ETV Bharat / bharat

ಏ.1ಕ್ಕೆ ಎನ್​ಪಿಎಸ್​ ಲಾಗಿನ್​ ಹೊಸ ನಿಯಮ ಜಾರಿ: ಇನ್ಮುಂದೆ ಆಧಾರ್​​ ದೃಢೀಕರಣ ಕಡ್ಡಾಯ - NPS New Login Rule

author img

By ETV Bharat Karnataka Team

Published : Mar 24, 2024, 11:37 AM IST

NPS ಖಾತೆಗೆ ಲಾಗಿನ್​ ಆಗಲು ಟೂ-ಫ್ಯಾಕ್ಟರ್​ ಅಥೆಂಟಿಕೇಷನ್ ಅನ್ನು ಕಡ್ಡಾಯಗೊಳಿಸಲಾಗಿದೆ. ಏನಿದು ಹೊಸ ನಿಯಮ?, ಇದನ್ನು ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಏ.1ಕ್ಕೆ ಎನ್​ಪಿಎಸ್​ ಲಾಗಿನ್​ ಹೊಸ ನಿಯಮ ಜಾರಿ: ಇನ್ಮುಂದೆ ಆಧಾರ್​​ ದೃಢಿಕರಣ ಕಡ್ಡಾಯ

ಪ್ರಸ್ತುತ ದಿನಗಳಲ್ಲಿ ಆನ್​ಲೈನ್​ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) 'ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ' (NPS) ಖಾತೆಗೆ ಲಾಗಿನ್ ಆಗುವ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.

ಇನ್ಮುಂದೆ ಗ್ರಾಹಕರು NPS ಖಾತೆಗೆ ಲಾಗಿನ್​ ಆಗಲು ಕಡ್ಡಾಯವಾಗಿ ಆಧಾರ್​ ಆಧಾರಿತ ಟೂ-ಫ್ಯಾಕ್ಟರ್​ ಅಥೆಂಟಿಕೇಷನ್​ ಪೂರ್ಣಗೊಳಿಸಬೇಕಿದೆ. ಈ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಗ್ರಾಹಕರನ್ನು ಆನ್​ಲೈನ್​ ವಂಚನೆಗಳಿಂದ ರಕ್ಷಿಸುವುದು ಹಾಗೂ ಖಾತೆಗಳಿಗೆ ಹೆಚ್ಚುವರಿ ಭದ್ರತೆ ಒದಗಿಸುವುದು ಇದರ ಹಿಂದಿರುವ ಉದ್ದೇಶ.

ಹೊಸ ಲಾಗಿನ್ ನಿಯಮದ ಪ್ರಯೋಜನಗಳೇನು?: PFRDA ಹೊಸ NPS ಲಾಗಿನ್ ಪ್ರಕ್ರಿಯೆಯ ಕುರಿತು ಮಾರ್ಚ್ 15, 2024ರಂದು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಗ್ರಾಹಕರ ಖಾತೆಗಳಿಗೆ ಹೆಚ್ಚಿನ ಭದ್ರತೆ ಸಿಗಲಿದೆ. ಇದು ಚಂದಾದಾರರು ಮತ್ತು ಷೇರುದಾರರನ್ನೂ ರಕ್ಷಿಸುತ್ತದೆ. ವಿಶೇಷವಾಗಿ ಎನ್‌ಪಿಎಸ್ ವಹಿವಾಟುಗಳಲ್ಲಿ ಆಗುವ ವಂಚನೆಯನ್ನು ಈ ಪ್ರಕ್ರಿಯೆಯ ಮೂಲಕ ತಡೆಯಬಹುದು.

ಖಾತೆಗೆ ಲಾಗಿನ್ ಆಗುವುದು ಹೇಗೆ?: PFRDA ಸುತ್ತೋಲೆಯ ಪ್ರಕಾರ, NPS ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ (CRA) ವ್ಯವಸ್ಥೆಗೆ ಲಾಗ್​ ಇನ್ ಮಾಡುವಾಗ ಬಳಕೆದಾರರು ತಮ್ಮ ID ಮತ್ತು ಪಾಸ್‌ವರ್ಡ್ ನಮೂದಿಸಬೇಕು. ನಂತರ ಆಧಾರ್ ದೃಢೀಕರಣದ ಟೂ-ಫ್ಯಾಕ್ಟರ್​ ಅಥೆಂಟಿಕೇಷನ್​ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದರ ನಂತರ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿದ ನಂತರವೇ ಖಾತೆ ಬಳಕೆಗೆ ಅನುಮತಿ ದೊರೆಯಲಿದೆ.

