ನವದೆಹಲಿ: ರಾಷ್ಟ್ರೀಯ ವೈದ್ಯರ ದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದು, ದೇಶದಲ್ಲಿ ಆರೋಗ್ಯ ಮೂಲಸೌಕರ್ಯ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ವೈದ್ಯರಿಗೆ ಸಿಗಬೇಕಾದ ಗೌರವ ಪಡೆಯುವುದನ್ನು ಖಾತ್ರಿ ಪಡಿಸುತ್ತೇವೆ ಎಂದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿ ಕಾರ್ಯ ನಿರ್ಹಿಸಿದ್ದ ಖ್ಯಾತ ವೈದ್ಯರಾಗಿದ್ದ ಬಿಧಾನ್ ಚಂದ್ರ ರಾಯ್ ಅವರ ಸ್ಮರಣಾರ್ಥವಾಗಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಣೆ ಮಾಡಲಾಗುತ್ತಿದೆ.
Greetings on #DoctorsDay. This is a day to honour the incredible dedication and compassion of our healthcare heroes. They can navigate the most challenging complexities with remarkable skill. Our Government is fully committed to improving the health infrastructure in India and…
— Narendra Modi (@narendramodi) July 1, 2024
ಈ ಹಿನ್ನೆಲೆ ದೇಶದ ವೈದ್ಯ ಸಮೂಹಕ್ಕೆ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಆರೋಗ್ಯ ರಕ್ಷಣೆಗಾಗಿ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವ ಆರೋಗ್ಯ ಸೇವೆಯ ಹೀರೋಗಳನ್ನು ಗೌರವಿಸುವ ದಿನ ಇದು. ತಮ್ಮ ಅದ್ಭುತ ಕೌಶಲ್ಯದಿಂದಾಗಿ ಅವರು ಸಂಕೀರ್ಣ ಸವಾಲನ್ನು ನಿರ್ವಹಿಸಬಲ್ಲವರಾಗಿದ್ದಾರೆ. ಭಾರತದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ವೈದ್ಯರಿಗೆ ಅರ್ಹವಾದ ಗೌರವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
Heartiest greetings to all doctors on National Doctors' Day. It won't be wrong to say that doctors are truly a reincarnation of God. Countless times, doctors have emerged as life saviors. The world has witnessed the caliber and excellence of Indian doctors and healthcare… pic.twitter.com/Z8kIYGccdU
— Jagat Prakash Nadda (@JPNadda) July 1, 2024
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಕೂಡ ದೇಶದ ವೈದ್ಯರಿಗೆ ಶುಭ ಕೋರಿದ್ದು, ವೈದ್ಯರು ತಮ್ಮ ಪರಿಣತಿ ಮತ್ತು ಮಾನವೀಯ ಗುಣದಿಂದ ಜನರನ್ನು ಪ್ರೇರೇಪಿಸುತ್ತಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ವೈದ್ಯರ ದಿನದ ಹಿನ್ನೆಲೆ ಎಲ್ಲಾ ವೈದ್ಯರಿಗೆ ಹೃತ್ಪೂರ್ವಕ ಶುಭಾಶಯಗಳು. ವೈದ್ಯರು ಭೂಮಿ ಮೇಲಿನ ದೇವರು ಎಂಬುದರಲ್ಲಿ ತಪ್ಪಿಲ್ಲ. ಅನೇಕ ಬಾರಿ ರೋಗಿಗಳ ಜೀವ ರಕ್ಷಕರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಕೋವಿಡ್ 19 ಸಮಯದಲ್ಲಿ ಭಾರತದ ವೈದ್ಯರು ಮತ್ತು ವೃತ್ತಿಪರರ ಸಾಮರ್ಥ್ಯ ಮತ್ತು ಶ್ರೇಷ್ಟತೆಗೆ ಜಗತ್ತು ಸಾಕ್ಷಿಯಾಗಿದೆ. ಅವರ ಸೇವಾ ಮನೋಭಾವ ನಮಗೆ ಸ್ಪೂರ್ತಿ ನೀಡಲಿದೆ ಎಂದು ಬಣ್ಣಿಸಿದ್ದಾರೆ.
On National Doctors' Day, we express our heartfelt gratitude and deepest appreciation for the tireless efforts and selfless dedication of our medical fraternity— Doctors, healthcare professionals, frontline workers, ASHA workers, Anganwadi workers, ANMs, nurses, and medical… pic.twitter.com/qkdaLZs6uC
— Mallikarjun Kharge (@kharge) July 1, 2024
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ವೈದ್ಯರಿಗೆ ಶುಭಾಶಯ ಕೋರಿದ್ದಾರೆ. ತಮ್ಮ ಅವಿರಹಿತ ಪ್ರಯತ್ನ ಮತ್ತು ಸ್ವಾರ್ಥ ರಹಿತ ಸಮರ್ಪಣಾ ಕಾರ್ಯದಲ್ಲಿ ನಿರತರಾಗಿರುವ ಆರೋಗ್ಯ ಸೇವೆಯ ವೃತ್ತಿಪರರು, ಮುಂಚೂಣಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನಾಡಿ ಕಾರ್ಯಕರ್ತರು, ಎಎನ್ಎಂ, ನರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಶುಭಾಶಯ ಎಂದಿದ್ದಾರೆ.
ಜೀವ ಉಳಿಸುವ ಬದ್ಧತೆಗೆ ಪಣತೊಟ್ಟಿರುವ ಮತ್ತು ಮಾನವೀಯತೆಗೆ ಅವಿರತ ಸೇವೆಯಲ್ಲಿ ತೊಡಗಿರುವವರಿಗೆ ನಮ್ಮ ಸೆಲ್ಯೂಟ್ ಎಂದಿದ್ದಾರೆ. (ಪಿಟಿಐ/ ಐಎಎನ್ಎಸ್)
ಇದನ್ನೂ ಓದಿ: ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯರ ರಕ್ಷಣೆಗಿರುವ ಕಾನೂನುಗಳೇನು?