ETV Bharat / bharat

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ನಿಧನ - ramoji rao passed away

ಮಾಧ್ಯಮ ಲೋಕದ ದಿಗ್ಗಜ, ಉದ್ಯಮಿ ಹಾಗೂ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ಅವರು ನಿಧನರಾಗಿದ್ದಾರೆ.

author img

By ETV Bharat Karnataka Team

Published : Jun 8, 2024, 6:57 AM IST

Updated : Jun 8, 2024, 7:21 AM IST

ramoji rao
ರಾಮೋಜಿ ರಾವ್ (ETV Bharat)

ಹೈದರಾಬಾದ್​: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ (87) ಅವರು ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ಇತ್ತೀಚೆಗಷ್ಟೇ ಆರೋಗ್ಯ ಸಮಸ್ಯೆಯಿಂದಾಗಿ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಇದೇ 5ರಂದು ಆಸ್ಪತ್ರೆಗೆ ದಾಖಲಾಗಿದ್ದ ಶ್ರೀ ರಾವ್ ಅವರು ಶನಿವಾರ ಬೆಳಗಿನ ಜಾವ 4:50ಕ್ಕೆ ನಿಧನರಾದರು. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಕಚೇರಿಗೆ ಕರೆತರಲಾಗಿದೆ. ಅಲ್ಲಿ ಕುಟುಂಬ, ಸ್ನೇಹಿತರು, ಗಣ್ಯರು ಮತ್ತು ಹಿತೈಷಿಗಳು ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

ರಾಮೋಜಿ ರಾವ್ ಅವರು 1936ರ ನವೆಂಬರ್ 16 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ್ದರು. ರೈತನ ಮಗನಾಗಿ ಹುಟ್ಟಿ ಬೆಳೆದ ಅವರು ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿದವರು.

1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಅವರು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ಈನಾಡು ದಿನಪತ್ರಿಕೆ ಮೂಲಕ ತೆಲುಗು ಪತ್ರಿಕಾ ಲೋಕದಲ್ಲಿ ಕ್ರಾಂತಿ ಹುಟ್ಟು ಹಾಕಿದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಈನಾಡು ಪತ್ರಿಕೆ ಆರಂಭಿಸಿದ್ದರು. ತೆಲುಗು ಪತ್ರಿಕೋದ್ಯಮ ಲೋಕದಲ್ಲಿ 'ಈನಾಡು' ಹೊಸ ಯುಗಕ್ಕೆ ನಾಂದಿ ಹಾಡಿತು. ಕೆಲ ವರ್ಷಗಳಲ್ಲಿಯೇ ಓದುಗರ ಮೆಚ್ಚುಗೆಗೆ ಪಾತ್ರವಾಯಿತು.

ಬಳಿಕ 'ಈಟಿವಿ' ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ದಿಗ್ಗಜರಾಗಿ ಪ್ರಖ್ಯಾತರಾದರು. 1995ರ ಆಗಸ್ಟ್ 27ರಂದು 'ಈಟಿವಿ ತೆಲುಗು' ಪ್ರಾರಂಭವಾಯಿತು. ವೈವಿಧ್ಯ,ಮಯ ಮನರಂಜನೆ ನೀಡುವ ಮೂಲಕ ತೆಲುಗಿನಲ್ಲಿ ಇಂದಿಗೂ ಮನೆ ಮಾತಾಗಿದೆ. ತೆಲುಗಿನ ಮೊದಲ 24 ಗಂಟೆಗಳ ಚಾನೆಲ್ ಆಗಿ ಇದು ಆರಂಭವಾಯಿತು.

ಇದನ್ನೂ ಓದಿ: ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ಸರ್ವಸ್ವ ಅರ್ಪಿಸಿದ್ದ ರಾಮೋಜಿ ರಾವ್: ಯುವ ಪೀಳಿಗೆಗೆ ಸ್ಫೂರ್ತಿಯ ಸಾಧಕ - Ramoji Rao

ರಾಮೋಜಿ ಫಿಲ್ಮ್‌ಸಿಟಿ: ಜೊತೆಗೆ ರಾಮೋಜಿ ರಾವ್ ಅದ್ಭುತ ಫಿಲ್ಮ್‌ಸಿಟಿ ನಿರ್ಮಿಸಿದ್ದು, ಅವರ ಪ್ರಮುಖ ಮೈಲಿಗಲ್ಲಾಗಿದೆ. ಗುರಿ ಸಾಧನೆಗೆ ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಯೋಧ ರಾಮೋಜಿ ರಾವ್​ ಅವರಾಗಿದ್ದಾರೆ. ಜೊತೆಗೆ 'ಈಟಿವಿ ಭಾರತ' ಕೂಡ ಅವರು ಸೃಷ್ಟಿಸಿದ ಮಹತ್ತರ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. 13 ಭಾಷೆಗಳಲ್ಲಿ ಸುದ್ದಿ ನೀಡುವ ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ನಿಮ್ಮ ಅಂಗೈಯಲ್ಲೇ ವಿಶ್ವದ ಮಾಹಿತಿ ಪಡೆಯಬಹುದಾಗಿದೆ.

ಇದಷ್ಟೇ ಅಲ್ಲದೆ, ರಾಮೋಜಿ ರಾವ್ ಅವರು 1962ರಲ್ಲಿ ಮಾರ್ಗದರ್ಶಿ ಚಿಟ್‌ಫಂಡ್‌ ಸ್ಥಾಪಿಸಿದ್ದಾರೆ. ದೇಶದ ಅಗ್ರ ಚಿಟ್‌ಫಂಡ್‌ಗಳ ಕಂಪನಿಯಾಗಿ ಮಾರ್ಗದರ್ಶಿ ಕೂಡ ಒಂದಾಗಿದೆ. ಇದರ ಮೂಲಕ ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ. ಈವರೆಗೆ 113ಕ್ಕೂ ಅಧಿಕ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.

ಸಂತ್ರಸ್ತರಿಗೆ ನೆರವು: ರಾಮೋಜಿ ಅವರು ಪೃಕೃತಿ ವಿಕೋಪಗಳಾದ ಸಂದರ್ಭದಲ್ಲಿಯೂ ಕೂಡ ನೆರವು ನೀಡುವಲ್ಲಿ ಮುಂಚೂಣಿಯಲ್ಲಿದ್ದರು. ಚಂಡಮಾರುತ, ಮಳೆ ಸೇರಿದಂತೆ ಇತರ ಹಾನಿ ಸಂಭವಿಸಿದಾಗ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಸೇರಿದಂತೆ ಹಲವು ರೀತಿಯಲ್ಲಿ ಸಹಾಯ ನೀಡಿದ್ದಾರೆ. ರಮಾದೇವಿ ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕ ಸೇವಾ ಚಟುವಟಿಕೆ ಕೈಗೊಂಡಿದ್ದರು. ಇದಲ್ಲದೇ ಇನ್ನೂ ಹಲವಾರು ಸಂಸ್ಥೆಗಳ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಲ್ಲದೆ, ನಾನಾ ರೀತಿಯ ನೆರವು ನೀಡಿರುವ ಹೆಗ್ಗಳಿಕೆ ರಾಮೋಜಿ ರಾವ್​ ಅವರದ್ದಾಗಿದೆ.

ಇದನ್ನೂ ಓದಿ: ಮಾಧ್ಯಮ, ಸಿನಿಮಾ, ಕೃಷಿ, ಉದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ರಾಮೋಜಿ ರಾವ್ ಛಾಪು ಅಗಾಧ - Ramoji Rao passed away

Last Updated : Jun 8, 2024, 7:21 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.