ETV Bharat / bharat

ಮಂಗಳವಾರ 100ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ - BOMB THREATS FLIGHTS

ಮಂಗಳವಾರ 100ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. 16 ದಿನಗಳಲ್ಲಿ 510 ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಬೆದರಿಕೆಗಳು ಬಂದಿವೆ.

Over 100 Flights Get Bomb Threats On Tuesday
ಮಂಗಳವಾರ 100ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ (IANS)
author img

By ETV Bharat Karnataka Team

Published : Oct 30, 2024, 6:44 AM IST

ನವದೆಹಲಿ/ಮುಂಬೈ: 100ಕ್ಕೂ ಹೆಚ್ಚು ವಿಮಾನಗಳಿಗೆ ಮಂಗಳವಾರ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. 16 ದಿನಗಳಲ್ಲಿ 510 ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಬೆದರಿಕೆಗಳನ್ನು ಹಾಕಲಾಗಿದೆ.

ಸುಮಾರು 36 ಏರ್​ ಇಂಡಿಯಾ ವಿಮಾನಗಳಿಗೆ ಹಾಗೂ 35 ಇಂಡಿಗೋ ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ. ವಿಸ್ತಾರಾದ 32 ವಿಮಾನಗಳು ಸಹ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಮೂಲಗಳು ತಿಳಿಸಿವೆ. 29 ಅಕ್ಟೋಬರ್ 2024 ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ಹಲವಾರು ಏರ್ ಇಂಡಿಯಾ ವಿಮಾನಗಳು ಭದ್ರತಾ ಬೆದರಿಕೆಗಳಿಗೆ ತುತ್ತಾಗಿವೆ.

ಪ್ರೋಟೋಕಾಲ್‌ಗಳನ್ನು ಅನುಸರಿಸಿ ಸಂಬಂಧಿತ ಅಧಿಕಾರಿಗಳನ್ನು ತಕ್ಷಣವೇ ಎಚ್ಚರಿಸಲಾಯಿತು ಮತ್ತು ನಿಯಂತ್ರಕ ಅಧಿಕಾರಿಗಳ ಮಾರ್ಗದರ್ಶನದಂತೆ ಎಲ್ಲ ಭದ್ರತಾ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಏರ್‌ಲೈನ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಾಂಬ್​ ಬೆದರಿಕೆ ಕರೆ ಬಂದಿರುವುದನ್ನು ದೃಢ ಪಡಿಸಿದ ಸಂಸ್ಥೆಗಳು: ಏತನ್ಮಧ್ಯೆ ಮೂರು ವಿಮಾನಯಾನ ಸಂಸ್ಥೆಗಳು ತಮ್ಮ ಎಕ್ಸ್ ಹ್ಯಾಂಡಲ್‌ಗೆ ಬಾಂಬ್ ಬೆದರಿಕೆ ಬಂದಿರುವುದನ್ನು ದೃಢಪಡಿಸಿವೆ. ವಿಮಾನಯಾನ ಸಂಸ್ಥೆಗಳಿಂದ ಬೆದರಿಕೆ ಬಂದಿರುವುದನ್ನು ದೃಢಪಡಿಸಿದ ಬಳಿಕ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇಂಡಿಗೋ, ಏರ್ ಇಂಡಿಯಾ ಮತ್ತು ವಿಸ್ತಾರಾ ಏರ್​​​ಲೈನ್ಸ್​​ಗಳು ಸೋಮವಾರ ಬೆದರಿಕೆಗಳನ್ನು ಸ್ವೀಕರಿಸಿದ್ದು ಪರಿಶೀಲನೆಯ ನಂತರ ಅವು ಹುಸಿ ಬೆದರಿಕೆ ಕರೆಗಳು ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

14 ಎಫ್​ಐಆರ್​ಗಳನ್ನು​ ದಾಖಲಿಸಿದ ಪೊಲೀಸರು: ಏರ್‌ಲೈನ್ಸ್‌ಗಳಿಗೆ ಬಂದಿರುವ ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ನಗರ ಪೊಲೀಸರು ಅಕ್ಟೋಬರ್‌ನಲ್ಲಿ 14 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆಗಳ ನಡುವೆ, ಐಟಿ ಸಚಿವಾಲಯವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಜವಾಬ್ದಾರಿಯಿಂದ ವರ್ತಿಸಬೇಕು ಹಾಗೂ ಐಟಿ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುವಂತೆ ಮತ್ತು ತಪ್ಪು ಮಾಹಿತಿಯ ಪ್ರವೇಶವನ್ನು ತ್ವರಿತವಾಗಿ ಸರಿಪಡಿಸಿ ನಿಷ್ಕ್ರಿಯಗೊಳಿಸುವಂತೆ ಮನವಿ ಮಾಡಿಕೊಂಡಿದೆ.

ಸೂಕ್ತ ಕಾನೂನು ರಚನೆಗೆ ಚಿಂತನೆ: ಇದಲ್ಲದೇ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಕರೆಗಳನ್ನು ನಿಭಾಯಿಸಲು ಸೂಕ್ತ ಕ್ರಮಕ್ಕೆ ಮುಂದಾಗುವ ಚಿಂತನೆ ನಡೆಸಿದೆ. ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಅವರು ಮಾತನಾಡಿ, ಸುಳ್ಳು ಬಾಂಬ್ ಬೆದರಿಕೆಗಳನ್ನು ಹಾಕುವ ದುಷ್ಕರ್ಮಿಗಳನ್ನು ವಿಮಾನಯಾನದಿಂದ ನಿಷೇಧಿಸಲು ಕೇಂದ್ರ ಸೂಕ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ನಕಲಿ VPN ಬಳಸಿ ವಿಮಾನಗಳಿಗೆ ಹುಸಿ ಬಾಂಬ್​ ಬೆದರಿಕೆ: ತನಿಖೆ ವೇಳೆ IP ಅಡ್ರೆಸ್​ ಬದಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.