ETV Bharat / bharat

25ನೇ ಕಾರ್ಗಿಲ್​ ದಿವಸ್​ ಆಚರಣೆ; ಲಡಾಖ್​ಗೆ ಪ್ರಧಾನಿ ಭೇಟಿ - Kargil Vijay Diwas

ಜು 24ರಿಂದ 26ರವರೆಗೆ ಎರಡು ದಿನಗಳ ಕಾಲ ಈ ರಜತ ಜಯಂತಿ ಆಚರಣೆಗೆ ಲಡಾಖ್​ನಲ್ಲಿ ಸಿದ್ಧತೆ ನಡೆಸಲಾಗಿದೆ.

PM Modi will visit Ladakh on July 26 on the 25th anniversary of Kargil Vijay Diwas
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jul 22, 2024, 1:37 PM IST

ಶ್ರೀನಗರ: 25ನೇ ವರ್ಷದ ಕಾರ್ಗಿಲ್​ ವಿಜಯ್​ ದಿವಸ್​ ಆಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 26ರಂದು ಲಡಾಖ್​ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1999ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್​ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ 25 ವರ್ಷಗಳಾಗಿದ್ದು, ಈ ಬಾರಿ ರಜತ ಜಯಂತಿ (ಬೆಳ್ಳಿ ಮಹೋತ್ಸವ)ಮಹೋತ್ಸವವಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಜು 24ರಿಂದ 26ರ ವರೆಗೆ ಎರಡು ದಿನಗಳ ಕಾಲ ಈ ರಜತ ಜಯಂತಿ ಆಚರಣೆ ಆಯೋಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಲಡಾಖ್​ ಪ್ರಾಂತ್ಯಕ್ಕೆ ಆಗಮಿಸುವ ಕುರಿತು ಮಾಹಿತಿ ನೀಡಿರುವ ಹಿರಿಯ ಸೇನಾ ಅಧಿಕಾರಿ, ಜುಲೈ 26ರಂದು ಪ್ರಧಾನಿ ಬೆಳಗ್ಗೆ ಡ್ರಾಸ್​ ಬ್ರಿಗೇಡ್​ ಹೆಲಿಪ್ಯಾಡ್​ಗೆ ಬಂದಿಳಿಯಲಿದ್ದಾರೆ. ಸೇನಾ ಅಧಿಕಾರಿಗಳು ಅವರನ್ನು ಸ್ವಾಗತಿಸಲಿದ್ದು, ಅವರು ಕಾರ್ಗಿಲ್​ ವಾರ್​ ಮೆಮೋರಿಯಲ್​ಗೂ ಮುನ್ನ ಕೊಂಚ ವಿಶ್ರಾಂತಿ ಪಡೆಯಲಿದ್ದಾರೆ ಎಂದರು.

ಈ ಭೇಟಿ ವೇಳೆ ಅವರು, ವೀರ ಯೋಧರಿಗೆ ಪುಷ್ಪಾರ್ಚನೆ ಸಮಾರಂಭದಲ್ಲಿ ಭಾಗಿಯಾಗಲಿದ್ದು, 'ಶಾಹೀದ್​​ ಮಾರ್ಗ್'​ಗೆ ಭೇಟಿ ನೀಡಲಿದ್ದಾರೆ. ಕಾರ್ಗಿಲ್​ ಯುದ್ಧ ಕುರಿತು ಮಾಹಿತಿ ಪಡೆಯಲಿದ್ದಾರೆ. ಬಳಿಕ ಗ್ರೂಪ್​ ಫೋಟೋಗ್ರಾಫ್​​ದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅವರು 'ವೀರ್​ ನಾರಿ' (ಯುದ್ಧದಲ್ಲಿ ಮಡಿದ ಯೋಧರ ವಿಧವಾ ಪತ್ನಿಯರು) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ 'ವೀರ್​ ಭೂಮಿ'ಗೆ ಭೇಟಿ ನೀಡಲಿದ್ದಾರೆ. ಜೊತೆಗೆ 'ಶಿನ್ಕುಲ್​ ಲಾ ಟನಲ್'​ ಅನ್ನು ವರ್ಚುವಲ್​ ಆಗಿ ಉದ್ಘಾಟಿಸಲಿದ್ದಾರೆ.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸಿದ್ಧತೆ ಕುರಿತು ಭಾನುವಾರ ಲೆ ಗವರ್ನರ್​ ಬ್ರಿಗೇಡಿಯರ್​ (ನಿವೃತ್ತ) ಬಿಡಿ ಮಿಶ್ರಾ, ಸೆಕ್ರೆಟರಿಯಟ್​ಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಡ್ರಾಸ್​ ಹೆಲಿಪ್ಯಾಡ್, ಮೋಟರ್​ಕೇಡ್​ ಸಿದ್ಧತೆ ಮತ್ತು ಪುಷ್ಪಾರ್ಚನೆ ಸೇರಿದಂತೆ ಹಲವು ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಧಾನಿ ಭೇಟಿ ಹಿನ್ನೆಲೆ ಎಲ್ಲಾ ಸಿದ್ಧತೆಗಳನ್ನು ಕಾಲ ಮಿತಿಯೊಳಗೆ ಮುಗಿಸುವಂತೆ ಎಲ್​ಜಿ ಮಿಶ್ರಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಸಿದ್ಧತೆ ಕುರಿತು ಜೂನ್​ 24ರಂದು ಅವರು ಪರಿಶೀಲನೆ ನಡೆಸಲಿದ್ದಾರೆ. ಜುಲೈ 23ರಂದು ಸೇನಾ, ಪೊಲೀಸ್​ ಮತ್ತು ನಾಗರಿಕ ಆಡಳಿತ ಜೊತೆಗೆ ಸಮನ್ವಯಗೊಳಿಸಲು ಎಸ್​ಪಿಜಿ ನಾಳೆ (ಜುಲೈ 23) ಕಣಿವೆ ರಾಜ್ಯಕ್ಕೆ ಬಂದಿಳಿಯಲಿದೆ.

ಇದನ್ನೂ ಓದಿ: ಕಾರ್ಗಿಲ್ ಯುದ್ಧದಲ್ಲಿ ಬೆಳಗಾವಿಯ 7 ವೀರಯೋಧರು ಹುತಾತ್ಮ: ಕುಟುಂಬಸ್ಥರಿಗೆ ಕೊಟ್ಟ ಮಾತು ಮರೆತಿವೆಯಾ ಸರ್ಕಾರಗಳು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.