ETV Bharat / bharat

ಬಿಜೆಪಿ ವಿರುದ್ಧ ವಾಗ್ದಾಳಿ, ಜಾತಿ ಗಣತಿಗೆ ಬೆಂಬಲ: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಚೊಚ್ಚಲ ಭಾಷಣ - PRIYANKA GANDHI SPEECH IN LOK SABHA

ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಇಂದು ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ (IANS)
author img

By ETV Bharat Karnataka Team

Published : 3 hours ago

Updated : 4 minutes ago

ನವದೆಹಲಿ: ಭಾರತದ ಸಂವಿಧಾನವನ್ನು ಅಂಗೀಕರಿಸಿದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಮಹತ್ವದ ಚರ್ಚೆಯ ಸಂದರ್ಭದಲ್ಲಿ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಲೋಕಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದರು.

ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಿದಾಗಿನಿಂದ ಅದರ ವಿಕಾಸ ಮತ್ತು ಮಹತ್ವದ ಮೇಲೆ ಕೇಂದ್ರೀಕೃತವಾಗಿ ನಡೆಯುತ್ತಿರುವ ಎರಡು ದಿನಗಳ 'ಭಾರತದ ಸಂವಿಧಾನದ 75 ವರ್ಷಗಳ ಭವ್ಯ ಪ್ರಯಾಣದ ಚರ್ಚೆಯ ಭಾಗವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಸತ್ತಿನಲ್ಲಿ ಮಾತನಾಡಿದರು.

ಜಾತಿ ಜನಗಣತಿಗೆ ಆಗ್ರಹ: ಭಾರತದಲ್ಲಿ ಜಾತಿ ಜನಗಣತಿ ನಡೆಸಬೇಕೆಂದು ಅವರು ತಮ್ಮ ಚೊಚ್ಚಲ ಭಾಷಣದಲ್ಲಿ ಪ್ರತಿಪಾದಿಸಿದರು. ಜಾತಿ ಜನಗಣತಿ ನಡೆಸುವುದು ಜನರ ಬೇಡಿಕೆಯಾಗಿದೆ ಎಂದು ಅವರು ಹೇಳಿದರು. ನೀತಿ ನಿಯಮಗಳನ್ನು ರಚಿಸುವಾಗ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಜಾತಿಜನಗಣತಿ ಮಾಹಿತಿಯ ಮಹತ್ವವನ್ನು ಒತ್ತಿ ಹೇಳಿದರು.

ರಾಜಕೀಯ ಚರ್ಚೆಗಳಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರನ್ನು ಗುರಿಯಾಗಿಸಿಕೊಂಡು ಟೀಕಿಸುವ ಭಾರತೀಯ ಜನತಾ ಪಕ್ಷವನ್ನು ಅವರು ತರಾಟೆಗೆ ತೆಗೆದುಕೊಂಡರು.

"ನೆಹರೂ ಅವರ ಹೆಸರನ್ನು ಪುಸ್ತಕಗಳು ಮತ್ತು ಭಾಷಣಗಳಿಂದ ಅಳಿಸಿಹಾಕಬಹುದು, ಆದರೆ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಅಳಿಸಿಹಾಕಲಾಗುವುದಿಲ್ಲ" ಎಂದ ಅವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ನೆಹರೂ ಅವರ ಶಾಶ್ವತ ಪರಂಪರೆಯನ್ನು ಸಮರ್ಥಿಸಿಕೊಂಡರು.

"ನಮ್ಮ ಸ್ವಾತಂತ್ರ್ಯ ಹೋರಾಟವು ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ಕೂಡಿದ್ದು ಅದು ವಿಶ್ವದ ಇತರ ಯಾವುದೇ ಹೋರಾಟಗಳಿಗಿಂತ ಭಿನ್ನವಾಗಿತ್ತು" ಎಂದು ಅವರು ಹೇಳಿದರು.

"ಈ ವಿಶಿಷ್ಟ ವಿಧಾನವು ನಮ್ಮ ಹಾದಿಯನ್ನು ವಿಭಿನ್ನವಾಗಿಸಿತು ಮತ್ತು ಸಂವಿಧಾನವು ಜನರಿಗೆ ನ್ಯಾಯದ ಹಕ್ಕನ್ನು ಗುರುತಿಸುವ ಶಕ್ತಿಯನ್ನು ನೀಡಿತು. ಸರ್ಕಾರದ ವಿರುದ್ಧ ಧ್ವನಿ ಎತ್ತುವ ಶಕ್ತಿ ಅವರಿಗೆ ಇದೆ ಎಂಬ ಅರಿವನ್ನು ಸಂವಿಧಾನವು ಜನರಿಗೆ ಮೂಡಿಸಿತು" ಎಂದು ವಯನಾಡ್ ಸಂಸದೆ ಪ್ರಿಯಾಂಕಾ ತಿಳಿಸಿದರು.

ಭಾರತೀಯ ಸಂವಿಧಾನವು ಜನರನ್ನು ರಕ್ಷಿಸುವ 'ಸುರಕ್ಷಾ ಕವಚ' (ಗುರಾಣಿ)ವಾಗಿದೆ ಎಂದು ಬಣ್ಣಿಸಿದ ಅವರು ಆಡಳಿತ ಪಕ್ಷವು ಅದನ್ನು ದುರ್ಬಲಗೊಳಿಸಲು ಪದೇ ಪದೇ ಪ್ರಯತ್ನಿಸುತ್ತಿದೆ ಎಂದು ವಿಷಾದಿಸಿದರು. "ದುರದೃಷ್ಟವಶಾತ್, ಆಡಳಿತ ಪಕ್ಷವು ಆ ಗುರಾಣಿಯನ್ನು ನಾಶ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ" ಎಂದು ಅವರು ಹೇಳಿದರು.

