ETV Bharat / bharat

ಮೂರು ತಿಂಗಳಲ್ಲಿ ವಂದೇ ಭಾರತ್​​ ಸ್ಲೀಪರ್​ ಕೋಚ್​ ರೈಲುಗಳು ಸೇವೆಗೆ ಲಭ್ಯ: ಅಶ್ವಿನಿ ವೈಷ್ಣವ್​​ - vande bharat sleeper coach rail - VANDE BHARAT SLEEPER COACH RAIL

ಬೆಂಗಳೂರಿನ ಬಿಇಎಂಎಲ್​ ಘಟಕದಲ್ಲಿ ತಯಾರಿಸಲಾಗಿರುವ ವಂದೇ ಭಾರತ್​ ಸ್ಲೀಪರ್​ ಕೋಚ್​​ ರೈಲನ್ನು ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರು ಅನಾವರಣಗೊಳಿಸಿದರು.

ಅಶ್ವಿನಿ ವೈಷ್ಣವ್​​
ಅಶ್ವಿನಿ ವೈಷ್ಣವ್​​ (ANI)
author img

By ETV Bharat Karnataka Team

Published : Sep 1, 2024, 6:09 PM IST

Updated : Sep 1, 2024, 9:21 PM IST

ಬೆಂಗಳೂರು​​: ಈವರೆಗೆ ಚೇರ್​​ಕಾರ್​ಗಳನ್ನು ಹೊಂದಿದ್ದ ವಂದೇ ಭಾರತ್​​ ರೈಲುಗಳು ಇನ್ಮುಂದೆ ಸ್ಲೀಪರ್​​ ಕೋಚ್​​ ಮಾದರಿಯಲ್ಲಿ ಸಿಗಲಿವೆ. ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಮುಂದಿನ ಮೂರೇ ತಿಂಗಳಲ್ಲಿ ಸ್ಲೀಪರ್​ ಕೋಚ್​ ರೈಲುಗಳು ಹಳಿಗೆ ಬರಲಿವೆ.

ಬೆಂಗಳೂರಿನಲ್ಲಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BML) ಆವರಣದಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್​ ಸ್ಲೀಪರ್​ ಕೋಚ್​ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಅನಾವರಣಗೊಳಿಸಿದರು. ಜೊತೆಗೆ ರೈಲಿನಲ್ಲಿನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಂದೇ ಭಾರತ್ ಚೇರ್ ಕಾರ್‌ನ ಯಶಸ್ಸಿನ ನಂತರ ಸ್ಲೀಪರ್‌ ಕೋಚ್​​ನ ತಯಾರಿಕೆಯು ಪೂರ್ಣಗೊಂಡಿದೆ. ಮುಂದಿನ ಹತ್ತು ದಿನಗಳ ಕಾಲ ಇವುಗಳ ಮೇಲೆ ಕಠಿಣ ಪ್ರಯೋಗ ಮತ್ತು ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳು ಯಶಸ್ವಿಯಾದ ನಂತರ, ಇನ್ನಷ್ಟು ರೈಲುಗಳ ತಯಾರಿಸಲಾಗುತ್ತದೆ ಎಂದರು.

ಸ್ಲೀಪರ್​ ಕೋಚ್​​ಗಳ ವಿಶೇಷತೆ: ವಂದೇ ಭಾರತ್ ಸ್ಲೀಪರ್ ಕೋಚ್‌ಗಳಲ್ಲಿ ರೀಡಿಂಗ್ ಲ್ಯಾಂಪ್‌ಗಳು, ಚಾರ್ಜಿಂಗ್ ಔಟ್‌ಲೆಟ್‌ಗಳು, ಸ್ನ್ಯಾಕ್ ಟೇಬಲ್ ಮತ್ತು ಮೊಬೈಲ್ ಚಾರ್ಜರ್​​ ಸೌಲಭ್ಯಗಳಿವೆ. ರೈಲ್ವೆ ಅಪಘಾತಗಳನ್ನು ತಡೆಯಲು ‘ಕವಚ’ ವ್ಯವಸ್ಥೆ ಇರಲಿದೆ. ಎಲ್ಲಾ ಕೋಚ್‌ಗಳು ಸ್ಟೇನ್‌ಲೆಸ್ ಸ್ಟೀಲ್​​ನಿಂದ ರೂಪಿಸಲಾಗಿದೆ. ಜಿಎಫ್​​ಆರ್​ಪಿ ಇಂಟೀರಿಯರ್​​ ಪ್ಯಾನಲ್ಸ್​​, ಅಗ್ನಿ ದುರಂತದ ವೇಳೆ ಸ್ವಯಂಚಾಲಿತ ತೆರೆದುಕೊಳ್ಳುವ ಬಾಗಿಲುಗಳು, ಸುಧಾರಿತ ಸೌಲಭ್ಯಗಳುಳ್ಳ ಶೌಚಾಲಯಗಳು, ಹೊಸ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾದ ಸೀಟ್ ಕುಶನ್‌ಗಳನ್ನು ಹೊಂದಿದೆ.

