ETV Bharat / bharat

cVigil ಆ್ಯಪ್​ನಲ್ಲಿ 1.25 ಲಕ್ಷ ದೂರು ದಾಖಲು; ಕರ್ನಾಟಕದಲ್ಲಿ ಜನರಿಂದ 13,959 ಆಪಾದನೆ - CVIGIL APP - CVIGIL APP

ಚುನಾವಣಾ ಅಕ್ರಮಗಳನ್ನು ಬಯಲಿಗೆಳೆಯಲು ಇರುವ ಸಿ-ವಿಜಿಲ್​ ಆ್ಯಪ್​ನಲ್ಲಿ ನೀತಿ ಸಂಹಿತೆ ಜಾರಿಯಾದ 19 ದಿನಗಳಲ್ಲಿ ದೇಶಾದ್ಯಂತ 1.25 ಲಕ್ಷ ದೂರುಗಳು ದಾಖಲಾಗಿವೆ.

cVigil ಆ್ಯಪ್
cVigil ಆ್ಯಪ್
author img

By ETV Bharat Karnataka Team

Published : Apr 4, 2024, 2:39 PM IST

ನವದೆಹಲಿ: ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾರ್ಚ್​ 16 ರಿಂದ ಏಪ್ರಿಲ್​ 3ರ ವರೆಗೆ 1.25 ಲಕ್ಷ ದೂರುಗಳು ಸಿ-ವಿಜಿಲ್​ ಆ್ಯಪ್​ನಲ್ಲಿ ದಾಖಲಾಗಿದೆ. ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ದಾಖಲಾದ ಒಟ್ಟು ದೂರುಗಳಲ್ಲಿ 1,25,551 ವಿಲೇವಾರಿ ಮಾಡಲಾಗಿದೆ. ಅದರಲ್ಲೂ 1,13,481 ಆರೋಪಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲಾಗಿದೆ. ಇನ್ನೂ 388 ಪ್ರಕ್ರಿಯೆಯಲ್ಲಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣೆಯ ಸಂದರ್ಭದಲ್ಲಿ ಅವ್ಯವಹಾರಗಳು ಕಂಡುಬಂದಲ್ಲಿ ದೂರು ನೀಡಲು ಚುನಾವಣಾ ಆಯೋಗ ಸಾರ್ವಜನಿಕರಿಗಾಗಿ ಸಿ-ವಿಜಿಲ್​ ಆ್ಯಪ್​ ಪರಿಚಯಿಸಿದೆ. ಇದರ ಮೂಲಕ ಜನರು ಚಿತ್ರ ಸಮೇತ ಅಕ್ರಮದ ಬಗ್ಗೆ ದೂರು ಸಲ್ಲಿಸಬಹುದು. ದೂರು ಬಂದ ಕೆಲವೇ ನಿಮಿಷಗಳಲ್ಲಿ ಸ್ಥಳೀಯ ಪೊಲೀಸರ ಗಮನಕ್ಕೆ ತಂದಲ್ಲಿ ಸ್ಥಳದಲ್ಲೇ ಪರಿಹಾರ ಸಿಗುತ್ತದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಒಟ್ಟು 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ ನೀತಿ ಸಂಹಿತೆ ಜಾರಿಯಾದ 19 ದಿನಗಳಲ್ಲಿ ಕೇರಳದಲ್ಲಿ ಅತ್ಯಧಿಕ ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ 71,168 ದೂರುಗಳನ್ನು ಜನರು ನೀಡಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಉತ್ತರಾಖಂಡದಲ್ಲಿ 14,684, ಕರ್ನಾಟಕದಲ್ಲಿ 13,959, ಆಂಧ್ರಪ್ರದೇಶದಲ್ಲಿ 7,055, ಪಶ್ಚಿಮ ಬಂಗಾಳದಲ್ಲಿ 3,126, ರಾಜಸ್ಥಾನದಲ್ಲಿ 2,575, ತಮಿಳುನಾಡಿನಲ್ಲಿ 2,168, ಮಧ್ಯಪ್ರದೇಶದಲ್ಲಿ 1,837, ಒಡಿಶಾದಲ್ಲಿ 1,829, ಉತ್ತರ ಪ್ರದೇಶದಲ್ಲಿ 1,801 ದೂರುಗಳು ಬಂದಿವೆ.

ಕೇರಳದಲ್ಲಿ ದಾಖಲಾದ ಒಟ್ಟು 71,168 ದೂರುಗಳಲ್ಲಿ 70,929 ವಿಲೇವಾರಿ ಮಾಡಲಾಗಿದೆ. ಅದರಲ್ಲಿ 67,128 ಅನ್ನು 100 ನಿಮಿಷಗಳಲ್ಲಿ ಪರಿಹರಿಸಲಾಗಿದೆ. ಉತ್ತರಾಖಂಡದಲ್ಲಿ 14,667 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, 14,071 ದೂರುಗಳನ್ನು ನೂರೇ ನಿಮಿಷಗಳಲ್ಲಿ ಚುಕ್ತಾ ಮಾಡಲಾಗಿದೆ.

ದೇಶದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ: ದೇಶದಲ್ಲಿ ಕರ್ನಾಟಕ ಸಿ-ವಿಜಿಲ್​ ಆ್ಯಪ್​ನಲ್ಲಿ ದಾಖಲಾದ ದೂರುಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 13,959 ದೂರುಗಳು ದಾಖಲಾಗಿವೆ. ಇದರಲ್ಲಿ 13,921 ವಿಲೇವಾರಿ ಮಾಡಲಾಗಿದ್ದು, 11,908 ಆರೋಪಗಳನ್ನು ನೂರು ನಿಮಿಷಗಳಲ್ಲಿ ಪರಿಹರಿಸಲಾಗಿದೆ. ಆಂಧ್ರಪ್ರದೇಶದಲ್ಲಿ 7,052 ವಿಲೇವಾರಿಗಳಲ್ಲಿ 6,308 100 ನಿಮಿಷಗಳಲ್ಲಿ ಪರಿಹರಿಸಲಾಗಿದೆ.

ಶೂನ್ಯ, ಕಡಿಮೆ ದೂರು: ಮಿಜೋರಾಂ, ನಾಗಾಲ್ಯಾಂಡ್ ಮತ್ತು ಲಡಾಖ್‌ನಲ್ಲಿ ಶೂನ್ಯ ದೂರುಗಳು ದಾಖಲಾಗಿವೆ. ಮೇಘಾಲಯದಲ್ಲಿ 6, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ 10, ಮಣಿಪುರದಲ್ಲಿ 12, ಜಮ್ಮು ಕಾಶ್ಮೀರದಲ್ಲಿ 13, ಪುದುಚೇರಿಯಲ್ಲಿ 14, ತ್ರಿಪುರಾದಲ್ಲಿ 19 ದೂರುಗಳು ಮಾತ್ರ ದಾಖಲಾಗಿವೆ.

ಇನ್ನೂ ಪ್ರಕ್ರಿಯೆಯಲ್ಲಿರುವ ದೂರುಗಳ ಪೈಕಿ 388 ಉಳಿದಿವೆ. ಇದರಲ್ಲಿ ಕೇರಳದಲ್ಲಿ 239 ಬಾಕಿ ಇದ್ದು ಇಲ್ಲೂ ಮೊದಲ ಸ್ಥಾನದಲ್ಲಿವೆ. ಕರ್ನಾಟಕದಲ್ಲಿ 38, ಪಶ್ಚಿಮ ಬಂಗಾಳದಲ್ಲಿ 31, ತಮಿಳುನಾಡಿನಲ್ಲಿ 29, ಉತ್ತರಾಖಂಡದಲ್ಲಿ 17, ಇತರೆಡೆ ಕೆಲ ಪ್ರಕರಣಗಳು ಬಾಕಿ ಇವೆ.

cVigil ಒಂದು ಬಳಕೆದಾರ ಸ್ನೇಹಿ ಮತ್ತು ಸುಲಭವಾಗಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್ ಆಗಿದೆ. ಇದು ನಾಗರಿಕರ ಆಕ್ಷೇಪಗಳನ್ನು ಜಿಲ್ಲಾ ನಿಯಂತ್ರಣ ಕೊಠಡಿ, ಚುನಾವಣಾಧಿಕಾರಿ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳಿಗೆ ರವಾನಿಸುತ್ತದೆ. ಈ ಅಪ್ಲಿಕೇಶನ್ ಮೂಲಕ ಸಮಾಜದಲ್ಲಿ ಜಾಗೃತ ನಾಗರಿಕರು ರಾಜಕೀಯ ನಾಯಕರ ಭ್ರಷ್ಟಾಚಾರ, ಆಮಿಷ, ಅಕ್ರಮಗಳನ್ನು ತಕ್ಷಣ ಮತ್ತು ಚುನಾವಣಾಧಿಕಾರಿಗಳ ಕಚೇರಿಗೆ ಧಾವಿಸದೆ ನಿಮಿಷಗಳಲ್ಲಿ ವರದಿ ಮಾಡಬಹುದು. ಸಿ-ವಿಜಿಲ್ ಅಪ್ಲಿಕೇಶನ್‌ನಲ್ಲಿ ದೂರನ್ನು ಕಳುಹಿಸಿದ ತಕ್ಷಣ, ದೂರುದಾರರು ವಿಶಿಷ್ಟವಾದ ಐಡಿಯನ್ನು ಪಡೆದು, ಮೊಬೈಲ್‌ನಲ್ಲಿ ದೂರನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಇದನ್ನೂ ಓದಿ: ಸೋನಿಯಾ ಗಾಂಧಿ, ಅಶ್ವಿನಿ ವೈಷ್ಣವ್ ಸೇರಿ 14 ರಾಜ್ಯಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ - Sonia Gandhi takes oath

ETV Bharat Logo

Copyright © 2025 Ushodaya Enterprises Pvt. Ltd., All Rights Reserved.