ETV Bharat / bharat

ನಾಸಿಕ್​​ನಲ್ಲಿ ಹಂದಿ ಜ್ವರಕ್ಕೆ ಮಹಿಳೆ ಬಲಿ: ಇಬ್ಬರಲ್ಲಿ ಸೋಂಕು ದೃಢ, ಆತಂಕದಲ್ಲಿ ಜನ - ONE WOMAN DIED DUE TO SWINE FLU - ONE WOMAN DIED DUE TO SWINE FLU

ನಾಸಿಕ್​ನಲ್ಲಿ ಹಂದಿ ಜ್ವರದ ಸೋಂಕು ಕಾಣಿಸಿಕೊಂಡಿದ್ದು, ಒಬ್ಬ ಮಹಿಳೆ ಬಲಿಯಾಗಿದ್ದಾರೆ. ಒಬ್ಬ ಪುರುಷ ಮತ್ತು ಮಹಿಳೆಯಲ್ಲಿ ಹಂದಿ ಜ್ವರದ ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.

One Woman Died Due To Swine Flu In Nashik District
ನಾಸಿಕ್​​ನಲ್ಲಿ ಹಂದಿ ಜ್ವರಕ್ಕೆ ಮಹಿಳೆ ಬಲಿ: ಆತಂಕದಲ್ಲಿ ಜನ
author img

By ETV Bharat Karnataka Team

Published : Apr 17, 2024, 1:56 PM IST

ನಾಸಿಕ್, ಮಹಾರಾಷ್ಟ್ರ: ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ದಾತಾಲಿ ಗ್ರಾಮದಲ್ಲಿ ಹಂದಿ ಜ್ವರದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಹಂದಿ ಜ್ವರದಿಂದಾಗಿ ಮತ್ತೊಬ್ಬ ರೋಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಹಂದಿ ಜ್ವರದಿಂದ ಇಬ್ಬರು ರೋಗಿಗಳಿಗೆ ಸೋಂಕು ತಗುಲಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ಮುನ್ಸಿಪಲ್ ಕಾರ್ಪೊರೇಷನ್, ರೋಗದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಆರೋಗ್ಯ ಇಲಾಖೆಗೆ ಸನ್ನದ್ಧವಾಗಿರುವಂತೆ ಸೂಚಿಸಿದೆ.

ಆರೋಗ್ಯ ಇಲಾಖೆಯೊಂದಿಗೆ ಕೂಡಿಕೊಂಡು ಮುನ್ಸಿಪಲ್ ಕಾರ್ಪೊರೇಷನ್ ಶಂಕಿತ ಹಂದಿ ಜ್ವರದ ರೋಗಿಗಳ ಪತ್ತೆಗೆ ಮುಂದಾಗಿದೆ. ನೆಗಡಿ, ಕೆಮ್ಮು ಮತ್ತು ಜ್ವರದ ಲಕ್ಷಣಗಳಿರುವವರು ಆಸ್ಪತ್ರೆಗಳಲ್ಲಿ ತಕ್ಷಣ ಚಿಕಿತ್ಸೆ ಪಡೆಯುವಂತೆ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ.ತಾನಾಜಿ ಚವಾಣ್ ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರಸ್ತುತ ನಾಸಿಕ್‌ನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಇಂತಹ ವಾತಾವರಣದಲ್ಲಿ ಹಂದಿ ಜ್ವರದ ಸೋಂಕಿತರು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಇಬ್ಬರು ರೋಗಿಗಳಲ್ಲಿ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಒಬ್ಬ ಮಹಿಳೆ ಮತ್ತು ಪುರುಷನಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಈ ಇಬ್ಬರ ಪರೀಕ್ಷಾ ವರದಿಗಳನ್ನು ಹೆಚ್ಚಿನ ತನಿಖೆಗಾಗಿ ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ. ಇಬ್ಬರ ವರದಿಯೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ದಿಢೀರ್ ಅಂತಾ ಎಚ್ಚೆತ್ತುಕೊಂಡಿದೆ. ಈ ರೋಗಿಗಳ ಸಂಪರ್ಕಗಳ ಸ್ವ್ಯಾಬ್‌ಗಳನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ತಾಲೂಕಿನ ಸಿನ್ನಾರ ತಾಲೂಕಿನ ದಟಳ್ಳಿಯ 63 ವರ್ಷದ ಮಹಿಳೆಯೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಮಹಿಳೆಯ ವರದಿ ಕೂಡ ಪಾಸಿಟಿವ್ ಬಂದಿದೆ ಎಂದು ಅಲ್ಲಿನ ಮೂಲಗಳು ಮಾಹಿತಿ ನೀಡಿವೆ.

ಈ ಹಿಂದೆಯೂ ಕಾಣಿಸಿಕೊಂಡಿತ್ತು ಸೋಂಕು: 2022ರ ಜನವರಿಯಿಂದ ಡಿಸೆಂಬರ್ ವರೆಗೆ ನಾಸಿಕ್ ನಗರದಲ್ಲಿ ಹಂದಿ ಜ್ವರ ಕಾಣಿಸಿಕೊಂಡಿತ್ತು. ಆಗ ನಗರದಲ್ಲಿ ಸುಮಾರು 150 ಹಂದಿ ಜ್ವರದ ಸೋಂಕಿತರು ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಸೋಂಕಿನಿಂದ ಸುಮಾರು 10 ಮಂದಿ ಸಾವನ್ನಪ್ಪಿದ್ದರು. ಒಂದು ವರ್ಷದ ಬಳಿಕ ಇದೀಗ ಹಂದಿಜ್ವರ ಮತ್ತೆ ನಗರದಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಎಚ್ಚೆತ್ತುಕೊಂಡಿದೆ. ಅಗತ್ಯಬಿದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿ ಹಂದಿಜ್ವರ ಸೋಂಕಿತರಿಗಾಗಿ ಪ್ರತ್ಯೇಕ ಕೊಠಡಿಯನ್ನು ಮತ್ತೆ ಕಾರ್ಯಾರಂಭ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಯ ಬೇಡ ಎಂದು ವೈದ್ಯರ ಅಭಯ: "ನಗರದಲ್ಲಿ ಇಬ್ಬರಿಗೆ ಹಂದಿ ಜ್ವರದ ಸೋಂಕು ತಗುಲಿರುವುದು ಕಂಡು ಬಂದಿದೆ. ಪಾಲಿಕೆ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿದೆ. ಹೀಗಾಗಿ ನಾಗರಿಕರು ಭಯಪಡಬೇಡಿ. ಹಂದಿ ಜ್ವರದ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮುನ್ಸಿಪಲ್ ಕಾರ್ಪೊರೇಷನ್ ವೈದ್ಯಕೀಯ ಅಧಿಕಾರಿ ಡಾ.ತಾನಾಜಿ ಚವಾಣ್ ಮನವಿ ಮಾಡಿದ್ದಾರೆ.

ಇದನ್ನು ಓದಿ:ಹಿಮೋಫಿಲಿಯಾ ನಿಮಗೆಷ್ಟು ಗೊತ್ತು: ಈ ರೋಗ ಬರುವುದು ಯಾಕೆ?, ತಡೆಗಟ್ಟುವುದು ಹೇಗೆ? - World Hemophilia Day

ETV Bharat Logo

Copyright © 2025 Ushodaya Enterprises Pvt. Ltd., All Rights Reserved.