ETV Bharat / bharat

ಒಮ್ಮೆ ಹಾವನ್ನು ನಂಬಬಹುದು, ಬಿಜೆಪಿಯನ್ನಲ್ಲ: ಸಿಎಂ ಮಮತಾ ಬ್ಯಾನರ್ಜಿ ಕಿಡಿನುಡಿ - Mamata On BJP - MAMATA ON BJP

ನೀವು ವಿಷಕಾರಿ ಹಾವನ್ನು ನಂಬಬಹುದು, ನೀವು ಅದನ್ನು ಸಾಕಬಹುದು. ಆದರೆ, ನೀವು ಬಿಜೆಪಿಯನ್ನು ಎಂದಿಗೂ ನಂಬಬೇಡಿ. ಬಿಜೆಪಿ ದೇಶವನ್ನು ನಾಶ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

One can trust snake but not BJP, says Mamata in Cooch Behar rally
ಒಮ್ಮೆ ಹಾವನ್ನು ನಂಬಬಹುದು, ಬಿಜೆಪಿಯನ್ನಲ್ಲ: ಸಿಎಂ ಮಮತಾ ಬ್ಯಾನರ್ಜಿ ಕಿಡಿನುಡಿ
author img

By PTI

Published : Apr 4, 2024, 3:59 PM IST

ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಅನುಸರಿಸುತ್ತಿಲ್ಲ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಮ್ಮೆ ವಿಷಕಾರಿ ಹಾವನ್ನು ನಂಬಬಹುದು. ಆದರೆ, ಈ ಬಿಜೆಪಿಯನ್ನಲ್ಲ ಎಂದು ಕಿಡಿಕಾರಿದ್ದಾರೆ.

ಕೂಚ್ ಬೆಹಾರ್‌ನಲ್ಲಿ ಇಂದು ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್​ ನಾಯಕಿ ಮಮತಾ, ಕೇಂದ್ರೀಯ ತನಿಖಾ ಸಂಸ್ಥೆಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿವೆ. ಈ ಬಗ್ಗೆ ಚುನಾವಣಾ ಆಯೋಗವು ಗಮನ ಹರಿಸಬೇಕು ಮತ್ತು ಎಲ್ಲ ರಾಜಕೀಯ ಪಕ್ಷಗಳಿಗೆ ಸಮತಟ್ಟಾದ ಆಟದ ಮೈದಾನವನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯು ನಿಮ್ಮನ್ನು (ಜನತೆ) ಆವಾಸ್​ ಯೋಜನೆಗೆ ಮತ್ತೆ ಹೆಸರುಗಳನ್ನು ನೋಂದಾಯಿಸಲು ಕೇಳುತ್ತಿದೆ. ಹೆಸರುಗಳನ್ನು ಮತ್ತೆ ಏಕೆ ನೋಂದಾಯಿಸಲಾಗುತ್ತದೆ?, ಅವರು ಹೆಚ್ಚಿನ ದಾಖಲಾತಿ ಮಾಡಿಸಿ ನಂತರ ಮತ್ತೆ ಹೆಸರನ್ನೇ ತೆಗೆದುಹಾಕಲು ಬಯಸುತ್ತಿದ್ದಾರೆ. ಹೀಗಾಗಿ ನೀವು ವಿಷಕಾರಿ ಹಾವನ್ನು ನಂಬಬಹುದು, ನೀವು ಅದನ್ನು ಸಾಕಬಹುದು. ಆದರೆ, ನೀವು ಬಿಜೆಪಿಯನ್ನು ಎಂದಿಗೂ ನಂಬಬೇಡಿ. ಬಿಜೆಪಿ ದೇಶವನ್ನು ನಾಶ ಮಾಡುತ್ತಿದೆ ಎಂದು ಮಮತಾ ಆರೋಪಿಸಿದರು.

