ETV Bharat / bharat

ಕಳೆದ 10 ವರ್ಷಗಳಲ್ಲಿ ದೇಶ 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ' ಕಂಡಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ - Modi speech in Lok Sabha - MODI SPEECH IN LOK SABHA

ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚಗೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಉತ್ತರಿಸಿದರು. ಮತ್ತೊಂದೆಡೆ, ವಿಪಕ್ಷಗಳ ಸಂಸದರು ನಿರಂತರವಾಗಿ ಘೋಷಣೆಗಳನ್ನು ಕೂಗಿದರು.

PM Modi's speech in Lok Sabha
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ (ETV Bharat)
author img

By ETV Bharat Karnataka Team

Published : Jul 2, 2024, 5:08 PM IST

Updated : Jul 2, 2024, 5:41 PM IST

ನವದೆಹಲಿ: ನಮ್ಮ ಏಕೈಕ ಗುರಿಯು ರಾಷ್ಟ್ರ ಮೊದಲು, ಭಾರತ ಮೊದಲಾಗಿದೆ. ನಮ್ಮ ಪ್ರತಿಯೊಂದು ನೀತಿ, ನಮ್ಮ ನಿರ್ಧಾರ ಮತ್ತು ನಮ್ಮ ಕೆಲಸವು ಒಂದು ರೀತಿಯಲ್ಲಿ ಇದೆ. ಅದುವೇ ಭಾರತ ಮೊದಲು. ಕಳೆದ 10 ವರ್ಷಳಿಂದ ನಮ್ಮ ಸರ್ಕಾರವು ಕೆಲಸ ಮಾಡುತ್ತಿದ್ದು, 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ'ದ ಉದ್ದೇಶವನ್ನು ಈ ದೇಶ ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಲೋಕಸಭೆಯಲ್ಲಿ ಉತ್ತರಿಸಿದರು. ನಮ್ಮ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ವಿಕಸಿತ್ ಭಾರತದ ನಮ್ಮ ಸಂಕಲ್ಪವನ್ನು ವಿವರಿಸಿದ್ದಾರೆ. ರಾಷ್ಟ್ರಪತಿಗಳು ನಿರ್ಣಾಯಕ ವಿಷಯಗಳನ್ನು ಎತ್ತಿದ್ದಾರೆ. ಅವರು ನಮಗೆ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

ಮೋದಿ ಭಾಷಣದ ವೇಳೆಯೇ ವಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದರು. ಆಗ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳ ಸದಸ್ಯರಿಗೆ ಶಾಂತವಾಗಿರಲು ಸೂಚಿಸಿದರು. ಆದರೂ, ತಮ್ಮ ವಿಪಕ್ಷಗಳ ಸಂಸದರು ಘೋಷಣೆಗಳನ್ನು ಮುಂದುವರೆಸಿದರು.

ಮತ್ತೊಂದೆಡೆ, ಪ್ರಧಾನಿ ತಮ್ಮ ಭಾಷಣವನ್ನು ಮುಂದುವರೆಸಿದರು, ನಿನ್ನೆ ಮತ್ತು ಇಂದು ಮುಂಜಾನೆ ಹಲವಾರು ಸಂಸದರು ರಾಷ್ಟ್ರಪತಿಗಳ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸದನದ ಎಲ್ಲ ನಿಯಮಗಳನ್ನು ಅನುಸರಿಸಿ ರಾಷ್ಟ್ರಪತಿಗಳ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಮೊದಲ ಬಾರಿಗೆ ಸಂಸದರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದರು.

ದೇಶವು ಯಶಸ್ವಿ ಚುನಾವಣಾ ಪ್ರಚಾರವನ್ನು ದಾಟಿದೆ. ಇದು ವಿಶ್ವದ ಅತಿದೊಡ್ಡ ಚುನಾವಣಾ ಪ್ರಚಾರವಾಗಿದೆ ಎಂದು ಜಗತ್ತಿಗೆ ತೋರಿಸಿದೆ. ಇದರಲ್ಲಿ ದೇಶದ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸುಳ್ಳು ಹೇಳಿದರೂ ಅವರು ಹೀನಾಯ ಸೋಲನ್ನು ಎದುರಿಸಿದ್ದಾರೆ ಎಂಬ ಕೆಲವರ ನೋವು ನನಗೆ ಅರ್ಥವಾಗುತ್ತದೆ ಎಂದು ಮೋದಿ ಪ್ರತಿಪಕ್ಷಗಳಿಗೆ ಕುಟುಕಿದರು.

ವಿಕಸಿತ್​ ಭಾರತದ ಸಂಕಲ್ಪ ಬಲಪಡಿಸಿದ ಜನತೆ: ನಾವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ನಾವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ ಎಂದು ಹೇಳಿದ್ದೆವು. ಭ್ರಷ್ಟಾಚಾರವು ದೇಶವನ್ನು ಗೆದ್ದಲುಗಳಂತೆ ಹಾಳುಮಾಡಿದೆ. ಆದರೆ, ಭ್ರಷ್ಟಾಚಾರದ ಶೂನ್ಯ ಸಹಿಷ್ಣುತೆಯ ಧೋರಣೆಗೆ ದೇಶವಾಸಿಗಳು ನಮ್ಮನ್ನು ಆಶೀರ್ವದಿಸಿದ್ದಾರೆ. ವಿಕಸಿತ್ ಭಾರತದ ನಮ್ಮ ಸಂಕಲ್ಪ ಈಡೇರಿಸಲು ನಾವು ಈ (ಲೋಕಸಭಾ) ಚುನಾವಣೆಯಲ್ಲಿ ಜನರ ಆಶೀರ್ವಾದ ಕೋರಿದ್ದೆವು. ಜನತೆ ವಿಕಸಿತ್​ ಭಾರತದ ಸಂಕಲ್ಪವನ್ನು ಬಲಪಡಿಸಿದ್ದಾರೆ. ನಮಗೆ ಗೆಲ್ಲಲು ಸಹಾಯ ಮಾಡಿದ್ದಾರೆ. ಜನರ ಸೇವೆ ಮಾಡಲು ನಮಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಒಂದು ದೇಶವು ವಿಕಸಿತ್ ಆದಾಗ ಸಾವಿರಾರು ಜನರ ಕನಸುಗಳು ನನಸಾಗುತ್ತವೆ. ನಮ್ಮ ಭವಿಷ್ಯದ ಪೀಳಿಗೆಯ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ ಎಂದು ಮೋದಿ ತಿಳಿಸಿದರು.

ಇಂದು ಭಾರತದ ಮಹತ್ವಾಕಾಂಕ್ಷೆಗಳು ದೊಡ್ಡದಾಗಿದೆ ಮತ್ತು ಇಂದು ಭಾರತವು ಈ 10 ವರ್ಷಗಳಲ್ಲಿ ತನ್ನೊಂದಿಗೆ ಸ್ಪರ್ಧಿಸಬೇಕಾದ ಹಂತವನ್ನು ತಲುಪಿದೆ. ನಾವು ನಮ್ಮದೇ ದಾಖಲೆಗಳನ್ನು ಮುರಿದು ನಮ್ಮ ಅಭಿವೃದ್ಧಿಯ ಪಯಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹವಾಮಾನ ಬದಲಾವಣೆ ಸಮಸ್ಯೆಗಳನ್ನು ನಿರ್ಲಕ್ಷಿಸುವಂತಿಲ್ಲ: ಸಿಜೆಐ ಚಂದ್ರಚೂಡ್

Last Updated : Jul 2, 2024, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.