ETV Bharat / bharat

ರಾಜಸ್ಥಾನ ಸರ್ಕಾರಿ ಶಾಲೆಗಳಲ್ಲಿ 370ನೇ ವಿಧಿ ರದ್ದು, ಸಾವರ್ಕರ್​ ಜನ್ಮದಿನ ಆಚರಣೆಗೆ ನಿರ್ಧಾರ; ಕಾಂಗ್ರೆಸ್ ಟೀಕೆ - Article 370 abrogation day - ARTICLE 370 ABROGATION DAY

ರಾಜಸ್ಥಾನ ಶಿಕ್ಷಣ ಇಲಾಖೆಯು ಜಮ್ಮು ಕಾಶ್ಮೀರಕ್ಕೆ 370ನೇ ವಿಧಿ ರದ್ದು, ವೀರ ಸಾವರ್ಕರ್​ ದಿನವನ್ನು ಆಚರಣೆಗೆ ಮುಂದಾಗಿದೆ. ರಾಜಸ್ಥಾನ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ.

ಸಾವರ್ಕರ್​ ಜನ್ಮದಿನ ಆಚರಣೆಗೆ ನಿರ್ಧಾರ
ಸಾವರ್ಕರ್​ ಜನ್ಮದಿನ ಆಚರಣೆಗೆ ನಿರ್ಧಾರ (ETV Bharat)
author img

By PTI

Published : Jul 30, 2024, 4:38 PM IST

ಜೈಪುರ (ರಾಜಸ್ಥಾನ): ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿ ರದ್ದತಿ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಜನ್ಮದಿನ ಆಚರಣೆ ಪ್ರಸ್ತಾವನೆ ಪರ - ವಿರೋಧಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆ ಈ ಕ್ರಮವನ್ನು ಕಾಂಗ್ರೆಸ್​ ಟೀಕಿಸಿದ್ದರೆ, ಆಡಳಿತಾರೂಢ ಬಿಜೆಪಿ ಇದನ್ನು ಸಮರ್ಥಿಸಿಕೊಂಡಿದೆ.

ರಾಜಸ್ಥಾನ ಶಿಕ್ಷಣ ಇಲಾಖೆಯು ಈ ವರ್ಷದ ಶೈಕ್ಷಣಿಕ ಕ್ಯಾಲೆಂಡರ್​ ಬಿಡುಗಡೆ ಮಾಡಿದ್ದು, ವಿವಿಧ ದಿನಗಳನ್ನು ಆಚರಿಸಲು ಅದರಲ್ಲಿ ನಮೂದಿಸಲಾಗಿದೆ. ಕ್ಯಾಲೆಂಡರ್​​ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ವೀರ ಸಾರ್ವಕರ್​ ಅವರ ಜನ್ಮದಿನ ಆಚರಿಸುವುದಾಗಿ ಉಲ್ಲೇಖಿಸಿದೆ. ಈ ಎರಡು ಅಂಶಗಳು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿವೆ.

