ETV Bharat / bharat

ಸುಳ್ಳು ದಾಖಲೆ ಆರೋಪ: ಟ್ರೇನಿ IAS ಅಧಿಕಾರಿ ಹುದ್ದೆಯಿಂದ ಪೂಜಾ ಖೇಡ್ಕರ್​ ಬಿಡುಗಡೆ, ಮಸ್ಸೂರಿ ಅಕಾಡೆಮಿಗೆ ವಾಪಸ್ - Puja Khedkar

author img

By ETV Bharat Karnataka Team

Published : Jul 16, 2024, 8:26 PM IST

Updated : Jul 16, 2024, 8:38 PM IST

ಯುಪಿಎಸ್​ಸಿ ನೇಮಕಾತಿ ವೇಳೆ ಸುಳ್ಳು ದಾಖಲೆ ನೀಡಿದ ಆರೋಪದ ಮೇಲೆ ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್​ರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ಟ್ರೇನಿ ಅಧಿಕಾರಿ ಹುದ್ದೆಯಿಂದ ಪೂಜಾ ಖೇಡ್ಕರ್​ ಬಿಡುಗಡೆ
ಟ್ರೇನಿ ಅಧಿಕಾರಿ ಹುದ್ದೆಯಿಂದ ಪೂಜಾ ಖೇಡ್ಕರ್​ ಬಿಡುಗಡೆ (ETV Bharat)

ಮುಂಬೈ (ಮಹಾರಾಷ್ಟ್ರ): ಅಧಿಕಾರ ದುರ್ಬಳಕೆ ಮಾಡಿಕೊಂಡ ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್​ಗೆ ದೊಡ್ಡ ಹೊಡೆತ ಬಿದ್ದಿದೆ. ನೇಮಕಾತಿ ವೇಳೆ ಸುಳ್ಳು ಮಾಹಿತಿ ನೀಡಿದ ಆರೋಪದ ಹಿನ್ನೆಲೆ ಅವರನ್ನು ತಕ್ಷಣದಿಂದಲೇ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಮಸ್ಸೂರಿಯಲ್ಲಿರುವ ಐಎಎಸ್ ಅಕಾಡೆಮಿ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಪುಣೆಯಲ್ಲಿ ನಿಯೋಜಿತವಾಗಿದ್ದ ಪೂಜಾ ಅವರನ್ನು ವಿವಾದದ ಬಳಿಕ ಇನ್ನೊಂದೆಡೆ ವರ್ಗ ಮಾಡಲಾಗಿತ್ತು. ಇದೀಗ ಯುಪಿಎಸ್​ಸಿ ನೇಮಕಾತಿಯಲ್ಲಿ ನಕಲಿ ದಾಖಲೆಗಳು ನೀಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರೊಬೇಷನರಿ ಅಧಿಕಾರಿ ಹುದ್ದೆಯಿಂದಲೂ ಕೈಬಿಡಲಾಗಿದೆ.

ಈ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ನಿತಿನ್ ಗಾದ್ರೆ ಅವರು ಪೂಜಾ ಖೇಡ್ಕರ್ ಅವರಿಗೆ ಪತ್ರ ಬರೆದು, ಜುಲೈ 23 ರೊಳಗೆ ಅಕಾಡೆಮಿ ಮುಂದೆ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ವಿವಾದ ಸೃಷ್ಟಿಯಾದ ಬಳಿಕ ವಿಚಾರಣೆಗಾಗಿ ಏಕಸದಸ್ಯ ಸಮಿತಿಯನ್ನು ರಚಿಸಲಾಗಿದೆ.

ಏನಿದು ವಿವಾದ: ಟ್ರೇನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​, ತಮ್ಮ ವೈಯಕ್ತಿಕ ಕಾರಿನ ಮೇಲೆ 'ಮಹಾರಾಷ್ಟ್ರ ಸರ್ಕಾರ' ಎಂದು ಅನಧಿಕೃತವಾಗಿ ಬರೆದುಕೊಂಡಿದ್ದಲ್ಲದೇ, ಕೆಂಪು ದ್ವೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಅಧಿಕಾರಿಯೊಬ್ಬರ ಕಚೇರಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಕಚೇರಿಗೆ ದುಬಾರಿ ವಸ್ತುಗಳನ್ನು ಅಳಡಿಸಿದ್ದರು.

ಪ್ರೊಬೇಷನರಿ ಅಧಿಕಾರಿಯಾಗಿದ್ದುಕೊಂಡು ಪೂರ್ಣಾವಧಿ ಅಧಿಕಾರ ಚಲಾಯಿಸುತ್ತಿದ್ದ ಪೂಜಾ ಮೇಲೆ ಕ್ರಮ ಜರುಗಿಸಲು ಕೋರಲಾಗಿದೆ. ಅದರಂತೆ, ವಿಚಾರಣೆ ನಡೆಸುತ್ತಿರುವ ಪೊಲೀಸರು, ಕೆಂಪು ದೀಪವನ್ನು ಬಳಸಿದ್ದ ವೈಯಕ್ತಿಕ ಕಾರನ್ನು ಜಪ್ತಿ ಮಾಡಿದ್ದಾರೆ. ಇದರ ಜೊತೆಗೆ, ಐಎಎಸ್​​ ಅದಿಕಾರಿಯಾಗಿ ನೇಮಕವಾದ ವೇಳೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಕೆಂಪು ದೀಪ ಅಳವಡಿಸಿಕೊಂಡು, ಹಲವು ಬಾರಿ ರಸ್ತೆ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ದಂಡದ ಚಲನ್​​ಗಳನ್ನು ಕಳುಹಿಸಲಾಗಿದೆ. ಅತಿಯಾದ ವೇಗದ ಚಾಲನೆ, ಸಿಗ್ನಲ್ ಉಲ್ಲಂಘನೆ ಸೇರಿ 21 ಆರೋಪಗಳ ಬಾಕಿ ದಂಡ ಪಾವತಿಸಬೇಕಿದೆ. ಹೀಗಾಗಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೂಜಾ ತಾಯಿಗೂ ನೋಟಿಸ್​, ನಾಪತ್ತೆ: ಅಧಿಕಾರಿ ಪೂಜಾ ಅವರ ತಾಯಿ ಮನೋಹರ್​ ಖೇಡ್ಕರ್​ ಅವರು ಈ ಹಿಂದೆ ಬಹಿರಂಗವಾಗಿ ಪಿಸ್ತೂಲ್​ ತೋರಿಸಿ ರೈತರನ್ನು ಹೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಿಸ್ತೂಲ್​ಗೆ ನೀಡಿದ ಪರವಾನಗಿಯನ್ನು ಏಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಈ ಕುರಿತ ನೋಟಿಸ್​ ಅನ್ನು ಅವರ ಮನೆಗೆ ಪೊಲೀಸರು ಅಂಟಿಸಿದ್ದಾರೆ. ಇದರ ಬೆನ್ನಲ್ಲೇ ಅವರು, ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: 'ಸುಳ್ಳು ದಾಖಲೆ, ರಸ್ತೆ ನಿಯಮ ಉಲ್ಲಂಘನೆ, ಅಕ್ರಮ ಮನೆ ನಿರ್ಮಾಣ': ಸಂಕಷ್ಟದಲ್ಲಿ ಟ್ರೇನಿ ಐಎಎಸ್​ ಅಧಿಕಾರಿ ಪೂಜಾ - IAS Pooja Khedkar

Last Updated : Jul 16, 2024, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.