ETV Bharat / bharat

ಅ.17 ರಂದು ಹರಿಯಾಣ ನೂತನ ಸಿಎಂ ಆಗಿ ನಯಾಬ್​ ಸಿಂಗ್​ ಸೈನಿ ಪ್ರಮಾಣ

ಹರಿಯಾಣದಲ್ಲಿ ಹೊಸ ಸರ್ಕಾರ ರಚನೆಗೆ ಮುಹೂರ್ತ ಫಿಕ್ಸ್​ ಮಾಡಲಾಗಿದೆ. ನಯಾಬ್​ ಸಿಂಗ್​ ಸೈನಿ ಅವರು ಸಿಎಂ ನೂತನ ಆಗಿ ಪ್ರಮಾಣ ವಚನ ಸ್ವೀಕರಿಸುವ ಎಲ್ಲ ಸಾಧ್ಯತೆಗಳಿವೆ.

ಹರಿಯಾಣ ನೂತನ ಸಿಎಂ ಆಗಿ ನಯಾಬ್​ ಸಿಂಗ್​ ಸೈನಿ ಪ್ರಮಾಣ
ಹರಿಯಾಣ ನೂತನ ಸಿಎಂ ಆಗಿ ನಯಾಬ್​ ಸಿಂಗ್​ ಸೈನಿ ಪ್ರಮಾಣ (ETV Bharat)
author img

By ETV Bharat Karnataka Team

Published : Oct 12, 2024, 4:17 PM IST

ಚಂಡೀಗಢ: ಇತ್ತೀಚೆಗೆ ಮುಗಿದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದು, ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಅಕ್ಟೋಬರ್​ 17 ರಂದು ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಪಂಚಕುಲದ ಸೆಕ್ಟರ್ 5ರ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಬಗ್ಗೆ ಶನಿವಾರ ಮಾಹಿತಿ ಹಂಚಿಕೊಂಡಿರುವ ಹರಿಯಾಣದ ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಚುನಾವಣೆಯಲ್ಲಿ ಪಕ್ಷವು ನಿಚ್ಚಳ ಬಹುಮತ ಸಾಧಿಸಿದ್ದು, ಇದೇ 17 ರಂದು ಪಂಚಕುಲದ ಸೆಕ್ಟರ್ 5ರ ಪರೇಡ್ ಮೈದಾನದಲ್ಲಿ ನೂತನ ಸಿಎಂ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಡಳಿತದ ಸಿಎಂಗಳು ಭಾಗವಹಿಸಿದ್ದಾರೆ ಎಂದರು.

ಕಾಂಗ್ರೆಸ್​​ ಸೇರಿದಂತೆ ವಿಪಕ್ಷಗಳು ಲೋಕಸಭೆ ಚುನಾವಣೆಯಂತೆ ಇಲ್ಲೂ ಸೋಲು ಕಂಡಿದ್ದಾರೆ. ಅಂದು ಪ್ರಧಾನ ಮಂತ್ರಿ ಆಗಲು ಪ್ರಯತ್ನಿಸಿ ಮುಗ್ಗರಿಸಿದ್ದರು. ಈಗ ಹರಿಯಾಣದಲ್ಲಿ ಕಾಂಗ್ರೆಸ್​, ಸರ್ಕಾರ ರಚನೆ ಮಾಡೇ ಬಿಟ್ಟಿತು ಎಂದು ಬೀಗಿ, ಮುಖಭಂಗ ಅನುಭವಿಸಿದೆ. ಜನಪರ ಕಾರ್ಯಕ್ಕಾಗಿ ನಮ್ಮ ಪಕ್ಷ ಮತ್ತು ಸರ್ಕಾರ ಸದಾ ಬದ್ಧವಾಗಿರುತ್ತದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಖಟ್ಟರ್​​ ಹೇಳಿದರು.

ಸೈನಿ ಸಿಎಂ ಆಗಿ ಮುಂದುವರಿಕೆ? ಬಿಜೆಪಿಯನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದ ಹರಿಯಾಣದ ಹಂಗಾಮಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆಗಳಿವೆ. ಸೈನಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿ, ಅವರಿಗೇ ಎರಡನೇ ಬಾರಿ ಸಿಎಂ ಪಟ್ಟ ಕಟ್ಟಲು ಪಕ್ಷ ಮುಂದಾಗಿದೆ ಎಂದು ತಿಳಿದುಬಂದಿದೆ.

ಲಾಡ್ವಾ ಕ್ಷೇತ್ರದಿಂದ ಮರು ಆಯ್ಕೆಯಾಗಿರುವ ಸೈನಿ ಅವರು, ರಾಜ್ಯದಲ್ಲಿ ಕೇಸರಿ ಪಕ್ಷ ಅಧಿಕಾರವನ್ನು ಉಳಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪಕ್ಷವನ್ನು ಮುನ್ನಡೆಸಿದ ಬಗ್ಗೆ ಸೈನಿ ಅವರನ್ನು ಪ್ರಧಾನಿ ಶ್ಲಾಘಿಸಿದ್ದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಮಾಜಿ ಸಂಸದ ಸಂಜಯ್ ಭಾಟಿಯಾ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ.

ಇನ್ನು, ಹರಿಯಾಣ ವಿಧಾನಸಭೆಯ ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ನಿಚ್ಚಳ ಬಹುಮತ ಪಡೆದುಕೊಂಡಿದೆ. ಅಧಿಕಾರದ ಕನಸು ಕಂಡಿದ್ದ ಕಾಂಗ್ರೆಸ್ ಕೇವಲ 37 ಸ್ಥಾನ ಗಳಿಸಿದೆ. ದೇಶದ ಸಿರಿವಂತ ಉದ್ಯಮಿ ಸಾವಿತ್ರಿ ಜಿಂದಾಲ್ ಸೇರಿದಂತೆ ಮೂವರು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಲೋಕದಳ ಎರಡು ಸ್ಥಾನಗಳನ್ನು ಗೆದ್ದಿದೆ.

ಇದನ್ನೂ ಓದಿ: 'RSS' ವಿಜಯದಶಮಿ: ಕೆಲ ಕೆಟ್ಟ ಪಿತೂರಿಗಳು ದೇಶದ ಸಂಕಲ್ಪವನ್ನು ಪರೀಕ್ಷಿಸುತ್ತಿವೆ : ಮೋಹನ್​​​ ಭಾಗವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.