ETV Bharat / bharat

ಸ್ವಂತ ಸಹೋದರಿಯ ಮೇಲೆ ಅಣ್ಣನಿಂದಲೇ ಅತ್ಯಾಚಾರ - BROTHER RAPE ON OWN SISTER - BROTHER RAPE ON OWN SISTER

ತೆಲಂಗಾಣ ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸ್ವಂತ ಸಹೋದರಿಯ ಮೇಲೆ ಅಣ್ಣನೊಬ್ಬ ಅತ್ಯಾಚಾರ ಎಸಗಿರುವ ಪ್ರಕರಣ ನಾಗಕರ್ನೂಲ್​ ಜಿಲ್ಲೆಯಲ್ಲಿ ಕಂಡು ಬಂದಿದೆ.

INHUMAN INCIDENT  RAPE CASE IN TELANGANA  RAPE CASE DETAILS  TELANGANA CRIME NEWS
ಸಹೋದರಿಯ ಮೇಲೆ ಅಣ್ಣನಿಂದ ಅತ್ಯಾಚಾರ (ETV Bharat)
author img

By ETV Bharat Karnataka Team

Published : Jul 15, 2024, 12:40 PM IST

ನಾಗಕರ್ನೂಲ್​ (ತೆಲಂಗಾಣ): ಸಹೋದರನೊಬ್ಬ ತಂಗಿಯ ಮೇಲೆಯೇ ಅಮಾನವೀಯವಾಗಿ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಬಿಜಿನೆಪಲ್ಲಿ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಡಿಎಸ್​​​ಪಿ ಶ್ರೀನಿವಾಸಾದವ್ ಅವರ ಹೇಳಿಕೆ ಪ್ರಕಾರ ನಂದ್ಯಾಲ ಜಿಲ್ಲೆಯ ನಿವಾಸಿಯೊಬ್ಬ ತನ್ನ ತಾಯಿ ಮತ್ತು ಮೂವರು ತಂಗಿಯರೊಂದಿಗೆ ಕೂಲಿ ಕೆಲಸ ಮಾಡುತ್ತಾ ಮಹಬೂಬ್‌ನಗರ ಜಿಲ್ಲಾ ಕೇಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಕೆಲ ತಿಂಗಳ ಹಿಂದೆ ಆರೋಪಿ ಬಿಜಿನೆಪಲ್ಲಿ ತಾಲೂಕಿನ ಹಳ್ಳಿಯೊಂದರಲ್ಲಿ ಕ್ವಾರಿಯಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದರು.

ಕೆಲಸದ ಸ್ಥಳದಲ್ಲಿದ್ದ ಗುಡಿಸಲಿನಲ್ಲಿ ವಾಸವಾಗಿದ್ದ ಆರೋಪಿಗೆ ಅಡುಗೆ ಮಾಡಿಕೊಡಲು ಸಹೋದರಿ ಹೋಗಿದ್ದಳು. ಈ ವೇಳೆ, ತಂಗಿಗೆ ಸುಳ್ಳು ಹೇಳಿ ಅತ್ಯಾಚಾರ ಎಸಗಿದ್ದಾನೆ. ತಾಯಿಗೆ ವಿಷಯ ಗೊತ್ತಾಗುತ್ತದೆ ಎಂದು ಹೆದರಿ ಇಬ್ಬರು ಕೆಲಸ ಬಿಟ್ಟು ಓಡಿ ಹೋಗಿದ್ದಾರೆ. ವನಪರ್ತಿ - ಗಂಗಾರಾಮ್ ಅರಣ್ಯ ಪ್ರದೇಶದಲ್ಲಿ 15 ದಿನಗಳಿಂದ ತಿರುಗಾಡಿದ್ದಾರೆ.

ವನಪರ್ತಿ ಜಿಲ್ಲೆಯ ಬಲನಪಲ್ಲಿಯಲ್ಲಿ ಎರಡು ದಿನಗಳಿಂದ ಅನುಮಾನಾಸ್ಪದವಾಗಿ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು. ಈ ವೇಳೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿಯನ್ನು ಶನಿವಾರ ಮಹಬೂಬ್‌ನಗರ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಸೋಮವಾರ ರಿಮ್ಯಾಂಡ್​ಗೆ ಕಳುಹಿಸಿರುವುದಾಗಿ ಡಿಎಸ್ಪಿ ಮಾಹಿತಿ ನೀಡಿದ್ದಾರೆ.

ಓದಿ: ಬರ್ಮಿಂಗ್​ಹ್ಯಾಮ್​ನಲ್ಲಿ ಗುಂಡಿನ ದಾಳಿ: ಮಗು ಸೇರಿದಂತೆ 7 ಮಂದಿ ಸಾವು - 2 shootings in Birmingham

ETV Bharat Logo

Copyright © 2024 Ushodaya Enterprises Pvt. Ltd., All Rights Reserved.