ETV Bharat / bharat

ಸಂಸದೀಯ ಸ್ಥಾಯಿ ಸಮಿತಿಗಳ ರಚನೆ: ರಕ್ಷಣಾ ಸಮಿತಿಯಲ್ಲಿ ರಾಹುಲ್​ ಗಾಂಧಿ - Parliamentary Standing Committees

author img

By ETV Bharat Karnataka Team

Published : 4 hours ago

ಪ್ರತಿ ಸಂಸದೀಯ ಸಮಿತಿಯಲ್ಲೂ ರಾಜ್ಯಸಭಾ ಮತ್ತು ಲೋಕಸಭೆಯ ಸದಸ್ಯರಿದ್ದಾರೆ. ನಾಲ್ಕು ಪ್ರಮುಖ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್​​ಗೆ ನೀಡಲಾಗಿದೆ.

Parliamentary Standing Committees for 2024-2025 were constituted
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ (ANI)

ನವದೆಹಲಿ: 2024-2025ರ ಇಲಾಖಾವಾರು ಸಂಸದೀಯ ಸ್ಥಾಯಿ ಸಮಿತಿಗಳನ್ನು ಗುರುವಾರ ರಚಿಸಲಾಗಿದ್ದು, 24 ಸ್ಥಾಯಿ ಸಮಿತಿಗಳ ಪೈಕಿ ಕಾಂಗ್ರೆಸ್​ಗೆ 4 ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ರಕ್ಷಣಾ ಸಮಿತಿಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಸದಸ್ಯರಾಗಿದ್ದಾರೆ. ಪ್ರತಿ ಸಮಿತಿಯಲ್ಲೂ ರಾಜ್ಯಸಭಾ ಮತ್ತು ಲೋಕಸಭೆಯ ಸದಸ್ಯರಿದ್ದಾರೆ.

ಮಾಜಿ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ರಾಹುಲ್ ಗಾಂಧಿ, ಹ್ಯಾರಿಸ್ ಬೀರನ್, ಸಾಮಿಕ್ ಭಟ್ಟಾಚಾರ್ಯ, ಅಜಯ್ ಮಾಕನ್, ಡೆರೆಕ್ ಒ’ಬ್ರೇನ್, ನಬಮ್ ರೆಬಿಯಾ, ನೀರಜ್ ಶೇಖರ್, ಕಪಿಲ್ ಸಿಬಲ್, ಜಿ.ಕೆ.ವಾಸನ್ ಮತ್ತು ಸಂಜಯ್ ಯಾದವ್ ಸಮಿತಿಯ ಸದಸ್ಯರಾಗಿದ್ದಾರೆ.

ಶಿಕ್ಷಣ, ಮಹಿಳೆ, ಮಕ್ಕಳು, ಯುವ ಮತ್ತು ಕ್ರೀಡಾ ಸಮಿತಿಯ ಹೊಣೆಯನ್ನು ದಿಗ್ವಿಜಯ್​ ಸಿಂಗ್​ಗೆ ನೀಡಲಾಗಿದೆ. ಕೃಷಿ, ಪಶು ಸಂಗೋಪನೆ, ಆಹಾರ ಸಂಸ್ಕರಣೆ ಸಮಿತಿಯ ಜವಾಬ್ದಾರಿಯನ್ನು ಚರಂಜಿತ್​ ಸಿಂಗ್​ ಚನ್ನಿ ಅವರಿಗೆ ನೀಡಲಾಗಿದೆ. ಗ್ರಾಮೀಣ, ಪಂಚಾಯತ್​ ರಾಜ್​ ಸಮಿತಿಗೆ ಸಪ್ತಗಿರಿ ಶಂಕರ್​ ಉಲಕ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿ ಮುಖ್ಯಸ್ಥರಾಗಿ ಶಶಿ ತರೂರು ಕಾರ್ಯ ನಿರ್ವಹಿಸಲಿದ್ದಾರೆ.

ಬಿಜೆಪಿಯ ರಾಧಾ ಮೋಹನ್ ಸಿಂಗ್ ರಕ್ಷಣಾ ಸಮಿತಿಯ ಮುಖ್ಯಸ್ಥರಾಗಿದ್ದು, ಭರ್ತೃಹರಿ ಮಹತಾಬ್ ಅವರು ಹಣಕಾಸು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅನುರಾಗ್ ಠಾಕೂರ್​ ಮತ್ತು ರಾಜೀವ್​ ಪ್ರತಾಪ್​ ರೂಬಿ ಅವರಿಗೆ ಕ್ರಮವಾಗಿ ಕಲ್ಲಿದಲು, ಗಣಿ ಮತ್ತು ಉಕ್ಕು ಹಾಗೂ ಜಲ ಸಂಪನ್ಮೂಲ ಸಮಿತಿ ನೀಡಲಾಗಿದೆ. ಬಿಜೆಪಿ ಸದಸ್ಯ ನಿಶಿಕಾಂತ್​ ದುಬೆ ಅವರಿಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ರಾಧಾ ಮೋಹನ್​ ದಾಸ್​ ಅಗರ್ವಾಲ್ ಗೃಹ ವ್ಯವಹಾರ ಸಮಿತಿ ಅಧ್ಯಕ್ಷರಾಗಿದ್ದು, ಟಿಎಂಸಿಯ ಡೊಲಾ ಸೇನ್​ ವಾಣಿಜ್ಯ ಸಮಿತಿ ಮುಖ್ಯಸ್ಥರಾಗಿದ್ದಾರೆ.

ಸಮಾಜವಾದಿ ಪಕ್ಷದ ರಾಮ್​ ಗೋಪಾಲ್​ ಯಾದವ್​​ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿ ಮುಖ್ಯಸ್ಥರಾದರೆ, ಡಿಎಂಕೆಯ ತಿರುಚಿ ಶಿವ ಕೈಗಾರಿಕಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಸಂವಹನ ಮತ್ತು ಐಟಿ ಸಮಿತಿ ಸದಸ್ಯರಾಗಿ ಸಮಾಜವಾದಿ ಪಕ್ಷದ ಜಯಾ ಬಚ್ಚನ್​, ಬಿಜೆಡಿಯ ಸುಶ್ಮಿತ್ ಪಾತ್ರ ಮತ್ತು ಕಾಂಗ್ರೆಸ್‌ನ ಕೆಟಿಎಸ್ ತುಳಸಿ, ಬಿಜೆಪಿ ಸಂಸದರಾದ ಅನಿಲ್ ಬಲೂನಿ, ಕಂಗನಾ ರನೌತ್ ಮತ್ತು ಪೂನಂ ಮತ್ತು ಟಿಎಂಸಿಯ ಮಹುವಾ ಮೊಯಿತ್ರಾ ಇರಲಿದ್ದಾರೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರನ್ನು ಯಾವುದೇ ಸಮಿತಿಯಲ್ಲಿ ಹೆಸರಿಸಲಾಗಿಲ್ಲ. ಬಿಜೆಪಿ ಮೈತ್ರಿಯ ಟಿಡಿಪಿ ಮತ್ತು ಜನತಾ ದಳ(ಯು) ಎನ್​ಸಿಪಿಯ ಸದಸ್ಯರು ಪ್ರತಿ ಸಮಿತಿಯಲ್ಲಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಸೈನಿಕರ ಪ್ರಾಣ ರಕ್ಷಿಸುವ ಹಗುರ​ ಬುಲೆಟ್ ಪ್ರೂಫ್ ಜಾಕೆಟ್‌ 'ಅಭೇದ್'​ ಅಭಿವೃದ್ಧಿಪಡಿಸಿದ DRDO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.