖ್ಯಾ ಬೆಳವಣಿಗೆಯ ದರ 1.3ಕ್ಕೆ ಕುಸಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆ ಬಹಳ ಮುಖ್ಯವಾಗುತ್ತದೆ. ಇದಕ್ಕೂ ಮುನ್ನ ನಾಗ್ಪುರದಲ್ಲಿ ನಡೆದ ದಸರಾ ರ್ಯಾಲಿಯಲ್ಲಿ ಮಾತನಾಡಿದ್ದ ಭಾಗವತ್, ಭಾರತದಲ್ಲಿ ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಅನ್ವಯವಾಗುವ ಉತ್ತಮವಾಗಿ ರೂಪಿಸಲಾದ ಜನಸಂಖ್ಯಾ ನೀತಿಯ ಅಗತ್ಯವಿದೆ ಎಂದು ಹೇಳಿದ್ದರು.
ಇದನ್ನೂ ಓದಿ : 8 ಸಾವಿರ ಕೋಟಿ ಮೌಲ್ಯದ ಭೂಮಿ ಸ್ವಾಧೀನಕ್ಕೆ ಮುಂದಾದ ಬಿಹಾರ ಸರ್ಕಾರ: ಏನಿದು ಬೇತಿಯಾ ರಾಜ್ ಎಸ್ಟೇಟ್?