NPS ಖಾತೆ ಲಾಗಿನ್ ವಿಧಾನ:

  • ಮೊದಲಿಗೆ ನೀವು NPS ಅಧಿಕೃತ ವೆಬ್‌ಸೈಟ್ https://enps.nsdl.com/eNPS/NationalPensionSystem.html ಇದಕ್ಕೆ ಭೇಟಿ ನೀಡಿ.
  • PRAIN/IPINನೊಂದಿಗೆ ವೆಬ್‌ಸೈಟ್‌ಗೆ ಲಾಗಿನ್ ಮಾಡಿ. ತಕ್ಷಣವೇ ಹೊಸ ವಿಂಡೋ ತೆರೆದುಕೊಳ್ಳುತ್ತದೆ.
  • ಹೊಸ ವಿಂಡೋದಲ್ಲಿ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ.
  • ಟೂ-ಫ್ಯಾಕ್ಟರ್​ ಅಥೆಂಟಿಕೇಷನ್​ಗಾಗಿ ಕೇಳಲಾಗುತ್ತದೆ, ಇದನ್ನು ಪೂರ್ಣಗೊಳಿಸಿ. ತಕ್ಷಣವೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ.
  • ತಕ್ಷಣವೇ ನಿಮ್ಮ NPS ಖಾತೆ ಲಾಗಿನ್​ ಆಗುತ್ತದೆ.

ಈ ತಪ್ಪು ಮಾಡಿದರೆ NPS ಖಾತೆ ಪ್ರವೇಶಿಸಲು ಸಾಧ್ಯವಿಲ್ಲ: NPS ಖಾತೆದಾರರು ಸತತವಾಗಿ 5 ಬಾರಿ ಎರಡು ಅಂಶಗಳ ದೃಢೀಕರಣ ಮಾಡಲು ವಿಫಲವಾದರೆ, ಅವನ/ಅವಳ ಖಾತೆಯನ್ನು ಲಾಕ್ ಮಾಡಲಾಗುತ್ತದೆ. ಹೀಗೆ ಆದಾಗ, ಗ್ರಾಹಕರು ತಾವು ಆರಂಭದಲ್ಲಿ ನೀಡಿರುವ ಕೆಲವು ರಹಸ್ಯ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುವ ಮೂಲಕ ಪಾಸ್ವರ್ಡ್ ರಿಸೆಟ್​ ಮಾಡಬಹುದು. ಗ್ರಾಹಕರು ರಹಸ್ಯ ಪ್ರಶ್ನೆ-ಉತ್ತರವನ್ನೂ ಮರೆತರೆ ಮತ್ತೊಂದು ವಿಧಾನವಿದೆ. ಇದಕ್ಕಾಗಿ ಬಳಕೆದಾರರು IPIN ರಿಇಶ್ಯೂಗಾಗಿ ಅರ್ಜಿ ಸಲ್ಲಿಸಬೇಕು. ಆಗ ಮಾತ್ರ NPS ಖಾತೆ ಲಾಗಿನ್​ ಮಾಡಬಹುದು. ಇದೆಲ್ಲವೂ ಬಳಕೆದಾರರ ಸುರಕ್ಷತೆಗಾಗಿ ಇರುವ ನಿಯಮಗಳು ಎಂಬುದನ್ನು ಗ್ರಾಹಕರು ಅರಿತುಕೊಳ್ಳಬೇಕು.

ಇದನ್ನೂ ಓದಿ: ನಿಮ್ಮ ಆಧಾರ್​ ​ಬಳಕೆಯ ಹಿಸ್ಟರಿ ತಿಳಿಯಬೇಕೇ?: ಹಾಗಾದ್ರೆ ಈ ಸರಳ ಹಂತಗಳನ್ನು ಅನುಸರಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.