ಇದೇ ವೇಳೆ, ಕೇಂದ್ರದ ಏಜೆನ್ಸಿಗಳ ಬೆದರಿಕೆಯ ಮುಂದೆ ನಮ್ಮ ಪಕ್ಷ ಟಿಎಂಸಿ ತಲೆಬಾಗುವುದಿಲ್ಲ. ಬಿಎಸ್‌ಎಫ್ ಸ್ಥಳೀಯರನ್ನು ಹಿಂಸಿಸುತ್ತಿರುವ ನಿದರ್ಶನಗಳಿದ್ದರೆ, ಈ ಕುರಿತು ಪೊಲೀಸ್ ದೂರುಗಳನ್ನು ದಾಖಲಿಸಿ ಎಂದು ಮಹಿಳೆಯರಿಗೆ ಸಲಹೆ ನೀಡಿದರು. ಮುಂದುವರೆದು, ಕೇಂದ್ರ ತನಿಖಾ ಸಂಸ್ಥೆಗಳಾದ ಎನ್‌ಐಎ, ಆದಾಯ ತೆರಿಗೆ, ಬಿಎಸ್‌ಎಫ್ ಮತ್ತು ಸಿಐಎಸ್‌ಎಫ್ ಬಿಜೆಪಿಗಾಗಿ ಕೆಲಸ ಮಾಡುತ್ತಿವೆ. ಕೇಂದ್ರೀಯ ಸಂಸ್ಥೆಗಳು ಕೇಸರಿ ಪಾಳಯಕ್ಕಾಗಿ ಕೆಲಸ ಮಾಡುತ್ತಿರುವುದರಿಂದ ಸಮತಟ್ಟಾದ ಮೈದಾನವನ್ನು ಖಚಿತಪಡಿಸಿಕೊಳ್ಳಲು ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ. ಬಿಜೆಪಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸುತ್ತಿದೆ ಎಂದು ದೂರಿದರು.

ಬಿಜೆಪಿ ಕೇವಲ ಒಂದು ರಾಷ್ಟ್ರ, ಒಂದು ಪಕ್ಷ ಎಂಬ ತತ್ವವನ್ನು ಅನುಸರಿಸುತ್ತದೆ. ಬಿಜೆಪಿ ಒಂದು 'ಜುಮ್ಲಾ' (ಸುಳ್ಳು) ಪಕ್ಷ. ಸಿಎಎಗೆ ಸಂಬಂಧಿಸಿದಂತೆ ಸುಳ್ಳುಗಳನ್ನೇ ಹರಡುತ್ತಿದೆ. ಒಮ್ಮೆ ನೀವು (ಬಿಜೆಪಿ) ಸಿಎಎ ಜಾರಿಗೊಳಿಸಿದರೆ, ಎನ್ಆರ್​ಸಿ ಅನುಸರಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ನಾವು ಸಿಎಎ ಅಥವಾ ಎನ್ಆರ್​​ಸಿ ಎರಡನ್ನೂ ಅನುಮತಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ಬಂಗಾಳದಲ್ಲಿ 'ಇಂಡಿಯಾ' ಮೈತ್ರಿಕೂಟವಿಲ್ಲ: ಪಶ್ಚಿಮ ಬಂಗಾಳದಲ್ಲಿ 'ಇಂಡಿಯಾ' ಮೈತ್ರಿಕೂಟವಿಲ್ಲ. ಪ್ರತಿಪಕ್ಷಗಳ 'ಇಂಡಿಯಾ' ಒಕ್ಕೂಟ ರಚನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ. ಮೈತ್ರಿಯ ಹೆಸರನ್ನೂ ನಾನೇ ಕೊಟ್ಟಿದ್ದೇನೆ. ಆದರೆ, ಸಿಪಿಐ (ಎಂ) ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಗಾಗಿ ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ನೀವು ಬಯಸಿದರೆ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಪರವಾಗಿ ಮತ ಚಲಾಯಿಸಬೇಡಿ. ಸಿಪಿಐ (ಎಂ) ಮತ್ತು ಕಾಂಗ್ರೆಸ್ ಮತ್ತು ಮಿತ್ರಪಕ್ಷವಾದ ಅಲ್ಪಸಂಖ್ಯಾತ ಪಕ್ಷ (ಐಎಸ್‌ಎಫ್)ಗೆ ಒಂದೇ ಒಂದು ಮತ ಕೊಡಬೇಡಿ. ಈ ಅಲ್ಪಸಂಖ್ಯಾತ ಪಕ್ಷ (ಐಎಸ್‌ಎಫ್) ಎಐಎಂಐಎಂನಂತೆಯೇ ಇದೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಒಡೆದು ಮತ್ತು ಬಿಜೆಪಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಮಮತಾ ಟೀಕಿಸಿದರು.

ಇದನ್ನೂ ಓದಿ: ಸೋನಿಯಾ ಗಾಂಧಿ, ಅಶ್ವಿನಿ ವೈಷ್ಣವ್ ಸೇರಿ 14 ರಾಜ್ಯಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.