ಸರ್ಕಾರಕ್ಕೆ ನಾಚಿಕೆಯಿಲ್ಲ; ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಈ ಬಗ್ಗೆ ಮಾತನಾಡಿದ್ದು, ಇದು ರಾಜಕೀಯ ಹಿತಾಸಕ್ತಿಗಳನ್ನು ಪೂರೈಸುವ ನಾಚಿಕೆಯಿಲ್ಲದ ಕ್ರಮ. ಶಿಕ್ಷಣ ಇಲಾಖೆ ಕ್ಯಾಲೆಂಡರ್​ನಲ್ಲಿ ಮೇ 28 ರಂದು ಸಾವರ್ಕರ್ ಅವರ ಜನ್ಮದಿನವನ್ನು ಆಚರಿಸಲು ಪ್ರಸ್ತಾಪಿಸಿದೆ. ಶಿಕ್ಷಣವನ್ನು ರಾಜಕೀಕರಣಗೊಳಿಸುವುದನ್ನು ಕಾಂಗ್ರೆಸ್​ ವಿರೋಧಿಸುತ್ತದೆ. ವಿಭಜಕ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ ಎಂದು ದೋತಸ್ರಾ ಆರೋಪಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಸ್ವರ್ಣಿಮ್ ಚತುರ್ವೇದಿ ಅವರು, ಹೊಸ ಕ್ಯಾಲೆಂಡರ್​ ಖಂಡಿಸಿದ್ದಾರೆ. ಇದು ಶಿಕ್ಷಣವನ್ನು ರಾಜಕೀಯಗೊಳಿಸುವ ಮತ್ತು ಹಿಂದುತ್ವ ಸಿದ್ಧಾಂತವನ್ನು ಪ್ರಚಾರ ಮಾಡುವ ಪ್ರಯತ್ನವಾಗಿದೆ. ಇಲಾಖೆಯು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೇಲೆ ಗಮನ ಹರಿಸಿಲ್ಲ. ಬದಲಿಗೆ ಬ್ರಿಟಿಷರ ವಿರುದ್ಧ ಹೋರಾಡಲಾಗದೆ ಕ್ಷಮೆ ಕೋರಿದ ಸಾವರ್ಕರ್ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸು ಆಸಕ್ತಿ ಹೊಂದಿದೆ ಎಂದಿದ್ದಾರೆ.

ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು, ಸ್ವಾತಂತ್ರ್ಯವೀರ ಸಾವರ್ಕರ್ ಮತ್ತು ಮಹಾರಾಣಾ ಪ್ರತಾಪ್ ಅವರ ಬಗ್ಗೆ ಇತಿಹಾಸದಲ್ಲಿ ಹೆಚ್ಚಿನ ನಿರೂಪಣೆಗಳು ಇಲ್ಲ. ಬದಲಿಗೆ ಮೊಘಲ್ ಚಕ್ರವರ್ತಿ ಅಕ್ಬರ್​ ಅನ್ಯಾಯವನ್ನೇ ವೈಭವೀಕರಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರ ಪಾತ್ರವನ್ನು ಇತಿಹಾಸದಲ್ಲಿ ತಪ್ಪಾಗಿ ಬರೆಯಲಾಗಿದೆ. ಇದನ್ನು ಸರಿಪಡಿಸಲು ಇಲಾಖೆ ಇಂತಹ ಕ್ರಮ ವಹಿಸಿದೆ ಎಂದು ಬೆನ್ನಿಗೆ ನಿಂತಿದ್ದಾರೆ.

ಕ್ಯಾಲೆಂಡರ್​​ನಲ್ಲಿನ ಆಚರಣೆಗಳೇನು?: ಕ್ಯಾಲೆಂಡರ್‌ನಲ್ಲಿ ಫೆಬ್ರವರಿ 4 ರಂದು ಸೂರ್ಯ ನಮಸ್ಕಾರ ದಿನ, ಫೆಬ್ರವರಿ 7 ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ, ಫೆಬ್ರವರಿ 14 ರಂದು ತಂದೆ - ತಾಯಂದಿರ ದಿನ, ಜನವರಿ 23 ರಂದು ದೇಶ ಪ್ರೇಮ ದಿನವನ್ನು ಸುಭಾಷ್ ಚಂದ್ರ ಬೋಸ್ ದಿನವಾಗಿ ಆಚರಿಸುವುದಾಗಿ ಘೋಷಿಸಿದೆ. ಇದಕ್ಕೂ ಮೊದಲು ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯು ಜುಲೈ 9 ರಂದು ಪ್ರಕಟಿಸಿದ ಶಾಲಾ ಕ್ಯಾಲೆಂಡರ್​ನಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ದಿನ ಆಚರಿಸುವುದಾಗಿ ಪ್ರಕಟಿಸಿತ್ತು.

ಇದನ್ನೂ ಓದಿ: ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು? ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿವೆ? - Global Tiger Population

ETV Bharat Logo

Copyright © 2024 Ushodaya Enterprises Pvt. Ltd., All Rights Reserved.