ವಡೋದರ(ಗುಜರಾತ್): ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್ನ ವಡೋದರದಲ್ಲಿ ಸಿ-295 ಏರ್ಕ್ರಾಫ್ಟ್ ತಯಾರಿಸುವ ಟಾಟಾ ಏರ್‌ಬಸ್ ಕಾರ್ಖಾನೆಯನ್ನು ಉದ್ಘಾಟಿಸಿದರು. C295 ಮಿಲಿಟರಿ ವಿಮಾನವಾಗಿದ್ದು, ಅದರ ಉತ್ಪಾದನೆಯು ಭಾರತದ ಏರೋಸ್ಪೇಸ್ ಉದ್ಯಮವನ್ನು ಬಲಪಡಿಸುತ್ತದೆ. ಆತ್ಮನಿರ್ಭರ ಭಾರತದ ಸಂಕಲ್ಪಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಹೇಳಲಾಗಿದೆ.
ಇದು ಮಿಲಿಟರಿ ಏರ್ಕ್ರಾಫ್ಟ್ಗಳನ್ನು ಉತ್ಪಾದಿಸುವ ದೇಶದ ಮೊದಲ ಖಾಸಗಿ ವಲಯದ ಕಾರ್ಖಾನೆಯಾಗಿದೆ. ಇದು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಜೊತೆಗೆ, ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ವರದಿಯಾಗಿದೆ.
ಈ ಯೋಜನೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ವೃದ್ಧಿಸುವುದು ಮಾತ್ರವಲ್ಲದೇ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ವರ್ಲ್ಡ್ ಮಿಶನ್ಗೆ ವೇಗ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಿ-295 ಏರ್‌ಬಸ್ ಕಾರ್ಖಾನೆಯು ನವಭಾರತದ ಹೊಸ ರೀತಿಯ ಕೆಲಸದ ಸಂಸ್ಕೃತಿಯ ಪ್ರತಿಬಿಂಬವಾಗಿದೆ. 2022ರಲ್ಲಿ ಕಾರ್ಖಾನೆಗೆ ಅಡಿಗಲ್ಲು ಹಾಕಿ, ಎರಡೇ ವರ್ಷದಲ್ಲಿ ಕಾರ್ಯಾರಂಭ ಮಾಡಿದೆ. ಇದು ಯೋಜನೆಯ ವೇಗಕ್ಕೆ ಸಾಕ್ಷಿಯಾಗಿದೆ ಎಂದರು.
A boost to ‘Make in India’ and India-Spain cooperation!
— Narendra Modi (@narendramodi) October 28, 2024
The President of the Government of Spain, Mr. Pedro Sánchez and I inaugurated the aircraft complex in Vadodara, where the C-295 aircraft will be manufactured. #C295MadeInIndia @sanchezcastejon pic.twitter.com/pndM1PiLH5
ಒಪ್ಪಂದದ ಹಿನ್ನೆಲೆ: ಏರ್‌ಬಸ್ ಸಿ-295 ಒಂದು ಮಧ್ಯಮ ಗಾತ್ರದ ಸರಕು ಸಾಗಣೆಯ ಏರ್ಕ್ರಾಫ್ಟ್ ಆಗಿದೆ. ಸ್ಪೇನ್ನ ಏರೋಸ್ಪೇಸ್ ಕಂಪನಿ ಇವನ್ನು ಉತ್ಪಾದನೆ ಮಾಡುತ್ತದೆ. 2021ರ ಸೆಪ್ಟೆಂಬರ್ 24ರಂದು, ಭಾರತೀಯ ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗೆ 56 ಸಿ295 ಮಧ್ಯಮ ಯುದ್ಧತಂತ್ರದ ಲಿಫ್ಟ್ ವಿಮಾನವನ್ನು ತಯಾರಿಸಿಕೊಡಲು ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಆಫ್ ಸ್ಪೇನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತು.
ಈ ಒಪ್ಪಂದದ ಭಾಗವಾಗಿ ಭಾರತಕ್ಕೆ ನೀಡಬೇಕಾದ 56 ವಿಮಾನಗಳಲ್ಲಿ 16 ವಿಮಾನಗಳನ್ನು ಸ್ಪೇನ್‌ನಲ್ಲಿ ತಯಾರಿಸುವ ಮತ್ತು ಉಳಿದ 40 ಅನ್ನು ಭಾರತದಲ್ಲಿಯೇ ಉತ್ಪಾದಿಸುವ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದರಂತೆ ಈಗಾಗಲೇ ಏರ್‌ಬಸ್ ಡಿಫೆನ್ಸ್ 6 ವಿಮಾನಗಳನ್ನು ರೂಪಿಸಿ ಭಾರತಕ್ಕೆ ಹಸ್ತಾಂತರಿಸಿದೆ. ಸಿ295 ಏರ್‌ಬಸ್ ಅನ್ನು ವೈದ್ಯಕೀಯ ಸ್ಥಳಾಂತರ, ವಿಪತ್ತು ನಿರ್ವಹಣೆ, ನೌಕಾಪಡೆ ಗಸ್ತು ಮುಂತಾದ ಸಂದರ್ಭಗಳಲ್ಲಿ ಬಳಕೆ ಮಾಡಬಹುದಾಗಿದೆ.
ಇದನ್ನೂ ಓದಿ: ಜಮ್ಮುವಿನಲ್ಲಿ ಸೇನಾ ಟ್ರಕ್ ಮೇಲೆ ದಾಳಿ: ಮೂವರು ಉಗ್ರರ ಸದೆಬಡಿದ ಸೇನೆ