ETV Bharat / bharat

ಡಿ.14ರಂದು ದೆಹಲಿ ಚಲೋ ಹೋರಾಟ ಪುನಾರಂಭ: ಪಂಜಾಬ್ ರೈತರ ಘೋಷಣೆ - DELHI CHALO PROTEST

ದೆಹಲಿ ಚಲೋ ಪ್ರತಿಭಟನೆಯನ್ನು ಪುನಾರಂಭಿಸುವುದಾಗಿ ಪಂಜಾಬ್ ರೈತರು ಹೇಳಿದ್ದಾರೆ.

ರೈತರ ಪ್ರತಿಭಟನೆ
ರೈತರ ಪ್ರತಿಭಟನೆ (IANS)
author img

By ETV Bharat Karnataka Team

Published : Dec 10, 2024, 7:43 PM IST

ಚಂಡೀಗಢ: ಡಿ.14ರಂದು ದೆಹಲಿ ಚಲೋ ಪ್ರತಿಭಟನಾ ರ್ಯಾಲಿಯನ್ನು ಪುನಾರಂಭಿಸುವುದಾಗಿ ಪಂಜಾಬ್ ರೈತರು ಘೋಷಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ದೀರ್ಘಕಾಲದಿಂದ ಈಡೇರಿಸದಿರುವ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ರೈತರು ಹೇಳಿದ್ದಾರೆ. ಪ್ರತಿಭಟನೆಗೆ 10 ತಿಂಗಳು ತುಂಬಿರುವ ಹಿನ್ನೆಲೆಯಲ್ಲಿ ಒಗ್ಗಟ್ಟಿನ ಬಲ ಪ್ರದರ್ಶನಕ್ಕಾಗಿ ಶುಕ್ರವಾರ ಹರ್ಯಾಣದ ಎರಡು ಅಂತರರಾಜ್ಯ ಗಡಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಗಮಿಸುವಂತೆ ರೈತ ಸಂಘಟನೆಗಳು ರೈತರಿಗೆ ಕರೆ ನೀಡಿವೆ.

ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಲು 101 ರೈತರ ಗುಂಪು ಡಿಸೆಂಬರ್ 14 ರಂದು ದೆಹಲಿಯತ್ತ ಮೆರವಣಿಗೆ ನಡೆಸಲಿದೆ ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಮಂಗಳವಾರ ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

ಹರಿಯಾಣ ಗಡಿಯಲ್ಲಿನ ಶಂಭುವಿನಲ್ಲಿ ಪೊಲೀಸರು ನಡೆಸಿದ ಅಶ್ರುವಾಯು ಶೆಲ್ ದಾಳಿಯಲ್ಲಿ ಕೆಲವರು ಗಾಯಗೊಂಡ ನಂತರ, ಪ್ರತಿಭಟನಾನಿರತ ರೈತರು ಎರಡು ದಿನಗಳ ಪ್ರತಿಭಟನೆಯ ನಂತರ ಡಿಸೆಂಬರ್ 8 ರಂದು ದೆಹಲಿಗೆ ಕಾಲ್ನಡಿಗೆ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿರುವುದರಿಂದ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದ ರೈತರು ಮುಂದೆ ಹೋಗದಂತೆ ಪೊಲೀಸರು ಸೂಚಿಸಿದ್ದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್​ಪಿ) ಕಾನೂನು ಖಾತರಿ, ಸಾಲ ಮನ್ನಾ ಮತ್ತು ಕೃಷಿ ಕ್ಷೇತ್ರದ ಪರಿಸ್ಥಿತಿಗಳನ್ನು ಸುಧಾರಿಸುವ ಸುಧಾರಣೆಗಳು ಸೇರಿದಂತೆ ತಮ್ಮ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ.

ದೆಹಲಿಗೆ ತೆರಳುತ್ತಿದ್ದ ರ್ಯಾಲಿಯನ್ನು ಪೊಲೀಸರು ತಡೆದ ನಂತರ ರೈತರು ಫೆಬ್ರವರಿ 13 ರಿಂದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಸ್ಥಳಗಳಲ್ಲಿ ಕ್ಯಾಂಪ್ ಹೂಡಿದ್ದಾರೆ.

ಏತನ್ಮಧ್ಯೆ, ಉಪವಾಸದ 15 ನೇ ದಿನದಂದು ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿದೆ. ದಲ್ಲೆವಾಲ್ ಅವರ ತೂಕ ಕಡಿಮೆಯಾಗುತ್ತಿದೆ ಮತ್ತು ಅವರ ರಕ್ತದೊತ್ತಡ ಸ್ಥಿರವಾಗಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ. ಹರಿಯಾಣ ಸರ್ಕಾರವು ಈ ಗಡಿಯನ್ನು ಭಾರತ-ಪಾಕಿಸ್ತಾನ ಗಡಿಯಂತೆ ಪರಿವರ್ತಿಸಿದೆ ಎಂದು ಪ್ರತಿಭಟನಾನಿರತ ರೈತರೊಬ್ಬರು ಆರೋಪಿಸಿದರು.

ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ, ಘಗ್ಗರ್ ನದಿ ಬಳಿಯ ಅಂತರರಾಜ್ಯ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜ್ಯ ಪೊಲೀಸರೊಂದಿಗೆ ಗಡಿಯ ಹರಿಯಾಣ ಭಾಗದಲ್ಲಿ ಕೇಂದ್ರ ಅರೆಸೈನಿಕ ಪಡೆಗಳನ್ನು ಸಹ ನಿಯೋಜಿಸಲಾಗಿದೆ.

ಇದನ್ನೂ ಓದಿ : ಮೋದಿ ಕುವೈತ್ ಪ್ರವಾಸ ಶೀಘ್ರ: 43 ವರ್ಷಗಳಲ್ಲಿ ಭಾರತದ ಪ್ರಧಾನಿಯ ಮೊದಲ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.