ETV Bharat / bharat

ಸಾಮಾಜಿಕ ಮಾಧ್ಯಮಗಳಿಂದ 'ಮೋದಿ ಕಾ ಪರಿವಾರ್'​ ತೆಗೆದು ಹಾಕುವಂತೆ ಪ್ರಧಾನಿ ಮನವಿ - Modi ka Parivar - MODI KA PARIVAR

ಸಾಮಾಜಿಕ ಮಾಧ್ಯಮಗಳಿಂದ 'ಮೋದಿ ಕಾ ಪರಿವಾರ್'​ ತೆಗೆದು ಹಾಕುವಂತೆ ಪ್ರಧಾನಿ ಮೋದಿ ಅವರು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ETV Bharat)
author img

By PTI

Published : Jun 12, 2024, 9:07 AM IST

ನವದೆಹಲಿ: ಇತ್ತೀಚಿಗಷ್ಟೇ ಮುಕ್ತಾಯಗೊಂಡ 2024ರ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಯ ಮೈತ್ರಿಕೂಟಕ್ಕೆ ಬಹುಮತ ನೀಡಿದ ಜನರಿಗೆ ಮತ್ತು ಬೆಂಬಲಿಗರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ಸಮರ್ಪಣೆ ಮಾಡಿದ್ದಾರೆ. ಜತೆಗೆ ಸಾಮಾಜಿಕ ಮಾಧ್ಯಮಗಳಿಂದ 'ಮೋದಿ ಕಾ ಪರಿವಾರ್'​ (ಮೋದಿ ಕುಟುಂಬ) ತೆಗೆದು ಹಾಕುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಮೋದಿ, ಚುನಾವಣಾ ಪ್ರಚಾರದ ವೇಳೆ ದೇಶಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೆಸರುಗಳ ಮುಂದೆ 'ಮೋದಿ ಕಾ ಪರಿವಾರ್' ಎಂದು ಬರೆದು ಕೊಂಡಿದ್ದಾರೆ. ಇದರಿಂದ ನನಗೆ ಸಾಕಷ್ಟು ಶಕ್ತಿ ಬಂದಿದೆ. ಸತತ ಮೂರನೇ ಬಾರಿಗೆ ಜನರು ಎನ್‌ಡಿಎಗೆ ಬಹುಮತ ನೀಡಿದ್ದಾರೆ. ರಾಷ್ಟ್ರದ ಸುಧಾರಣೆ ಮತ್ತು ಒಳಿತಿಗಾಗಿ ಕೆಲಸ ಮಾಡಲು ನಮಗೆ ಜನರು ಆದೇಶವನ್ನು ನೀಡಿದ್ದಾರೆ."

"ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಿದ ಭಾರತದ ಜನರಿಗೆ ಮತ್ತೊಮ್ಮ ಧನ್ಯವಾದ ಹೇಳಲು ಬಯಸುತ್ತೇನೆ. ಇದೀಗ ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸೇರಿಸಲಾದ 'ಮೋದಿ ಕಾ ಪರಿವಾರ್' ತೆಗೆದು ಹಾಕುವಂತೆ ವಿನಂತಿಸುತ್ತೇನೆ. ಇದರಿಂದ ಹೆಸರು ಬದಲಾಗಬಹುದು ಆದರೆ, ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಕುಟುಂಬವಾಗಿ ನಮ್ಮ ಬಂಧವು ಗಟ್ಟಿಯಾಗಿ ಮತ್ತು ಮುರಿಯದೇ ಉಳಿಯಲಿದೆ ಎಂದು ಬರೆದುಕೊಂಡಿದ್ದಾರೆ

ಅಭಿಯಾನಕ್ಕೆ ಕಾರಣ?: ವಾಸ್ತವವಾಗಿ, ಲೋಕಸಭೆ ಚುನಾವಣೆಗೂ ಮುನ್ನ, ಆರ್‌ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ಭಾಷಣವೊಂದರಲ್ಲಿ 'ನರೇಂದ್ರ ಮೋದಿಯವರಿಗೆ ಯಾವುದೇ ಕುಟುಂಬವಿಲ್ಲ' ಅದಕ್ಕಾಗಿಯೇ ಅವರು ಪಿತ್ರಾರ್ಜಿತ ಮತ್ತು ಕುಟುಂಬದ ರಾಜಕಾರಣವನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಇದಾದ ಬಳಿಕ, ಬಿಜೆಪಿ ಸದಸ್ಯರು ಮತ್ತು ಪ್ರಧಾನಿ ಮೋದಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರುಗಳ ಮುಂದೆ 'ಮೋದಿ ಕಾ ಪರಿವಾರ್​' ಎಂದು ಬರೆದುಕೊಳ್ಳುವುದರ ಮೂಲಕ ಅಭಿಯಾನ ಆರಂಭಿಸಿದ್ದರು. ಇದೇ ವಿಚಾರವಾಗಿ ಸಭೆಗಳಲ್ಲಿ ಪ್ರಧಾನಿ ಮೋದಿ ಅವರು ಕೂಡ ಭಾರತದ ಜನರೇ ತಮ್ಮ ಕುಟುಂಬ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಲ್ಲೆ ಈ ಅಭಿಯಾನಕ್ಕೆ ಮೋದಿ ಬೆಂಬಲಿಗರು ಮತ್ತು ಕಾರ್ಯಕರ್ತರು ಸೇರಿದಂತೆ ಅನೇಕ ಜನರು ಭಾರೀ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ: ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್​ ಉಪೇಂದ್ರ ದ್ವಿವೇದಿ ನೇಮಕ - Lt Gen Upendra Dwivedi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.