ETV Bharat / bharat

ಸಾವರ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣ: ರಾಹುಲ್​ ಗಾಂಧಿಗೆ ಸಮನ್ಸ್​ ಜಾರಿ - Rahul Gandhi Summoned - RAHUL GANDHI SUMMONED

ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಪುಣೆ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ರಾಹುಲ್​ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದೆ.

RAHUL GANDHI
ರಾಹುಲ್​ ಗಾಂಧಿ (ETV Bharat)
author img

By ETV Bharat Karnataka Team

Published : May 31, 2024, 9:10 PM IST

ಪುಣೆ: ಸ್ವಾತಂತ್ರ ವೀರ ಸಾವರ್ಕರ್​ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್​ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆ ಸೆಷನ್ಸ್​ ನ್ಯಾಯಾಲಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಸಮನ್ಸ್​ ಜಾರಿ ಮಾಡಿದೆ.

ರಾಹುಲ್ ಗಾಂಧಿ ಅವರು 2023 ಮಾರ್ಚ್​ 5ರಂದು ಲಂಡನ್​ನಲ್ಲಿ ಸಾವರ್ಕರ್​ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. 2023 ಏಪ್ರಿಲ್​ನಲ್ಲಿ ಸಾವರ್ಕರ್​ ಅವರ ಮೊಮ್ಮಗ ಸತ್ಯಕಿ ಸಾವರ್ಕರ್​ ಅವರು ಈ ಬಗ್ಗೆ ಮೊಕದ್ದಮೆ ಹೂಡಿದ್ದರು. ಇದೀಗ ಆಗಸ್ಟ್​ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಹುಲ್​ ಗಾಂಧಿಗೆ ಕೋರ್ಟ್​ ಸಮನ್ಸ್​ ನೀಡಿದೆ.

ಈ ಬಗ್ಗೆ ವಕೀಲ ಸಂಗ್ರಾಮ್​ ಕೋಲಾಟ್ಕರ್​ ಮಾತನಾಡಿ, "ಕಳೆದ ವರ್ಷ ಲಂಡನ್​ನಲ್ಲಿ ಸ್ವಾತಂತ್ರ ಹೋರಾಟಗಾರ ಸಾವರ್ಕರ್​ ಅವರ ಬಗ್ಗೆ ರಾಹುಲ್​ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಾವರ್ಕರ್​ ಹಾಗೂ ಅವರ ಸ್ನೇಹಿತರು ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಥಳಿಸುತ್ತಿದ್ದರು. ಆಗ ಸಾವರ್ಕರ್​ ಖುಷಿಯಾಗಿದ್ದರು ಎಂದು ರಾಹುಲ್​ ಗಾಂಧಿ ಭಾಷಣದ ವೇಳೆ ಹೇಳಿದ್ದರು. ಈ ಬಗ್ಗೆ ಸೆಕ್ಷನ್​ 209ರ ಅಡಿಯಲ್ಲಿ ಪುಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 19 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪುಣೆ ಸೆಷನ್ಸ್​ ಕೋರ್ಟ್​ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದೆ" ಎಂದು ಕೋಲಾಟ್ಕರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಭೂಮಿ ಮೇಲಿನ ಯಾವ ಶಕ್ತಿಯಿಂದಲೂ ನಮ್ಮ ಸಂವಿಧಾನ ನಾಶಮಾಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ - Rahul Gandhi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.