ಚಂಡೀಗಢ: ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಪಂಜಾಬ್ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಡುವೆ ಗಡಿ ಭಾಗಗಳಲ್ಲಿ ಮಾದಕ ವಸ್ತುಗಳ ಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಪೆಡ್ಲರ್‌ಗಳ ಮೂಲಕ ಭಾರತಕ್ಕೆ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, 5 ಕೆ.ಜಿ ಮಾಲು ವಶಕ್ಕೆ ಪಡೆದಿದ್ದೇವೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.
ಅಮೃತ್ಸರ್ ನಿವಾಸಿ ಹಸನ್ಪ್ರೀತ್ ಸಿಂಗ್, ಅಟಾರಿ ಮಂಡಿ ನಿವಾಸಿಗಳಾದ ಕರಣ್ದೀಪ್ ಸಿಂಗ್ ಆಲಿಯಾಸ್ ಮನ್ನಾ ಮತ್ತು ಮನಿಂದರ್ ಸಿಂಗ್ ಬಂಧಿತರು. ಇವರಿಂದ ಹೆರಾಯಿನ್ ಜೊತೆಗೆ ನಗದು ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಪಾಕ್ ಕಳ್ಳಸಾಗಣೆದಾರರಿಂದ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.(ಐಎಎನ್‌ಎಸ್)
ಇದನ್ನೂ ಓದಿ: ಪಂಜಾಬ್ ಮಾಜಿ ಡಿಸಿಎಂ ಹತ್ಯೆಗೆ ಯತ್ನ ಪ್ರಕರಣ: ನ್ಯಾಯಾಲಯಕ್ಕೆ ಇಂದು ಆರೋಪಿ ಹಾಜರುಪಡಿಸುವ ಸಾಧ್ಯತೆ