ETV Bharat / bharat

ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್​​ ಉದ್ಘಾಟಿಸಲಿರುವ ಪ್ರಧಾನಿ: ಈ ವಿವಿಯಲ್ಲಿ ಏನೆಲ್ಲ ಸೌಲಭ್ಯಗಳಿವೆ ಗೊತ್ತಾ? - PM to inaugurate Nalanda VV campus

author img

By ETV Bharat Karnataka Team

Published : Jun 19, 2024, 8:11 AM IST

ಎಲ್ಲ ಸೌಲಭ್ಯಗಳಿರುವ ನಳಾಂದ ವಿವಿ ಹೊಸ ಕ್ಯಾಂಪಸ್​ ಅನ್ನು ಪ್ರಧಾನಿ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ. ಇಲ್ಲಿ ಹಲವು ಹೊಸ ಸೌಲಭ್ಯಗಳನ್ನು ಅತ್ಯಾಧುನಿಕ ರೀತಿಯಲ್ಲಿ ಕಲ್ಪಿಸಲಾಗಿದೆ.

PM Modi to inaugurate Nalanda University campus in Bihar today
ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್​​ ಉದ್ಘಾಟಿಸಲಿರುವ ಪ್ರಧಾನಿ (ANI)

ನವದೆಹಲಿ: ಬಿಹಾರದ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉದ್ಘಾಟಿಸಲಿದ್ದಾರೆ. ಪಿಎಂಒ ನೀಡಿರುವ ಪ್ರಕಟಣೆಯ ಪ್ರಕಾರ, ಪ್ರಧಾನಿ ಅವರು ಬೆಳಗ್ಗೆ 9.45 ರ ಸುಮಾರಿಗೆ ನಳಂದಕ್ಕೆ ಭೇಟಿ ನೀಡಲಿದ್ದಾರೆ. ನಳಂದದ ಪುರತಾನ ವಿವಿ ಸೈಟ್​​ ಅನ್ನು 2016 ರಲ್ಲಿ ವಿಶ್ವಸಂಸ್ಥೆ ಹೆರಿಟೇಜ್ ಸೈಟ್ ಎಂದು ಘೋಷಣೆ ಮಾಡಲಾಗಿತ್ತು.

ಬೆಳಗ್ಗೆ 10.30ರ ಸುಮಾರಿಗೆ ಪ್ರಧಾನಿ ಮೋದಿ ನಳಂದ ನೂತನ ಕ್ಯಾಂಪಸ್‌ ಉದ್ಘಾಟಿಸುವರು. ಈ ಸಂದರ್ಭದಲ್ಲಿ ನಡೆಯುವ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ 17 ದೇಶಗಳ ಮಿಷನ್ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಹೊಸ ಕ್ಯಾಂಪಸ್​ನಲ್ಲಿ ಏನೇನೆಲ್ಲ ಸೌಲಭ್ಯಗಳಿವೆ: ಕ್ಯಾಂಪಸ್‌ನಲ್ಲಿ 40 ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳನ್ನ ನಿರ್ಮಾಣ ಮಾಡಲಾಗಿದೆ. ಒಟ್ಟು 1900 ಆಸನಗಳ ಸಾಮರ್ಥ್ಯವಿದೆ. ಇದು ತಲಾ 300 ಆಸನಗಳ ಸಾಮರ್ಥ್ಯದ ಎರಡು ಸಭಾಂಗಣಗಳನ್ನು ಹೊಂದಿದೆ. ಸುಮಾರು 550 ವಿದ್ಯಾರ್ಥಿಗಳು ಇರುವ ಸಾಮರ್ಥ್ಯದ ಹಾಸ್ಟೆಲ್ ಅನ್ನು ಹೊಂದಿದೆ. ಅಂತಾರಾಷ್ಟ್ರೀಯ ಕೇಂದ್ರ, 2000 ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವ ಆಂಫಿಥಿಯೇಟರ್, ಅಧ್ಯಾಪಕರ ಕ್ಲಬ್ ಮತ್ತು ಕ್ರೀಡಾ ಸಂಕೀರ್ಣ ಸೇರಿದಂತೆ ಹಲವಾರು ಇತರ ಸೌಲಭ್ಯಗಳನ್ನು ಹೊಂದಿದೆ.

ಕ್ಯಾಂಪಸ್ ಒಂದು 'ನೆಟ್ ಝೀರೋ' ಗ್ರೀನ್ ಕ್ಯಾಂಪಸ್ ಆಗಿದೆ. ಸೌರ ಸ್ಥಾವರಗಳು, ದೇಶೀಯ ಮತ್ತು ಕುಡಿಯುವ ನೀರಿನ ಸಂಸ್ಕರಣಾ ಘಟಕಗಳು, ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ನೀರಿನ ಮರುಬಳಕೆ ಘಟಕ, 100 ಎಕರೆ ಜಲಮೂಲಗಳು ಮತ್ತು ಇತರ ಅನೇಕ ಪರಿಸರ ಸ್ನೇಹಿ ಸೌಲಭ್ಯಗಳೊಂದಿಗೆ ಸ್ವಾವಲಂಬಿಯಾಗಿರುವಂತೆ ನಿರ್ಮಾಣ ಮಾಡಲಾಗಿದೆ.

ವಿಶ್ವವಿದ್ಯಾನಿಲಯವನ್ನು ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ (EAS) ದೇಶಗಳ ನಡುವಿನ ಸಹಯೋಗವಾಗಿ ನಿರ್ಮಾಣ ಮಾಡಲಾಗಿದೆ. ಇತಿಹಾಸದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಸುಮಾರು 1600 ವರ್ಷಗಳ ಹಿಂದೆ ಸ್ಥಾಪಿಸಲಾದ ಮೂಲ ನಳಂದಾ ವಿಶ್ವವಿದ್ಯಾನಿಲಯವು ವಿಶ್ವದ ಮೊದಲ ವಸತಿ ಸೌಲಭ್ಯ ಹೊಂದಿದ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿತ್ತು.

ಇದನ್ನು ಓದಿ: ಕ್ರೀಡಾ ಸಂಕೀರ್ಣ ಪ್ರಧಾನಿ ದಿಢೀರ್​ ಭೇಟಿ ಕಾಮಗಾರಿ ವೀಕ್ಷಣೆ: ವಾರಾಣಾಸಿಯಲ್ಲಿ ಮೋದಿ - surprise visits PM MODI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.