ETV Bharat / bharat

ಸಂಗೀತ ಲೋಕದ ಪ್ರಕಾಶಮಾನ ನಕ್ಷತ್ರ ಮರೆ: ಜಾಕಿರ್ ಹುಸೇನ್ ನಿಧನಕ್ಕೆ ಪಂಡಿತ್ ರೋನು ಮಜುಮ್ದಾರ್ ಕಂಬನಿ - PANDIT RONU MAJUMDAR

ಭಾರತದ ಉತ್ತಮ ಕೊಳಲು ವಾದಕ ಪಂಡಿತ್ ರೋನು ಮಜುಮ್ದಾರ್ ಅವರು ತಬಲಾ ಮಾಂತ್ರಿಕ ಉಸ್ತಾದ್​ ಜಾಕಿರ್ ಹುಸೇನ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಗೌರವ ಸಲ್ಲಿಸಿದ್ದಾರೆ. ಅವರೊಂದಿಗೆ ತಮ್ಮ ಬಾಂಧ್ಯವ್ಯದ ಬಗ್ಗೆ ಮಜುಂದಾರ್ ಹಂಚಿಕೊಂಡಿದ್ದಾರೆ.

PANDIT RONU MAJUMDAR  TABLA PLAYER  USTAD ZAKIR HUSSAIN  CLASSICAL MUSIC
ಸಂಗೀತ ಲೋಕದ ಪ್ರಕಾಶಮಾನ ನಕ್ಷತ್ರ ಮರೆ: ಜಕೀರ್ ಹುಸೇನ್ ನಿಧನಕ್ಕೆ ಪಂಡಿತ್ ರೋನು ಮಜುಮ್ದಾರ್ ಕಂಬನಿ (ETV Bharat)
author img

By ETV Bharat Karnataka Team

Published : Dec 16, 2024, 11:00 AM IST

ಮುಂಬೈ: ತಬಲಾ ಮಾಂತ್ರಿಕ ಉಸ್ತಾದ್​ ಜಾಕಿರ್​ ಹುಸೇನ್​​ ಅವರ ನಿಧನಕ್ಕೆ ಕೊಳಲು ವಾದಕ ಪಂಡಿತ್​​ ರೋನು ಮಜುಮ್ದಾರ್ ಅವರು ಸಂತಾಪ ಸೂಚಿಸಿದ್ದಾರೆ.

ಈಟಿವಿ ಭಾರತ್​ಗೆ ಪ್ರತ್ಯೇಕವಾಗಿ ಕರೆ ಮಾಡಿ ಮಾತನಾಡಿದ ಮಜುಂದಾರ್​ ಅವರು, "ಜಾಕಿರ್​ ಹುಸೇನ್​ ಅವರ ನಿಧನ ಸಂಗೀತ ಲೋಕವನ್ನು ದಿಗ್ಭ್ರಮೆಗೊಳಿಸಿದೆ. ನನಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇದು ತುಂಬಾ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.

"ಸಂಗೀತ ಲೋಕದ ಉಜ್ವಲ ತಾರೆ ಮರೆಯಾಯಿತು. ನಾನು, ಜಾಕಿರ್​ ಬಾಯ್​ ಮತ್ತು ಅವರ ಕುಟುಂಬದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೇನೆ. ಅವರ ಕಿರಿಯ ಸಹೋದರ ತೌಫಿಕ್ ಬಾಲ್ಯದಿಂದಲೂ ನನ್ನ ಸ್ನೇಹಿತ. ನಾನು ಎರಡು ಸೂಪರ್‌ಹಿಟ್ ಆಲ್ಬಂಗಳು ಮತ್ತು ಹಲವಾರು ಚಲನಚಿತ್ರಗಳಲ್ಲಿ ಜಾಕಿರ್ ಜೊತೆ ಕೆಲಸ ಮಾಡಿದ್ದೇನೆ" ಎಂದು ಪಂಡಿತ್ ಮಜುಂದಾರ್ ಮೆಲುಕು ಹಾಕಿದರು. ('ಹಾರ್ಟ್ ಟು ಹಾರ್ಟ್' ಮತ್ತು 'ಎಥೆರಿಯಲ್ ರಿದಮ್ಸ್ ಜನಪ್ರಿಯ ಆಲ್ಬಂಗಳು).

