ಚಂಡೀಗಢ ಪಂಜಾಬ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ರೈತರು ಶಂಭು ಮತ್ತು ಕನೌರಿ ಗಡಿ ಬಳಿ ನಿರಂತರ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ನಡುವೆ ರೈತರು ನಡೆಸಿದ್ದ ದೆಹಲಿ ನಡಿಗೆ ಹಲವು ಬಾರಿ ವಿಫಲವಾಗಿದ್ದು, ಗಡಿಯಲ್ಲಿಯೇ ಅವರನ್ನು ತಡೆಯಲಾಗುತ್ತಿದೆ. ಮತ್ತೊಂದೆಡೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ನಾಯಕ ಜಗ್ಜೀತ್ ಸಿಂಗ್ ಕಳೆದ 34 ದಿನಗಳಿಂದ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆ ಮಧ್ಯ ಪ್ರವೇಶಿಸಿರುವ ಸುಪ್ರೀಂ ಕೋರ್ಟ್ ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ.
ಈ ನಡುವೆ ರೈತರು ಇಂದು ಪಂಜಾಬ್ ಬಂದ್ಗೆ ಕರೆ ನೀಡಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಇದಾದ ಬಳಿಕ ಹರಿಯಾಣದಲ್ಲಿ ಜನವರಿ 4 ರಂದು ಮತ್ತು ಜನವರಿ 9 ರಂದು ಮೊಗಾದಲ್ಲಿ ಮಹಾಪಂಚಾಯತ್ ಸಂಘಟಿಸಲಾಗುವುದು ಎಂದು ರೈತರು ಘೋಷಿಸಿದ್ದಾರೆ.
ಪಂಜಾಬ್ ಬಂದ್ಗಿಲ್ಲ ಉದ್ಯಮಗಳ ಬೆಂಬಲ: ಡಿಸೆಂಬರ್ 30ರಂದು ಕರೆ ನೀಡಿರುವ ಪಂಜಾಬ್ ಬಂದ್ ರಸ್ತೆ ಟ್ರಾಫಿಕ್ ಜೊತೆಗೆ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಇದೇ ವೇಳೆ ಪಂಜಾಬ್ ಉದ್ಯಮಿಗಳು ಮಾರುಕಟ್ಟೆ ತೆರೆಯುವುದಾಗಿ ಘೋಷಿಸಿದ್ದಾರೆ. ಈ ಕುರಿತು ಮಾತನಾಡಿರುವ ಪಂಜಾಬ್ ಉದ್ಯಮ ಮಂಡಳಿಯ ರಾಜ್ಯ ನಾಯಕ ಅನಿಲ್ ಬನ್ಸಾಲ್ ನಾನಾ, ರೈತ ಸಂಘಟನೆ ಬಂದ್ ಕುರಿತಾಗಿ ನಮ್ಮ ಜೊತೆ ಯಾವುದೇ ಸಂಪರ್ಕ ನಡೆಸಿಲ್ಲ. ಜೊತೆಗೆ ಬಂದ್ನಿಂದ ಉದ್ಯಮಿ - ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ಈಗಾಗಲೇ ಉದ್ಯಮವೂ ಕೆಟ್ಟ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಪಂಜಾಬ್ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದರು.
ಬಂದ್ಗೆ ಸಾರಿಗೆ ಬೆಂಬಲ: ರಾಜ್ಯ ಬಂದ್ಗೆ ಪಿಆರ್ಟಿಸಿ ಗುತ್ತಿಗೆ ಕಾರ್ಮಿಕರು ಬೆಂಬಲ ನೀಡಿದ್ದಾರೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ದಿಗ್ಬಂದನ ಹಾಕುವುದಾಗಿ ತಿಳಿಸಿದ್ದಾರೆ.
ಇಂದು ಈ ಸೌಲಭ್ಯವಿಲ್ಲ
- ಬೆಳಗ್ಗೆ 7ರಿಂದ 4ರವರೆಗೆ ಸಂಪೂರ್ಣ ಪಂಜಾಬ್ ಬಂದ್ ಇರಲಿದೆ.
- ಶಾಲಾ ಮತ್ತು ಕಾಲೇಜ್ಗಳು ಕೂಡ ಮುಚ್ಚಲಿವೆ.
- ಬಸ್ ಸೇವೆ ಲಭ್ಯವಿಲ್ಲ.
- ರೈಲು ಸೇವೆ ಕೂಡ ಇರುವುದಿಲ್ಲ.
- ಸರ್ಕಾರಿ ಮತ್ತು ಸರ್ಕಾರೇತರ ಕಚೇರಿ ಕೂಡ ಬಂದ್ ಆಗಿರಲಿದೆ.
- ಖಾಸಗಿ ವಾಹನಗಳ ಸೇವೆ ಕೂಡ ಇರುವುದಿಲ್ಲ
- ಗ್ಯಾಸ್ ಸ್ಟೇಷನ್ ಕೂಡ ಮುಚ್ಚಲಿದೆ.
- ಪೆಟ್ರೋಲ್ ಪಂಪ್ಸ್ ಕೂಡ ಮುಚ್ಚಲಿವೆ.
- ತರಕಾರಿ ಮಾರುಕಟ್ಟೆ ಬಂದ್ ಇರಲಿದೆ.
- ಹಾಲಿನ ಸೇವೆಯೂ ಅಲಭ್ಯ.
- 200-300 ಸ್ಥಳದಲ್ಲಿ ದಿಗ್ಬಂಧನ
- ಸಾಮಾನ್ಯ ಜನರು ಮನೆಯಿಂದ ಹೊರ ಬರುವಂತೆ ಇಲ್ಲ.
ಯಾವ ಸೇವೆ ಲಭ್ಯವಿರಲಿದೆ?
- ತುರ್ತು ಸೇವೆ ಕಾರ್ಯಾಚರಣೆ ನಿರ್ವಹಿಸಲಿದೆ.
- ಮೆಡಿಕಲ್ ಸೇವೆ ಕೂಡ ಲಭ್ಯ
- ವಿಮಾನ ಪ್ರಯಾಣಿಕರಿಗೆ ತಡೆ ಇಲ್ಲ.
- ವಧು ಮತ್ತು ವರರ ವಾಹನಗಳನ್ನು ತಡೆಯುವುದಿಲ್ಲ.
- ಪೇಪರ್ ನೀಡಲು ತೆರಳುವ ವಿದ್ಯಾರ್ಥಿಗಳಿಗೆ ತಡೆಯಿಲ್ಲ.
- ಸಂದರ್ಶನಕ್ಕೆ ಹೋಗುವ ಯುವಜನರಿಗೂ ತಡೆಯಿಲ್ಲ.
ಇದನ್ನೂ ಓದಿ: ಕೇಂದ್ರ ಸರ್ಕಾರ ಹಟಮಾರಿತನ ಬಿಟ್ಟು ರೈತರೊಂದಿಗೆ ಮಾತುಕತೆಗೆ ಮುಂದಾಗಲಿ: ಪಂಜಾಬ್ ಸಿಎಂ ಮಾನ್