ETV Bharat / bharat

ಶ್ರೀರಾಮನ ಆಡಳಿತ ಸಂವಿಧಾನ ರಚನೆಗೆ ಸ್ಫೂರ್ತಿಯಾಗಿತ್ತು: ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ - ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ

ಭಗವಾನ್ ರಾಮನ ಆಡಳಿತವು ಸಂವಿಧಾನ ರಚನಾಕಾರರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಪ್ರದಾನಿ ಮೋದಿ ಹೇಳಿದರು.

Governance of Lord Ram was source of inspiration for Constitution makers: PM Modi

author img

By PTI

Published : Jan 28, 2024, 2:16 PM IST

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಕೋಟ್ಯಂತರ ಭಾರತೀಯರನ್ನು ಒಟ್ಟುಗೂಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಕಾರ್ಯಕ್ರಮ ನಡೆದ ಸಮಯದಲ್ಲಿ ದೇಶದ ಸಾಮೂಹಿಕ ಶಕ್ತಿ ಜಗತ್ತಿಗೆ ಗೋಚರವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ರಾಮನ ಆಡಳಿತವು ಸಂವಿಧಾನ ರಚನಾಕಾರರಿಗೆ ಸ್ಫೂರ್ತಿಯ ಮೂಲವಾಗಿದೆ. ಅದಕ್ಕಾಗಿಯೇ ಜನವರಿ 22 ರಂದು ಅಯೋಧ್ಯೆಯಲ್ಲಿ ನಾನು 'ದೇವ್ ಟು ದೇಶ್' ಮತ್ತು 'ರಾಮ್ ಟು ರಾಷ್ಟ್ರ' ಬಗ್ಗೆ ಮಾತನಾಡಿದ್ದೆ ಎಂದು ಅವರು ನುಡಿದರು.

"ಎಲ್ಲರ ಭಾವನೆ ಒಂದೇ, ಎಲ್ಲರ ಭಕ್ತಿ ಒಂದೇ. ರಾಮ ಎಲ್ಲರ ಮಾತಲ್ಲಿದ್ದಾನೆ, ರಾಮ ಎಲ್ಲರ ಹೃದಯದಲ್ಲೂ ಇದ್ದಾನೆ. ಪ್ರಾಣ ಪ್ರತಿಷ್ಠಾಪನೆಯ ಅವಧಿಯಲ್ಲಿ ಅನೇಕ ಜನ ರಾಮ ಭಜನೆಗಳನ್ನು ಹಾಡಿ ಅವುಗಳನ್ನು ಭಗವಾನ್ ರಾಮನಿಗೆ ಅರ್ಪಿಸಿದರು. ಜನವರಿ 22 ರಂದು ಸಂಜೆ ಇಡೀ ದೇಶವು 'ರಾಮ್ ಜ್ಯೋತಿ' ಬೆಳಗಿಸಿ ದೀಪಾವಳಿ ಆಚರಿಸಿತು" ಎಂದು ಅವರು ಹೇಳಿದರು.

"ನಾಳೆ 29 ರಂದು ಬೆಳಿಗ್ಗೆ 11 ಗಂಟೆಗೆ ನಾನು ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಲಿದ್ದೇನೆ. ಇದು ಪರೀಕ್ಷಾ ಪೇ ಚರ್ಚಾದ 7ನೇ ಆವೃತ್ತಿಯಾಗಿದೆ. ಈ ಕಾರ್ಯಕ್ರಮಕ್ಕಾಗಿ ನಾನು ಯಾವಾಗಲೂ ಕಾಯುತ್ತಿರುತ್ತೇನೆ. ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಇದು ನನಗೆ ಅವಕಾಶ ನೀಡುತ್ತದೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಅವರ ಒತ್ತಡವನ್ನು ಕಡಿಮೆ ಮಾಡಲು ನಾನು ಪ್ರಯತ್ನಿಸುತ್ತೇನೆ." ಎಂದು ಪ್ರಧಾನಿ ಮೋದಿ ತಿಳಿಸಿದರು.

ಇಂದು ಭಾರತವು ಕ್ರೀಡಾ ಜಗತ್ತಿನಲ್ಲಿಯೂ ಹೊಸ ಎತ್ತರವನ್ನು ಮುಟ್ಟುತ್ತಿದೆ. ತಮ್ಮ ಸಾಮರ್ಥ್ಯ ತೋರಿಸಲು ಆಟಗಾರರಿಗೆ ಅವಕಾಶ ಸಿಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಮತದಾರರಲ್ಲಿ ಜಾಗೃತಿ ಮೂಡಿಸಲು ಸಮುದಾಯ ಮಟ್ಟದಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಇದೇ ಮೊದಲ ಬಾರಿಗೆ ಮತ ಚಲಾಯಿಸುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಬೇಕು ಎಂದು ಹೇಳ ಬಯಸುತ್ತೇನೆ ಎಂದು ಅವರು ತಿಳಿಸಿದರು.

"ಛತ್ತೀಸ್ ಗಢದ ಹೇಮಚಂದ್ ಮಾಂಝಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೈದ್ಯರಾಜ್ ಹೇಮಚಂದ್ ಮಾಂಝಿ ಆಯುಷ್ ವೈದ್ಯಕೀಯ ವ್ಯವಸ್ಥೆಯ ಸಹಾಯದಿಂದ ಜನರಿಗೆ ಚಿಕಿತ್ಸೆ ನೀಡುತ್ತಾರೆ. ಅವರು 5 ದಶಕಗಳಿಂದ ಛತ್ತೀಸಗಢ ನಾರಾಯಣಪುರದ ಬಡ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮತಿ ಯಾನುಂಗ್ ಮತ್ತು ಹೇಮಚಂದ್ ಜಿ ಅವರಂತಹ ಜನರು ನಮ್ಮ ದೇಶದಲ್ಲಿ ಅಡಗಿರುವ ಆಯುರ್ವೇದ ಮತ್ತು ಗಿಡಮೂಲಿಕೆ ಔಷಧದ ನಿಧಿಯನ್ನು ಸಂರಕ್ಷಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ." ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ನಿತೀಶ್ ದ್ರೋಹವನ್ನು ಬಿಹಾರ ಜನತೆ ಕ್ಷಮಿಸಲ್ಲ: ಕಾಂಗ್ರೆಸ್​ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.