"1996 ರಲ್ಲಿ ನಾನು ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ ಕ್ಷಣವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ಅಂದು ನನ್ನೊಂದಿಗೆ ಇದ್ದ ರೀತಿ, ಇದಕ್ಕೂ ಮೊದಲೇ ನಾವು ಅಂದರೆ ದೀರ್ಘಕಾಲದಿಂದ ಹೀಗೆ ಇದ್ದೆವು ಎಂದು ಅನಿಸುತ್ತಿತ್ತು. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ಅವರು ಜೀವನಕ್ಕಿಂತ ದೊಡ್ಡವರು, ನಾವು ಗ್ರಹಿಸಲು ಸಾಧ್ಯವಾಗುವುದಕ್ಕಿಂತ ದೊಡ್ಡ ವ್ಯಕ್ತಿತ್ವ" ಎಂದು ರೋನು ಮಜುಮ್ದಾರ್ ಜಾಕಿರ್ ಅವರೊಂದಿಗೆ ಕಳೆದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಾಕಿರ್​: ಸೋಮವಾರ ಮುಂಜಾನೆ ಹುಸೇನ್​ ಅವರ ಕುಟುಂಬವು ಅವರ ನಿಧನವನ್ನು ದೃಢಪಡಿಸಿತು. ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್‌ನಿಂದ ಜಾಕಿರ್​ ಅವರು ತಮ್ಮ 73ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು.

ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುಸೇನ್​ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಅವರನ್ನು ICUಗೆ ದಾಖಲಿಸಲಾಗಿತ್ತು. ಅವರಿಗೆ ರಕ್ತದೊತ್ತಡ ಸಮಸ್ಯೆ ಇತ್ತು ಎಂದು ಅವರ ಮ್ಯಾನೇಜರ್ ನಿರ್ಮಲಾ ಬಚಾನಿ ತಿಳಿಸಿದ್ದಾರೆ.

ಪ್ರಶಸ್ತಿಗಳ ಸರದಾರ: ಹುಸೇನ್ ಅವರಿಗೆ 1988 ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಹುಸೇನ್​ ತಮ್ಮ ವೃತ್ತಿಜೀವನದಲ್ಲಿ ನಾಲ್ಕು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ರಾಹುಲ್​ ಗಾಂಧಿ ಸಂತಾಪ: 'ಹುಸೇನ್ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದಾರೆ. ಶ್ರೇಷ್ಠ ತಬಲಾ ವಾದಕ ಉಸ್ತಾದ್ ಜಾಕಿರ್​ ಹುಸೇನ್ ಜೀ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅವರ ನಿಧನವು ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂತಾಪವಿದೆ.

"ಉಸ್ತಾದ್ ಜಾಕಿರ್ ಹುಸೇನ್ ಅವರು ತಮ್ಮ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ, ಅದು ನಮ್ಮ ನೆನಪಿನಲ್ಲಿ ಯಾವಾಗಲೂ ಜೀವಂತವಾಗಿರುತ್ತದೆ" ಎಂದು ರಾಹುಲ್​ ಗಾಂಧಿಯವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡು ಮತ್ತೆ ಅದನ್ನು ಡಿಲೀಟ್​ ಮಾಡಿದ್ದಾರೆ.

ಇದನ್ನೂ ಓದಿ: ತಬಲಾ ವಾದ ನಿಲ್ಲಿಸಿದ ಜಾಕಿರ್ ಹುಸೇನ್​: ಅಮೆರಿಕದಲ್ಲಿ ಶಾಸ್ತ್ರೀಯ ಸಂಗೀತ ದಿಗ್ಗಜ ಅಸ್ತಂಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.