ಮೀಸಲಾತಿಯ ನೀತಿಗಳನ್ನು ದುರ್ಬಲಗೊಳಿಸುವ ಸರ್ಕಾರದ ಪ್ರಯತ್ನಗಳ ಬಗ್ಗೆ, ವಿಶೇಷವಾಗಿ ಹಿಂಬಾಗಿಲ ಪ್ರವೇಶ ಮತ್ತು ಖಾಸಗೀಕರಣ ಉಪಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕಿ ಕಳವಳ ವ್ಯಕ್ತಪಡಿಸಿದರು.

"ಲೋಕಸಭಾ ಚುನಾವಣಾ ಫಲಿತಾಂಶಗಳು ಆ ರೀತಿ ಬಂದಿಲ್ಲದಿದ್ದರೆ ಬಿಜೆಪಿಯವರು ಈಗಾಗಲೇ ಸಂವಿಧಾನವನ್ನು ಬದಲಾಯಿಸಲು ಪ್ರಾರಂಭಿಸುತ್ತಿದ್ದರು" ಎಂದು ಅವರು ನುಡಿದರು.

ಇಂದಿನ ಚರ್ಚೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಾರಂಭಿಸಿದರು. ಚರ್ಚೆಯು ಬಹುತೇಕ ಭಾರತದ ಸಂವಿಧಾನದ ಪ್ರಾಮುಖ್ಯತೆಯ ಸುತ್ತಲೂ ನಡೆಯುತ್ತಿದ್ದರೂ, ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಸದನಕ್ಕೆ ಪಾದಾರ್ಪಣೆ ಮಾಡಿದ್ದು ಹಾಗೂ ಚೊಚ್ಚಲ ಭಾಷಣ ಮಾಡಿದ್ದು ವಿಶೇಷ ಗಮನ ಸೆಳೆಯಿತು.

ಸಂವಿಧಾನ ರಚನೆಯಲ್ಲಿ ಹಲವಾರು ನಾಯಕರ ಕೊಡುಗೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್ ಸಿಂಗ್, ಒಂದು ನಿರ್ದಿಷ್ಟ ಪಕ್ಷವು ಯಾವಾಗಲೂ ಸಂವಿಧಾನದ ರಚನೆಯನ್ನು 'ಹೈಜಾಕ್ ಮಾಡಲು ಮತ್ತು ಸ್ವಾಧೀನಪಡಿಸಿಕೊಳ್ಳಲು' ಪ್ರಯತ್ನಿಸುತ್ತದೆ ಎಂದು ಪ್ರತಿಪಾದಿಸಿದರು.

ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಹೇಳಿದೆ ಮತ್ತು ರಾಷ್ಟ್ರಕ್ಕೆ ಯಾವುದೇ ಧರ್ಮವಿರುವುದಿಲ್ಲ ಮತ್ತು ಅದು ಜಾತ್ಯತೀತವಾಗಿರುತ್ತದೆ ಎಂದು ನಿರ್ದಿಷ್ಟಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 14 ರಂದು ಸಂಜೆ ಚರ್ಚೆಗೆ ಉತ್ತರಿಸುವ ನಿರೀಕ್ಷೆಯಿದೆ. ಎಚ್.ಡಿ.ಕುಮಾರಸ್ವಾಮಿ ಮತ್ತು ಶ್ರೀಕಾಂತ್ ಶಿಂಧೆ ಅವರಂಥ ಹಲವಾರು ಪ್ರಮುಖರು ಸೇರಿದಂತೆ ಬಿಜೆಪಿಯ ನಾಯಕರು ತಮ್ಮ ದೃಷ್ಟಿಕೋನಗಳನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

ಆಡಳಿತಾರೂಢ ಎನ್​ಡಿಎ ಮತ್ತು ಪ್ರತಿಪಕ್ಷಗಳ ನಡುವೆ, ವಿಶೇಷವಾಗಿ ಕಾಂಗ್ರೆಸ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಚರ್ಚೆ ನಡೆಯುತ್ತಿದೆ. ಬಿಜೆಪಿ ನಾಯಕರು ತುರ್ತು ಪರಿಸ್ಥಿತಿಯ ಬಗ್ಗೆ ಚರ್ಚೆ ಆರಂಭಿಸುವ ನಿರೀಕ್ಷೆಯಿದ್ದು, ಪ್ರತಿಪಕ್ಷಗಳು ಸುಳ್ಳು ನಿರೂಪಣೆಗಳನ್ನು ದೇಶದ ಮುಂದಿಡುತ್ತಿದ್ದಾರೆ ಎಂದು ಪ್ರತಿಪಾದಿಸುವ ಸಾಧ್ಯತೆಗಳಿವೆ.

ಚರ್ಚೆ ಮುಂದುವರೆದಿರುವ ಮಧ್ಯೆ ಪ್ರಿಯಾಂಕಾ ಗಾಂಧಿ ಅವರ ಚೊಚ್ಚಲ ಭಾಷಣವು ಸಂವಿಧಾನ ಮತ್ತು ಭಾರತದ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಗಳಲ್ಲಿ ಮಹತ್ವದ ಕ್ಷಣವಾಗಿದೆ.

ಇದನ್ನೂ ಓದಿ : ವರದಕ್ಷಿಣೆ, ಕೌಟುಂಬಿಕ ಹಿಂಸಾಚಾರ ಕಾಯ್ದೆಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ - DOMESTIC VIOLENCE CASE

Last Updated : 4 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.