ETV Bharat / bharat

'ಪಿಎಂ ಕಿಸಾನ್ ನಿಧಿ' 17ನೇ ಕಂತಿನ ಹಣ ಬಿಡುಗಡೆ ಕಡತಕ್ಕೆ ಪ್ರಧಾನಿ ಮೋದಿ ಸಹಿ - PM Kisan Nidhi

author img

By PTI

Published : Jun 10, 2024, 12:52 PM IST

Updated : Jun 10, 2024, 4:08 PM IST

20,000 ಕೋಟಿ ರೂಪಾಯಿ ಮೊತ್ತದ 'ಪಿಎಂ ಕಿಸಾನ್ ನಿಧಿ'ಯ 17ನೇ ಕಂತಿನ ಬಿಡುಗಡೆಗೊಳಿಸುವ ಕಡತಕ್ಕೆ ಇಂದು ಪ್ರಧಾನಿ ಮೋದಿ ಸಹಿ ಹಾಕಿದರು.

PM MODI FIRST DECISION  KISAN NIDHI FUND RELEASE  MODI GOVERNMENT  NDA
ಮೂರನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿಯಿಂದ ಮೊದಲ ಕಡತಕ್ಕೆ ಸಹಿ: 'ಪಿಎಂ ಕಿಸಾನ್ ನಿಧಿ' 17 ನೇ ಕಂತಿನ ಬಿಡುಗಡೆ (ANI)

ನವದೆಹಲಿ: ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರು, ಸೋಮವಾರ ಬೆಳಗ್ಗೆ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿರುವ ಸುಮಾರು 20,000 ಕೋಟಿ ರೂಪಾಯಿ ಮೊತ್ತದ 'ಪಿಎಂ ಕಿಸಾನ್ ನಿಧಿ'ಯ 17 ನೇ ಕಂತಿನ ಬಿಡುಗಡೆಗೆ ಅನುಮೋದನೆ ನೀಡಿದರು.

ಹಣ ಬಿಡುಗಡೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಮೋದಿ ಅವರು, ''ನಮ್ಮದು ‘ಕಿಸಾನ್ ಕಲ್ಯಾಣ’ (ರೈತರ ಕಲ್ಯಾಣ)ಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ರೈತರಿಗೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಮಹತ್ವದ ಕೆಲಸ ಮಾಡಲು ನಿರ್ಧರಿಸಿದ್ದೇವೆ'' ಎಂದು ಅವರು ತಿಳಿಸಿದರು.

On first day in office as 3rd time PM, Modi signs file on Kisan Welfare

Read @ANI Story | https://t.co/A2aNhy8aK2#PMModi #KisanWelfare #NDA pic.twitter.com/4LjDHsNKfj

— ANI Digital (@ani_digital) June 10, 2024

''ಈ ನಿರ್ಧಾರವು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಚುನಾವಣೆಯ ಗೆಲುವಿನ ನಂತರ ರೈತರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. 72 ಸದಸ್ಯರ ಕೇಂದ್ರ ಸಚಿವರ ಸಮ್ಮುಖದಲ್ಲಿ ದಾಖಲೆಯ ಮೂರನೇ ಅವಧಿಗೆ ಮೋದಿ ಅವರು ಭಾನುವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಮೋದಿ ಸರ್ಕಾರ 3.0 ಅಸ್ತಿತ್ವಕ್ಕೆ: 30 ಸಂಪುಟ ಸಚಿವರು, 5 ಸ್ವತಂತ್ರ ನಿರ್ವಹಣೆ, 36 ರಾಜ್ಯಖಾತೆ ಸಚಿವರಿಂದ ಪ್ರಮಾಣ ಸ್ವೀಕಾರ - Modi Government

ನವದೆಹಲಿ: ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರು, ಸೋಮವಾರ ಬೆಳಗ್ಗೆ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿರುವ ಸುಮಾರು 20,000 ಕೋಟಿ ರೂಪಾಯಿ ಮೊತ್ತದ 'ಪಿಎಂ ಕಿಸಾನ್ ನಿಧಿ'ಯ 17 ನೇ ಕಂತಿನ ಬಿಡುಗಡೆಗೆ ಅನುಮೋದನೆ ನೀಡಿದರು.

ಹಣ ಬಿಡುಗಡೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಮೋದಿ ಅವರು, ''ನಮ್ಮದು ‘ಕಿಸಾನ್ ಕಲ್ಯಾಣ’ (ರೈತರ ಕಲ್ಯಾಣ)ಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ರೈತರಿಗೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಮಹತ್ವದ ಕೆಲಸ ಮಾಡಲು ನಿರ್ಧರಿಸಿದ್ದೇವೆ'' ಎಂದು ಅವರು ತಿಳಿಸಿದರು.

''ಈ ನಿರ್ಧಾರವು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಚುನಾವಣೆಯ ಗೆಲುವಿನ ನಂತರ ರೈತರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. 72 ಸದಸ್ಯರ ಕೇಂದ್ರ ಸಚಿವರ ಸಮ್ಮುಖದಲ್ಲಿ ದಾಖಲೆಯ ಮೂರನೇ ಅವಧಿಗೆ ಮೋದಿ ಅವರು ಭಾನುವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಮೋದಿ ಸರ್ಕಾರ 3.0 ಅಸ್ತಿತ್ವಕ್ಕೆ: 30 ಸಂಪುಟ ಸಚಿವರು, 5 ಸ್ವತಂತ್ರ ನಿರ್ವಹಣೆ, 36 ರಾಜ್ಯಖಾತೆ ಸಚಿವರಿಂದ ಪ್ರಮಾಣ ಸ್ವೀಕಾರ - Modi Government

Last Updated : Jun 10, 2024, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.