ಹೈದರಾಬಾದ್: ದೇಶದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಅದೇ ರೀತಿ ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆದಿದೆ. ರಾಮೋಜಿ ಫಿಲ್ಮ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ವಿಜಯೇಶ್ವರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಭದ್ರತಾ ಸಿಬ್ಬಂದಿಯಿಂದ ಗೌರವ ವಂದನೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ಅಧ್ಯಕ್ಷ ಗೋಪಾಲ್ ರಾವ್, ಯುಕೆಎಂಎಲ್ (ಉಷಾಕಿರಣ ಮೂವೀ ಲಿಮಿಟೆಡ್) ನಿರ್ದೇಶಕ ಶಿವರಾಮಕೃಷ್ಣ, ಪ್ರಚಾರ ವಿಭಾಗದ ಉಪಾಧ್ಯಕ್ಷ ಎ. ವಿ ರಾವ್, ತೋಟಗಾರಿಕೆ ಉಪಾಧ್ಯಕ್ಷ ರವಿಚಂದ್ರಶೇಖರ್ ಸೇರಿದಂತೆ ಸಂಸ್ಥೆಯ ಉನ್ನತಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಫಿಲ್ಮ್ ಸಿಟಿ ಸಿಇಒ ಶೇಷಸಾಯಿ ಅವರು ಎಂಡಿ ವಿಜೇಶ್ವರಿ ಅವರನ್ನು ಸ್ವಾಗತಿಸಿದರು.
ರಾಮೋಜಿ ಸಮೂಹ ಸಂಸ್ಥೆಗಳ ನೌಕರರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಸೆಲ್ಫಿ ಮೂಲಕ ಸದ್ದು ಮಾಡಿದರು. ಈ ಆಚರಣೆ ಎಲ್ಲರಲ್ಲೂ ದೇಶಭಕ್ತಿ ಉಕ್ಕಿಸಿತು. ಪ್ರತಿ ವರ್ಷ ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವ ಆಚರಣೆಗಳು ಫಿಲ್ಮಿಸಿಟಿಯಲ್ಲಿ ಅದ್ದೂರಿಯಾಗಿ ನಡೆಯುತ್ತವೆ. ಫಿಲ್ಮ್‌ಸಿಟಿ ಮ್ಯಾನೇಜ್‌ಮೆಂಟ್ ಮತ್ತು ಉದ್ಯೋಗಿಗಳು ಇದರಲ್ಲಿ ಭಾಗವಹಿಸುತ್ತಾರೆ.
ಇದನ್ನೂ ಓದಿ : ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು