ETV Bharat / bharat

ನಕಾರಾತ್ಮಕ ಚಿಂತನೆ, ಪರಿವಾರ ವಾದಕ್ಕೆ ಸೋಲು: ಪ್ರಧಾನಿ ಮೋದಿ, ಬಿಜೆಪಿ ಹೆಡ್​​​​ಕ್ವಾಟರ್ಸ್​​​​​​ನಲ್ಲಿ 'ಮಹಾ' ಸಂಭ್ರಮ

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ (X.com)
author img

By ETV Bharat Karnataka Team

Published : Nov 23, 2024, 9:01 PM IST

Updated : Nov 23, 2024, 9:14 PM IST

ನವದೆಹಲಿ: ದೇಶದಲ್ಲಿ ನಕಾತರಾತ್ಮಕ ಚಿಂತನೆ, ಪರಿವಾರವಾದಕ್ಕೆ ಮತ್ತೆ ಸೋಲಾಗಿದೆ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಸಮಾಜವನ್ನು ವಿಘಟಿಸಲು ಯತ್ನಿಸುವ ಶಕ್ತಿಗಳನ್ನು ಜನರು ಹೊರದಬ್ಬಿದ್ದಾರೆ ಎಂಬುದಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯೇ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಮಹಾಯುತಿ ಗೆದ್ದಿದೆ. ವಿಕಸಿತ ಭಾರತದ ಸಂಕಲ್ಪವು ಬೆಳಗಿದೆ. ಕಾಂಗ್ರೆಸ್​​ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಕಪಾಳಮೋಕ್ಷವಾಗಿದೆ ಎಂದು ಮೋದಿ ಹೇಳಿದರು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.

ಮಹಾರಾಷ್ಟ್ರದಲ್ಲಿ ಎಲ್ಲ ದಾಖಲೆಗಳನ್ನು ಎನ್​ಡಿಎ ಮೈತ್ರಿ ಮುರಿದಿದೆ. ಕಳೆದ 50 ವರ್ಷಗಳಲ್ಲಿಯೇ ರಾಜ್ಯದಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಸತತ ಮೂರನೇ ಬಾರಿಗೆ ಜನರು ಬಿಜೆಪಿ ಮೈತ್ರಿಗೆ ಗೆಲುವು ನೀಡಿದ್ದಾರೆ. ಬಿಜೆಪಿಯು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಐತಿಹಾಸಿಕ ಗೆಲುವಾಗಿದೆ. ಇದು ಅಭಿವೃದ್ಧಿಗೆ ಜನರು ಹಾಕಿದ ಜೈಕಾರವಾಗಿದೆ ಎಂದು ಬಣ್ಣಿಸಿದರು.

ಈ ಕಡೆಗಳಲ್ಲೆಲ್ಲಾ ನಾವು ಸತತ ಗೆಲುವು ಸಾಧಿಸಿದ್ದೇವೆ?: ಗೋವಾ, ಗುಜರಾತ್​, ಛತ್ತೀಸ್​ಗಢ, ಹರಿಯಾಣ, ಮಧ್ಯಪ್ರದೇಶದಲ್ಲಿ ನಾವು ಈಗಾಗಲೇ ಸತತ ಮೂರು ಬಾರಿ ಗೆಲುವು ಸಾಧಿಸಿದ್ದೇವೆ. ಬಿಹಾರದಲ್ಲೂ ಎನ್​ಡಿಎ ಸರ್ಕಾರಕ್ಕೆ ಗೆಲುವು ಸಿಕ್ಕಿದೆ. ಕೇಂದ್ರದಲ್ಲೂ ಕೂಡ ಎನ್​ಡಿಎಗೆ ಸತತ ಮೂರನೇ ಬಾರಿಗೆ ನೀಡಿದ್ದೀರಿ ಎಂದು ಸ್ಮರಿಸಿದರು.

ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಮಹಾರಾಷ್ಟ್ರ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಭಿವೃದ್ಧಿಯನ್ನು ಮೆಚ್ಚಿ ಅವರು ಮೂರನೇ ಬಾರಿಗೆ ಅಧಿಕಾರ ನೀಡಿದ್ದಾರೆ. ಈ ಗೆಲುವು ವಿಕಸಿತ ಭಾರತಕ್ಕೆ ಬಲ ನೀಡಿದೆ ಎಂದರು.