ವಂದೇ ಭಾರತ್ ಸ್ಲೀಪರ್ ರೈಲು 16 ಕೋಚ್‌ಗಳನ್ನು ಹೊಂದಿರಲಿದೆ. ಇದರಲ್ಲಿ 823 ಸೀಟುಗಳು ಇರಲಿವೆ. ಇವುಗಳಲ್ಲಿ ಹನ್ನೊಂದು 3-ಟೈರ್ ಎಸಿ ಕೋಚ್‌ಗಳು, ನಾಲ್ಕು 2-ಟೈರ್ ಎಸಿ ಕೋಚ್‌ಗಳು ಮತ್ತು ಒಂದು ಫಸ್ಟ್​​ಟೈರ್​​ ಎಸಿ ಕೋಚ್‌ ಇದೆ. 800 ರಿಂದ 1200 ಕಿಮೀ ದೂರವನ್ನು ಈ ರೈಲುಗಳು ಕ್ರಮಿಸಲಿವೆ. ರೈಲಿನಲ್ಲಿರುವ ಆಮ್ಲಜನಕದ ಮಟ್ಟವು ವೈರಸ್ ವಿರುದ್ಧ ರಕ್ಷಣೆ ನೀಡುತ್ತದೆ. ಕೋವಿಡ್‌ನಿಂದ ಪಾಠ ಕಲಿತಿದ್ದು, ಅಂತಹ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದು ರೈಲ್ವೆ ಮಂತ್ರಿ ತಿಳಿಸಿದರು.

ಮೂರು ಮಾದರಿಯಲ್ಲಿ ರೈಲುಗಳು: ವಂದೇ ಭಾರತ್ ಸ್ಲೀಪರ್​​ ಕೋಚ್​ ರೈಲುಗಳು ಮೂರು ಆವೃತ್ತಿಗಳಲ್ಲಿ ಬರಲಿವೆ. ಇವು ಮಧ್ಯಮ ವರ್ಗದವರಿಗೆ ಮೀಸಲಾಗಿದ್ದು, ವಿವುಗಳ ಟಿಕೆಟ್ ದರ ರಾಜಧಾನಿ ಎಕ್ಸ್​​ಪ್ರೆಸ್ ಬೆಲೆಗೆ ಸಮನಾಗಿರುತ್ತದೆ. ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಚೇರ್‌ಕಾರ್ ರೈಲುಗಳು ಈಗಾಗಲೇ ದೇಶದ ವಿವಿಧ ನಗರಗಳ ನಡುವೆ ಓಡಾಡುತ್ತಿವೆ. ಶೀಘ್ರದಲ್ಲೇ ವಂದೇ ಮೆಟ್ರೋ ರೈಲನ್ನೂ ತರಲಾಗುವುದು. ದೂರದ ಪ್ರಯಾಣ ಮಾಡುವವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸ್ಲೀಪರ್ ಕೋಚ್​​ ರೈಲುಗಳನ್ನು ಮುಂದಿನ ಮೂರು ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಮೊದಲ ಸ್ಲೀಪರ್ ರೈಲು ಮಾರ್ಗ ಫೈನಲ್: ಈ ನಗರದಿಂದ ಮುಂಬೈಗೆ ಓಡಲು ತಯಾರಿ - VANDE BHARAT SLEEPER ROUTE FINAL

Last Updated : Sep 1, 2024, 9:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.