ವಿಜಯವಾಡ: ಪ್ರಧಾನಿ ಮೋದಿ ಅವರು ನಟ ಚಿರಂಜಿವಿ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ವೇದಿಕೆ ಮೇಲೆಯೇ ಪರಸ್ಪರ ಭೇಟಿ ಮಾಡಿ ಹಸ್ತಲಾಘವದ ಜತೆ ಆಲಿಂಗನ ಮಾಡಿ, ಆಪ್ತತೆ ಮೆರೆದರು.
ನಾರಾ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಅವರು ಕಾರ್ಯಕ್ರಮ ಮುಗಿದ ಬಳಿಕ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರನ್ನು ಭೇಟಿ ಮಾಡಿ ಹಸ್ತಲಾಘವ ಮಾಡಿದರು. ಈ ವೇಳೆ ಟಾಲಿವುಡ್ನ ಸೂಪರ್ ಸ್ಟಾರ್ ಚಿರಂಜಿವಿ ಮತ್ತು ಅವರ ಸಹೋದರ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಬಳಿ ತೆರಳಿ ಹಸ್ತಲಾಘವ ಮಾಡಿ ಶುಭಕೋರಿದರು. ಉಳಿದಂತೆ ವೇದಿಕೆ ಮೇಲಿದ್ದ ನಟ ರಜನಿಕಾಂತ್, ಬಾಲಕೃಷ್ಣ ಸೇರಿ ಮೈತ್ರಿ ನಾಯಕರಿಗೆ ಹಸ್ತಲಾಘವ ಮಾಡಿದರು.
ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಅವರ ಪತ್ನಿ ಜತೆ ಮಾತನಾಡಿದರು. ಇದಕ್ಕೂ ಮುನ್ನ ಚಂದ್ರಬಾಬು ನಾಯ್ಡು ಸಿಎಂ ಆಗಿ ಗಣ್ಯರ ಸಮ್ಮುಖದಲ್ಲಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಅಬ್ದುಲ್ ನಜೀರ್ ಅವರು ಚಂದ್ರಬಾಬು ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ, ಏರ್ಪೋರ್ಟ್ನಲ್ಲಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ - Rahul Gandhi