ಮತ್ತೆ ಮೊಳಗಿದ 'ಏಕತ್ವ' ಘೋಷಣೆ: 'ಏಕ್​ ಹೈ ತೋ ಸೇಫ್​ ಹೈ' ಎಂಬ ಘೋಷಣೆಯನ್ನು ಪ್ರಧಾನಿ ಮೋದಿ ಅವರು ಮತ್ತೆ ಮೊಳಗಿಸಿದರು. ಕಾಂಗ್ರೆಸ್​ ಮತ್ತು ಅದರ ಕೂಟವು ಎಸ್​ಸಿ - ಎಸ್​ಟಿ ಸೇರಿದಂತೆ ಸಣ್ಣ ಸಣ್ಣ ಜಾತಿಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇದನ್ನು ಮಹಾರಾಷ್ಟ್ರದ ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದರು.

ಕಾಂಗ್ರೆಸ್​ ಪರಾವಲಂಬಿ ಜೀವಿ : ದೇಶದಲ್ಲಿ ಕಾಂಗ್ರೆಸ್​​ ಪಕ್ಷವು ಪರಾವಲಂಬಿ ಜೀವಿಯಾಗಿದೆ. ಇತರ ಪಕ್ಷಗಳ ಜೊತೆಗೂಡಿಯೇ ಅದು ಚುನಾವಣೆ ಎದುರಿಸುತ್ತಿದೆ. ಅದಕ್ಕೆ ಏಕಾಂಗಿಯಾಗಿ ಎದುರಿಸುವ ಶಕ್ತಿ ಇಲ್ಲ. ಆದರೂ, ಅದರ ಅಹಂಕಾರ ತಗ್ಗಿಲ್ಲ. ಆ ಪಕ್ಷವು ತಾನು ಮುಳುಗುವುದರ ಜೊತೆಗೆ ತನ್ನ ಮಿತ್ರ ಪಕ್ಷಗಳನ್ನೂ ಮುಳುಗಿಸುತ್ತಿದೆ. ಅದಕ್ಕೆ ಮಹಾರಾಷ್ಟ್ರ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಆರೋಪಿಸಿದರು.

370ನೇ ವಿಧಿ ಮರುಸ್ಥಾಪಿಸಲಾಗಲ್ಲ: ಕಾಂಗ್ರೆಸ್​ ಮತ್ತು ಅದರ ಮಿತ್ರವು ಜಮ್ಮು- ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ಮರಳಿ ತರಲು ಪ್ರಯತ್ನಿಸುತ್ತಿವೆ. ಅಖಂಡ ದೇಶವನ್ನು ಮತ್ತೆ ಇಬ್ಭಾಗ ಮಾಡಲು ಕಾಂಗ್ರೆಸ್​ ಯತ್ನಿಸುತ್ತಿದೆ. ಇದಕ್ಕಾಗಿ 370ನೇ ವಿಧಿಯನ್ನು ಮರು ಸ್ಥಾಪಿಸಲು ಬೆಂಬಲಿಸುತ್ತಿದೆ. ಯಾರೇ ಎಷ್ಟೇ ಪ್ರಯತ್ನಿಸಿದರೂ, 370 ನೇ ವಿಧಿಯನ್ನು ಪುನಃ ಸ್ಥಾಪಿಸಲಾಗಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ಇವುಗಳನ್ನು ಓದಿ: ಮಹಾರಾಷ್ಟ್ರದಲ್ಲಿ ಮೂರನೇ ಬಾರಿಗೆ ಸಿಎಂ ಸ್ಥಾನಕ್ಕೇರುತ್ತಾರಾ ದೇವೇಂದ್ರ ಫಡ್ನವೀಸ್?

ಲೋಕಸಭೆ ಹಿನ್ನಡೆ ಬಳಿಕ ಭರ್ಜರಿ ಕಮ್​​ಬ್ಯಾಕ್​​ ಮಾಡಿದ ಯೋಗಿ ಆದಿತ್ಯನಾಥ್: ಬಿಜೆಪಿ 7, ಎಸ್​ಪಿ 2 ಸ್ಥಾನಗಳಲ್ಲಿ ಮುನ್ನಡೆ

ಚುನಾವಣಾ ಫಲಿತಾಂಶ ತಿರುಚಲಾಗಿದೆ, ಒಪ್ಪಲು ಸಾಧ್ಯವೇ ಇಲ್ಲ: ಸಂಜಯ ರಾವತ್

Last Updated : Nov 23, 2024, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.